ಮಗಳನ್ನು ಉಳಿಸಿ ಮಗಳನ್ನು ಓದಿಸಿ ಜಾಗೃತಿ ಕಾರ್ಯಕ್ರಮ

ಗದಗ   13 :   ಜಿಲ್ಲೆಯಾದ್ಯಂತ ಜನೆವರಿ 12 ರಿಂದ ಮಗಳನ್ನು ಉಳಿಸಿ ಮಗಳನ್ನು ಓದಿಸಿ ಯೋಜನೆಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕುರ್ತಕೋಟಿ ಗ್ರಾಮದಿಂದ ಚಾಲನೆ ನೀಡಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಎಸ್. ಜಿ ಸಲಗೆರೆ  ಅವರು    ಜಾನಪದ ವಾದ್ಯ, ತಮಟೆ ಬಾರಿಸುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ  ಗ್ರಾಮೀಣ ಪ್ರದೇಶದಲ್ಲಿ ಪಾಲಕರು ಕೇವಲ ಗಂಡು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡದೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಬೇಕೆಂದು ಕರೆ ನೀಡಿದರು. ಮಹಿಳೆ ಮತ್ತು ಮಕ್ಕಳಿಗಾಗಿ ಸರ್ಕಾರದಿಂದ ಅನುಷ್ಟಾನಗೊಳಿಸಿರುವ ಯೋಜನೆಗಳ ಸೌಲಭ್ಯವು ಸಮರ್ಪಕವಾಗಿ  ತಲುಪಬೇಕೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ  ಶ್ರೀ ಉಸ್ಮಾನ್ ಎ ರವರು ಮಾತನಾಡಿ ಗ್ರಾಮದ ಜನರಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಮಾತ್ತು ಆರೋಗ್ಯದ ಬಗ್ಗೆ ಕಾಳಜಿವಹಿಸಲು ಹೇಳಿದರು.
ಜನರಲ್ಲಿ ಜಾಗೃತಿ ಮೂಡಿಸಲು ಕಲಾ ತಂಡದಿಂದ ಜಾಗೃತಿ ಗೀತೆಗಳು ಮತ್ತು ಬೀದಿ ನಾಟಕ ಪ್ರದರ್ಶನ ನೇರವೇರಿತು . ಕಲಾ ತಂಡದಿಂದ ಅಸುಂಡಿ ಗ್ರಾಮ ಪಂಚಾಯತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು, ಜನರಿಗೆ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಮತಿ ಬೀಬೀ ಜಾನ್ ತಾಲೂಕ ಪಂಚಾಯತ ಉಪಾಧ್ಯಕ್ಷರು,  ಮೆಹಬುಬಜೀ ಗ್ರಾಮ ಪಂಚಾಯತ ಸದಸ್ಯರು ಮಲ್ಲಸಮುದ್ರ,   ಅಲ್ತಪ್ ಕಾಗದಗಾರ,   ಮಂಜುನಾಥ ಅಕ್ಕಿ,  ಸೋಮರೆಡ್ಡಿ ರಾಮೇನಹಳ್ಳಿ,  ರಾಘವೇಂದ್ರ ಹುಲಕೋಟಿ,   ಖಾಜುದ್ದೀನ್ ಓಲೇಕಾರ,   ಮಾಲಪ್ಪ ಮಾದರ,   ಜಯಶ್ರೀ ಅಣ್ಣಿಗೇರಿ, ಶ್ರೀಮತಿ ನೇತ್ರಾವತಿ ಪೂಜಾರ, ಶ್ರೀಮತಿ ಮಾಲವ್ವ ಖಾದಿಮನೆ ಶ್ರೀಮತಿ ದ್ರಾಕ್ಷಾಯಣಿ ವಗಣ್ಣವರ, ಶ್ರೀಮತಿ ರೇಖಾ ತಿಮ್ಮನಗೌಡ್ರ, ಶ್ರೀ ಪ್ರಕಾಶ ದೇಸಾಯಿ, ಶ್ರೀ ಭಿಮಪ್ಪ ಪೂಚಾರ ಅಸುಂಡಿ ಗ್ರಾಮ ಪಂಚಾಯತ ಸದಸ್ಯರು ,  ಜಿಲ್ಲಾ ನಿರೂಪಣಾಧಿಕಾರಿ  ಶ್ರೀಮತಿ ಡಾ|| ಎಚ್. ಎಚ್. ಕುಕನೂರ , ಅಧೀಕ್ಷಕರಾದ ಶ್ರೀಮತಿ ಲಲಿತಾ ಅಳವಂಡಿ ಉಪಸ್ಥಿತರಿದ್ದರು.  ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಶ್ರೀಮತಿ ಗಿರಿಜಾ ದೊಡ್ಡಮನಿ   ಸ್ವಾಗತಿಸಿ ನಿರೂಪಿಸಿದರು, ಮೇಲ್ವಿಚಾರಕಿ  ಶ್ರೀಮತಿ ಎರಮ್ಮ ಅವರು ವಂದಿಸಿದರು.

Leave A Reply

Your email address will not be published.