Gadag

ರಾಜ್ಯ ಸರ್ಕಾರಿ “ಡಿ” ಗ್ರೂಫ್ ನೌಕರರ ಸಂಘದ ಜಿಲ್ಲಾ ಪಧಾದಿಕಾರಿಗಳ ಅಯ್ಕೆ

ಗದಗ : ಕರ್ನಾಟಕ ರಾಜ್ಯ ಸರ್ಕಾರಿ “ಡಿ” ಗ್ರುಫ್ ನೌಕರರ ಸಂಘದ ಜಿಲ್ಲಾ ಘಟಕವು ಅಸ್ತಿತ್ವಕ್ಕೆ ಬಂದಿದ್ದು ಜಿಲ್ಲೆಯ ವಿವಿಧ ಇಲಾಖೆಯ ಡಿ ಗ್ರುಫ್ ನೌಕರರು ಇತ್ತೀಚೆಗೆ ಸಭೆ ಸೇರಿ ಸಂಘದ ಪಧಾದಿಕಾರಿಗಳನ್ನು ಸರ್ವಾನುಮತದಿಂದ ಅಯ್ಕೆ ಮಾಡಲಾಯಿತು.
ನೂತನ ಸಂಘದ ಗೌರವಾಧ್ಯಕ್ಷರಾಗಿ ಕಂದಾಯ ಇಲಾಖೆಯ ಗೂಳಪ್ಪ ತಳವಾರ, ಅಧ್ಯಕ್ಷರಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಚಂದ್ರು ಬೀರಗೊಣ್ಣವರ, ಉಪಾಧ್ಯಕ್ಷರುಗಳಾಗಿ ಜಿಲ್ಲಾ ಪಂಚಾಯತನ ಚಿದಾನಂದ ಮೋನಿ, ಕಂದಾಯ ಇಲಾಖೆಯ ಎಚ್.ಐ.ಶಿಂಗಾಡಿ, ನಾಗರಾಜ ತಿಪ್ಪಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸಹಕಾರ ಇಲಾಖೆಯ ಅಮರೇಶ ಹಕ್ಕಿ, ಖಜಾಂಚಿಯಾಗಿ ಕಾರ್ಮಿಕ ಇಲಾಖೆಯ ಮನೋಹರ ಜಾಲಿಹಾಳ, ಸಹ ಕಾರ್ಯದರ್ಶಿಗಳಾಗಿ ಆರೋಗ್ಯ ಇಲಾಖೆಯ ಶರಣಯ್ಯ ವಿರಕ್ತಮಠ, ಸಹಕಾರ ಸಂಘಗಳ ಲೆಕ್ಕ ಪರಿಶೋಧಕರು ಇಲಾಖೆಯ ದಾವಲಸಾಬ ಬಾಗೇವಾಡಿ, ಪ್ರಚಾರ ಸಮಿತಿ ಕಾರ್ಯದರ್ಶಿಯಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಂ.ಟಿ. ನೇಮರಾಜ ಅವರು ಆಯ್ಕೆಯಾಗಿದ್ದಾರೆ.
ಅದೇರೀತಿ ಸಂಘಟನಾ ಕಾರ್ಯದರ್ಶಿಗಳಾಗಿ ಅಬಕಾರಿ ಇಲಾಖೆಯ ಯಲ್ಲಗೌಡ ಪಾಟೀಲ, ಹಿ.ಉಪನಿರ್ದೇಶಕರ ಕಚೇರಿ ಲೆಕ್ಕ ಪರಿಶೋಧನಾ ಇಲಾಖೆಯ ಆಶೀಷ್ ಖಂಡಪ್ಪಗೌಡ್ರ, ಜಿಲ್ಲಾ ಖಜಾನೆ ಇಲಾಖೆಯ ಮನೋಜ ಪೂಜಾರ, ಅಕ್ಷರ ದಾಸೋಹ ಇಲಾಖೆಯ ಅಕ್ಷಯ ಸಂದಿಮನಿ, ಶಿಕ್ಷಣ ಇಲಾಖೆಯ ಭೀಮರಾವ್ ತಳಕೇರಿ, ಸಮಾಜ ಕಲ್ಯಾಣ ಇಲಾಖೆಯ ಮಂಜುನಾಥ ಬಳ್ಳಾರಿ, ಜಿಲ್ಲಾ ಪಂಚಾಯತಿಯ ನಿಂಗಪ್ಪ ಚಲವಾದಿ ಹಾಗೂ ಎಸ್. ಎ. ಅಂಗಡಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉಮರಸಾಬ ತಮಾಡೆ, ಕೈಗಾರಿಕಾ ಇಲಾಖೆಯ ಪ್ರಶಾಂತ ಆಯ್ಕೆಯಾಗಿದ್ದಾರೆ.
ಮಹಿಳಾ ಕಲ್ಯಾಣ ಕಾರ್ಯದರ್ಶಿಗಳಾಗಿ ಆರೋಗ್ಯ ಇಲಾಖೆಯ ಪ್ರತಿಭಾ ಕನ್ನೂರ ಹಾಗೂ ವೀಣಾ ಹಂಡಿ, ಅಂಕಿ ಸಂಖ್ಯಾ ಇಲಾಖೆಯ ಮಹಾದೇವಿ ಚೌಡಮ್ಮನವರ, ಜಿಲ್ಲಾ ಖಜಾನೆ ಇಲಾಖೆಯ ರೇಣುಕಾ ರಂಗಪ್ಪನವರ ಹಾಗೂ ಕಾನೂನು ಸಲಹೆಗಾರರಾಗಿ ಪದ್ಮಾ ಮಾನೆ ಅವರುಗಳನ್ನು ಐದು ವರ್ಷಗಳ ಅವದಿಗೆ ಅಯ್ಕೆ ಮಾಡಲಾಗಿದೆ ಎಂದು ಎಂ.ಟಿ.ನೇಮರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker