ಗದಗ : ಜನೆವರಿ 19 ರಂದು ಉದ್ಯೋಗ ಮೇಳ

ಗದಗ   13 : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ   ಜನೆವರಿ 19 ರಂದು  ಬೆಳಿಗ್ಗೆ 10.00 ರಿಂದ ಸಂಜೆ 4-00 ಗಂಟೆಯವರೆಗೆ  ನಗರದ ರೋಟರಿ ಸರ್ಕಲ್ ಹತ್ತಿರದ ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ   ರಾóóóóಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿಯಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.  ಸದರಿ ಉದ್ಯೋಗ ಮೇಳದಲ್ಲಿ  ಕೋಲಾರದ  ಎಸ್.ಬಿ.ಎಮ್.ಎಸ್ ಹೊಂಡಾ ;  ಗದಗನ ಆರ್.ಎನ್.ಎಸ್ ಮೋಟಾರ್ಸ್ ಲಿ.  ಸ್ಪಂದನಾ ಮೈಕ್ರೋ ಫೈನಾನ್ಸ್ ಪ್ರೈ ಲಿ, ಎಸ್.ಬಿ.ಐ. ಲೈಫ್ ಇನ್ಸುರನ್ಸ್ , ದೀನಬಂಧು ;  ಬೆಂಗಳೂರಿನ ಪ್ರತಿಭಾನ್ವಿತ ಇನ್ಫೋಸೋರ್ಸ ಪ್ರೈ. ಲಿ, ಅಪೋಲೋ ಮೆಡಿಸ್ಕಿಲ್ಸ್ ;  ಹುಬ್ಬಳ್ಳಿಯ ಯುರೇಕಾ ಪೋಬ್ರ್ಸ , ಜೈಕಿಸಾನ್ ಗ್ರೀನ್ ಕೇರ್ ಪ್ರೈಲಿ, ಸಿಮನ್ ಸ್ಟಾಪಿಂಗ್ ಸೊಲುಶನ್ಸ್ , ನವಭಾರತ ಪರ್ಟಿಲೈಜರ್ಸ , ರನೆ  (ಮದ್ರಾಸ) ಲಿ;  ಬಿಜಾಪುರದ ಶಿವಯೋಗಿ ಎಕೊಅಗ್ರಿ ಸೈನ್ಸ್  ಪ್ರೈಲಿ, ಹಾಸನದ ಹಿಮತಸಿಂಕಾ ಲೆನನ್ಸ್ , ಧಾರವಾಡದ ಕನೆಕ್ಟ್ ಅಟೋ ಪ್ರೈಲಿ  ಇನ್ನೂ ಮುಂತಾದ ಕಂಪನಿಗಳು ಭಾಗವಹಿಸಲಿವೆ.
ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್.ಸಿ ಪಿ.ಯು.ಸಿ, ಐಟಿಐ, ಡಿಪೆÇ್ಲೀಮಾ, ಪದವಿಧರರು, ತಾಂತ್ರಿಕ ಪದವಿಧರರು 18 ರಿಂದ 35 ವರ್ಷದೊಳಗಿನ ಪುರುಷ ಮತ್ತು ಮಹಿಳಾ ವಿಕಲಚೇತನ ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ. ಅಂಗವಿಕಲ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ & ಉದ್ಯೋಗಾವಕಾಶಕ್ಕಾಗಿ  ಧೀನಬಂಧು, ಗದಗ ಈ ಸಂಸ್ಥೆಯವರು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಾರೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, ರೆಸ್ಯೂಮೆ(ಬಯೋಡಾಟಾ)ಗಳೊಂದಿಗೆ, ಮತ್ತು ಆಧಾರ ಕಾರ್ಡ್ ಝೆರಾಕ್ಸ್‍ನೊಂದಿಗೆ ಭಾಗವಹಿಸಬಹುದು. ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. ಹಾಗೂ ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ವಿನಿಮಯ ಕಚೇರಿಯ ದೂರವಾಣಿ ಸಂಖ್ಯೆ 08372-220609, 6363330688, 9901203229, ಕ್ಕೆ ಸಂಪರ್ಕಿಸಲು  ಪ್ರಕಟಣೆ ತಿಳಿಸಿದೆ.

Leave A Reply

Your email address will not be published.