BallaryBelagavibidarGadaggulburgakarwar uttar kannadaKoppalStatevijayapur

ದೇಶ – ವಿದೇಶಗಳ ಪಕ್ಷಿಗಳ ತಾಣವಾದ ಬಳ್ಳಾರಿ ನೀರಿನ ಕೆರೆ


ಬಳ್ಳಾರಿ ತಾಲ್ಲೂಕಿನ ಮೋಕ ಹೋಬಳಿ,ಸಿಂದವಾಳ ಕ್ರಾಸ್ ಬಳಿ ಇರುವ ಕುಡಿಯುವ ನೀರಿನ ಕೆರೆಗೆ ಪ್ರತಿ ವರ್ಷ ಜನವರಿ, ಫೆಬ್ರವರಿಯಲ್ಲಿ ವಿವಿಧ ತಳಿಗಳ,ಪಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಬರುತ್ತವೆ. ಯಾರೆಡು ತಿಂಗಳ ಕಾಲ,ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಆಹಾರವನ್ನು ತಿಂದು ಉಳಿದ ಸಮಯದಲ್ಲಿ ಕೆರೆಯಲ್ಲಿ ಕಲರವ  ಮಾಡುತ್ತ ಪಕ್ಷಿ ಪ್ರಿಯರ ಮನ ತಣಿಸುತ್ತಿವೆ . ಇದು ಕುಡಿಯುವ ನೀರಿನ ಕೆರೆ.ಇಲ್ಲಿ ಯಾರು ಬರದಂತೆ ರಕ್ಷಣೆ ಇರುತ್ತದೆ.. ಇದು ಹಾಲವಾರು ವರ್ಷಗಳ ಸಂಪ್ರದಾಯ ಅಗಿದೆ.ಇವು ಕೇವಲ ನಿರ್ದಿಷ್ಟ  ಸೀಜನ್ ನಲ್ಲಿ ಬರುತ್ತವೆ. ಸೀಜನ್ ಮುಗಿದು ಮೇಲೆ  ಪಕ್ಷಿಗಳೂ ತಮ್ಮ ತಮ್ಮ ಊರುಗಳಿಗೆ ಮರಳುತ್ತವೆ ಮತ್ತೆ ಎಲ್ಲವು ಖಾಲಿ ಖಾಲಿ . ಇಲ್ಲಿ ಜೋಳ ,ಭತ್ತ ,ಹೆಚ್ಚಿನ ಮಟ್ಟದಲ್ಲಿ ಬೆಳೆಯುತ್ತಾರೆ.ಈ ಪಕ್ಷಿಗಳ ಬಂದರೆ,ವರ್ಷದ ಪೂರ್ತಿ ಕಾಲ ಚನ್ನಾಗಿ ಇರುತ್ತದೆ ಎಂದು ಜನರ ಭಾವನೆ ಹೀಗಾಗಿ .ಸಾವಿರಾರು ಪಕ್ಷಿಗಳು  ಎಷ್ಟೇ ತಿಂದರು,ರೈತರು ಅವಗಳುಗೆ ತೊಂದರೆ ಮಾಡುವುದಿಲ್ಲ ಹೀಗಾಗಿ ಪಕ್ಷಿಗಳು ಮನತಣಿಯುವಂತೆ ಉಂಡು ಖುಷಿಪಡುತ್ತವೆ ,ಅದನ್ನು ನೋಡಿ ರೈತರು ಖುಷಿ ಪಡುತ್ತಾರೆ .

(ಕೆ.ಬಜಾರಪ್ಪ.ವರದಿಗಾರರು. ಬಳ್ಳಾರಿ.)


Leave a Reply