Koppal

ಬಸವರಾಜ ಹೆಸರೂರು ಅವರಿಗೆ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ 


ಕೊಪ್ಪಳ : ತುಮಕೂರಿನಲ್ಲಿ ಇತ್ತೀಚಿಗೆ ನಡೆದ ಕರ್ನಾಟಕ ನಾಟಕ ಅಕಾಡೆಮಿ ಆಯೋಜಿಸಿದ್ದ ಸಮಾರಂಭದಲ್ಲಿ 2019-20ನೇ ಸಾಲಿನ ನಾಟಕ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಕೊಪ್ಪಳದ ಬಸವರಾಜ ಹೆಸರೂರು ಸೇರಿದಂತೆ ರಾಜ್ಯದ ಹಲವರಿಗೆ ವಿವಿಧ ಪ್ರಶಸ್ತಿ ನೀಡಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ನಾಟಕ ಅಕಾಡೆಮಿಯು ನಾಟಕ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿಯನ್ನು ನೀಡುತ್ತಿದ್ದು 25 ಸಾಧಕರಿಗೆ ವಾರ್ಷಿಕ ಪ್ರಶಸ್ತಿ, ದತ್ತಿ ಪ್ರಶಸ್ತಿ ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿ ಸದಸ್ಯ ಟಿ.ಎಸ್.ಸದಾಶಿವಯ್ಯ, ಮಹಾನಗರ ಪಾಲಿಕೆ ಮೇಯರ್ ಫರೀದಾ ಬೇಗಂ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಜೀವಮಾನದ ಸಾಧನೆಗಾಗಿ ಗೌರವ ಪ್ರಶಸ್ತಿಗೆ ಭಾಜನರಾದ ಜಿ.ವಿ.ಶಾರದ, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ವಿ.ರಾಜಾರಾಂ, ನಾಟಕ ಅಕಾಡೆಮಿ ಅಧ್ಯಕ್ಷ ಆರ್.ಭೀಮಸೇನ, ರಿಜಿಸ್ಟ್ರಾರ್ ಬಸವರಾಜ ಹೂಗಾರ ಅನೇಕರು ಪಾಲ್ಗೊಂಡಿದ್ದಾರೆ.
ಬಸವರಾಜ ಹೆಸರೂರು ಅವರ ಕಿರು ಪರಿಚಯ :
ಕೊಪ್ಪಳ ತಾಲ್ಲೂಕಿನ ಕವಲೂರು ಗ್ರಾಮದವರಾಗಿದ್ದು, ನಾಟಕ ಕಲಾವಿದರು, ಸಂಗೀತ ನಿರ್ದೇಶಕರು, ಹೆಸರಾಂತ ನಟರಾಗಿದ್ದಾರೆ. ಗದಗ ಜಿಲ್ಲೆಯ ಹರ್ಲಾಪುರದಲ್ಲಿ ಇವರು ೧೯೫೬ ರಲ್ಲಿ ಜನಿಸಿ ಬಿಕಾಂ ಪದವೀಧರರಾಗಿದ್ದಾರೆ. ಇವರ ತಂದೆ ಸದಾಶಿವಪ್ಪ, ತಾಯಿ ಮಲ್ಲಮ್ಮನವರಾಗಿದ್ದಾರೆ. ಬಾಲ್ಯದಲ್ಲಿಯೇ ಸಂಗೀತ ಸೆಳುವಿಗೆ ಸಿಲುಕಿ, ಸಂಗೀತ ಕಲಿತು ನಾಟಕ ರಂಗ ಪ್ರವೇಶಿಸಿದರು. ಅಂದಿನಿಂದ ಇಲ್ಲಿಯವರೆಗೂ ರಂಗಭೂಮಿಯಲ್ಲಿ ಇರುವ ಇವರು ಸಂಗೀತ ಕಲಿತು ಸಂಗೀತ ಮಾಸ್ತರ್ ಆಗಿದ್ದಾರೆ. ಒಂದು ಕಡೆ ನಟನೆಯ ಬಗ್ಗೆ ಜಾಸ್ತಿ ಒಲವು ತೋರಿಸಿದ್ದಾರೆ. ೧೯೭೪ ರಲ್ಲಿ “ಬಂಜೆ ತೊಟ್ಟಿಲು” ನಾಟಕಕ್ಕೆ ಬಣ್ಣವನ್ನು ಹಚ್ಚಿಯೇ ಬಿಟ್ಟರೂ ಅಲ್ಲಿಂದ ಇಲ್ಲಿಯವರೆಗೆ ಇವರು ನಟಿಸಿ ರಚಿಸಿದ ನಾಟಕಗಳು, ಬಯಲಾಟಗಳು, ಧಾರವಾಹಿಗಳು, ಸಿನಿಮಾಗಳು ಪುರಾಣ ಪಠಣಕರಾಗಿಸೇವೆ ಸಲ್ಲಿಸಿದ್ದಾರೆ.
ಈ ಅರವತ್ತು ವರ್ಷಗಳಲ್ಲಿ ನೂರಾರು ನಾಟಕಗಳಿಗೆ ಬಣ್ಣ ಹಚ್ಚಿ ನೂರಾರು ನಾಟಕಗಳನ್ನು ನಿರ್ದೇಶಕರೊಂದಿಗೆ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕಲಾವಿದರೆ ಇಷ್ಟೆಲ್ಲಾ ಸಾಧನೆ ಮಾಡಿದ ಈ ಕಲಾವಿದ ಇಂದು ರಂಗಕಲಾವಿಧರಲ್ಲಿ ಸಾಕಷ್ಟು ಹೆಸರು ಮಾಡಿ ರಂಗಭೂಮಿಯಲ್ಲಿ ಹಾಲದ ಮರದಂತೆ ವಿಸ್ತಾರವಾಗಿ ಬೆಳೆದಿದ್ದಾರೆ. ಇಂತಹ ಹಿರಿಯ ಕಲಾವಿದನಿಗೆ ಪ್ರಶಸ್ತಿಗೆ ಆಯ್ಕೆ ಮಾಡಿರುವ ನಾಟಕ ಅಕಾಡೆಮಿಗೆ ಕೊಪ್ಪಳ ಜಿಲ್ಲೆಯ ಕಲಾವಿದರು, ಶಿಷ್ಯರು ಹಾಗೂ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.


Leave a Reply