Belagavi

16 ರಿಂದ ಕೋವಿಡ್ 19 ಲಸಿಕೆ


ಸವದತ್ತಿ: ಕರ್ನಾಕಟ ರಾಜ್ಯಾದ್ಯಂತ ಜ.16ರಿಂದ ಜರುಗಲಿರುವ ಕೋವಿಡ್ 19 ಲಸಿಕೆ ನೀಡುವ ಮೊದಲ ಹಂತದ ಕಾರ್ಯಕ್ಕೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸರಕಾರಿ ಆಸ್ಪತ್ರೆಗಳು ಸಕಲ ತಯಾರಿ ಮಾಡಿಕೊಂಡಿವೆ. 

ಬೆಳಗಾವಿ ಜಿಲ್ಲಾಧಿಕಾರಿಗಳ ಆದೇಶದನ್ವಯ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 12 ಕೇಂದ್ರಗಳನ್ನು ನಿಯೋಜನೆ ಮಾಡಿದ್ದು, ಅದರಲ್ಲಿ ಸವದತ್ತಿ ತಾಲೂಕಾಸ್ಪತ್ರೆ, ಬೆಳಗಾವಿ ನಗರದ ಜಿಲ್ಲಾಸ್ಪತ್ರೆ, ವಂಟಮೂರಿಯ ನಗರ ಪ್ರಾಥಮಿಕ ಕೇಂದ್ರ, ಅಥಣಿ, ಹುಕ್ಕೇರಿ, ರಾಮದುರ್ಗ, ಗೋಕಾಕ್, ಚಿಕ್ಕೋಡಿ, ಬೈಲಹೊಂಗಲ, ಖಾನಾಪುರ, ರಾಯಬಾಗ ತಾಲೂಕಾಸ್ಪತ್ರೆಗಳು ಮತ್ತು ಗೋಕಾಕ್ ತಾಲೂಕಿನ ಕೊಣ್ಣುರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಅಭಿಯಾನ ನಡೆಯಲಿದೆ.

ಪ್ರತಿ ಕೇಂದ್ರಗಳಲ್ಲಿಯೂ ದಿನಕ್ಕೆ 100 ಮಂದಿಗೆ ಲಸಿಕೆ ನೀಡಲಾಗುವುದು. ಮೊದಲ ಹಂತದಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳನ್ನು ಪರಿಗಣಿಸಲಾಗುವದು. ಅವರಿಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ನೀಡಲಾಗಿರುವ ಕೋವಿಡಿ ಲಸಿಕೆ ಕೊಡಲಾಗುವುದುದೆಂದು ಜಿಲ್ಲಾಡಳಿತ ತಿಳಿಸಿದೆ.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply