Belagavi

ಲಿಂಗಾಯತ ಧರ್ಮ, ಸ್ವತಂತ್ರ ಧರ್ಮದ ಎಲ್ಲ ಅರ್ಹತೆಯನ್ನು ಹೊಂದಿದೆ


ಬೆಳಗಾವಿ ೧೫- ಧರ್ಮ, ಜಾತಿ, ಮತ, ಪಂಥಗಳು ಜನರನ್ನು ಒಂದುಗೂಡಿಸುವ ಕೆಲಸ ಮಾಡಬೇಕೆ ಹೊರತು, ಜನರನ್ನು ಒಡೆಯುವ ಮೂಲಕ ಸಮಾಜದ ಸ್ವಾಸ್ತö್ಯವನ್ನು ಹಾಳು ಮಾಡುವ ಕೆಲಸವನ್ನು ಮಾಡಬಾರದು. ಬೇರೆ ಧರ್ಮಗಳನ್ನು ಗೌರವಿಸುತ್ತ ತಮ್ಮ ಧರ್ಮದ ಕುರಿತು ಅಭಿಮಾನ ಹೊಂದಿರಬೇಕು. ಅತಿಯಾದ ಅಭಿಮಾನ ಕೂಡ ಅಪಾಯಕಾರಿ. ಯಾವುದೇ ಧರ್ಮ ಸ್ವತಂತ್ರ ಧರ್ಮವೆಂದು ಘೋಷಣೆ ಆಗಬೇಕಾದರೆ ಅದಕ್ಕೆ ಧರ್ಮ ಗ್ರಂಥ, ಧರ್ಮಗುರು, ವಿಶೇಷ ತತ್ವಗಳನ್ನು ಹೊಂದಿರಬೇಕು ಇಂತಹ ಎಲ್ಲವನ್ನು ಹೊಂದಿರುವ ಲಿಂಗಾಯತ ಧರ್ಮ, ಸ್ವತಂತ್ರ ಧರ್ಮದ ಎಲ್ಲ ಅರ್ಹತೆಯನ್ನು ಹೊಂದಿದೆ ಎಂದು ಪ್ರೊ. ಕೆ. ಎಸ್. ಕೌಜಲಗಿಯವರು ಇಂದಿಲ್ಲಿ ಹೇಳಿದರು.
ನಗರದ ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದವರು ಮಹಾಂತೇಶ ನಗರದಲ್ಲಿರುವ ಮಹಾಂತಭವನದಲ್ಲಿ ಮಾಸಿಕ ಅನುಭಾವ ಸತ್ಸಂಗ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕರ‍್ಯಕ್ರಮದಲ್ಲಿ ಪ್ರೊ. ಕೆ. ಎಸ್. ಕೌಜಲಗಿಯವರು ‘ಸ್ವತಂತ್ರ ಲಿಂಗಾಯಿತ ಧರ್ಮ’ ವಿಷಯ ಕುರಿತು ಮಾತನಾಡಿತ್ತ ಮೇಲಿನಂತೆ ಅವರು ಅಭಿಪ್ರಾಯ ಪಟ್ಟರು.
ಸಾನಿಧ್ಯವನ್ನು ವಹಿಸಿದ್ದ ರದ್ರಾಕ್ಷಿಮಠ ನಾಗನೂರ ಬೆಳಗಾವಿಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕೊರೊನ ಮಹಾಮಾರಿಯಿಂದಾಗಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮುಂಬರುವ ದಿನಗಳಲ್ಲಿ ಹೊರಾಟದ ನೀತಿ ಮತ್ತು ಸ್ವರೂಪದ ಕುರಿತು ಚರ್ಚೆ ನಡಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿಗೆ ಭಾಜನರಾದ ಅಡಿವೆಪ್ಪ ಇಟಗಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಅರವಿಂದ ಪರುಶೆಟ್ಟಿ ವಹಿಸಿದ್ದರು. ಬಸವರಾಜ ರೊಟ್ಟಿ ಸ್ವಾಗತಿಸಿದರು. ಮೋಹನ ಗುಂಡ್ಲೂರ ಪರಿಚಯಿಸದರು. ರಾಜು ಪದ್ಮಣ್ಣವರ ನಿರೂಪಿಸಿದರು. ಪ್ರೊ ಎಮ್. ಆರ್. ಉಳ್ಳಾಗಡ್ಡಿ, ಶಿವಾ ವಾಘುರವಾಡಿ, ಸದಾನಂದ ಬಶೆಟ್ಟಿ, ಸುಜಾತಾ ಮತ್ತಿಕಟ್ಟಿ, ಅನಸೂಯಾ ಬಶೆಟ್ಟಿ, ಮಹಾನಂದ ಪರುಶೆಟ್ಟಿ, ಬಸವರಾಜ ಭಾಗೋಜಿ, ರಾಜು ಮಗದುಮ್ ಮುಂತಾದವರು ಉಪಸ್ಥಿತರಿದ್ದರು.


Leave a Reply