Belagavi

ಕುರುಬ ಸಮಾಜದ ಮುಖಂಡ ನಿಧನ: ಗಣ್ಯರ ಕಂಬನಿ


ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಕುರುಬ ಸಮಾಜದ ಹಿರಿಯ ನಾಯಕರು ಹಾಗೂ ಮಾಜಿ ಫೈಲ್ವಾನರಾದ ಮಡಿವಾಳಪ್ಪ ಅಡಿವೆಪ್ಪ ಗುಡೆನ್ನವರ ತಮ್ಮ 80 ನೇ ವಯಸ್ಸಿನಲ್ಲಿ ನಿಧನರಾದರು. ಇವರು ಕುರುಬ ಸಮಾಜದ ಹಿರಿಯ ನಾಯಕರಾಗಿದ್ದು, ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.

ಮೃತರು ಐವರು ಸಹೋದರಿಯರು, ಮೂವರು ಸಹೋದರ, ಮಕ್ಕಳು ಮೊಮ್ಮಕ್ಕಳ ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಮಾಜದ ಅನೇಕ ಗಣ್ಯರು ಹಾಗೂ ರಾಜಕೀಯ ನಾಯಕರು ಕಂಬಿನಿ ಮಿಡಿದಿದ್ದಾರೆ.


Leave a Reply