Koppal

ದೂರ ಶಿಕ್ಷಣದ ಮೂಲಕ ಮ್ಯಾನೇಜ್‌ಮೆಂಟ್ ತರಬೇತಿ : ಭಾಗವಹಿಸಲು ಸೂಚನೆ


ಕೊಪ್ಪಳ ಜ.15 : ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, ಕಲಬುರ್ಗಿ ತರಬೇತಿ ಕೇಂದ್ರದ ಮೂಲಕ ಸಹಕಾರ ಸಂಘ/ಸAಸ್ಥೆಗಳ ಮತ್ತು ಸಹಕಾರ ಬ್ಯಾಂಕುಗಳ ಸಿಬ್ಬಂದಿಗೆ ಜನವರಿ 2021 ನೇ ಮಾಹೆಯಲ್ಲಿ ದೂರ ಶಿಕ್ಷಣದ ಮೂಲಕ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿಯನ್ನು ನೀಡಲಾಗುತ್ತಿದ್ದು, ಆಸಕ್ತರು ಭಾಗವಹಿಸಬಹುದು.
ತರಬೇತಿಯು 6 ತಿಂಗಳುಗಳ(180 ದಿನಗಳು) ಅವಧಿಯದ್ದಾಗಿದೆ. ತರಬೇತಿ, ನೋಂದಣಿ ಮುಂತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, ಆದರ್ಶ ನಗರ, ಸೇಡಂ ರಸ್ತೆ, ಕಲಬುರ್ಗಿ-585105, ದೂ.ಸಂ:08472-245340,

ವೆಬ್‌ಸೈಟ್   ವಿಳಾಸ: www.kscfdcm.co.in     ಇವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳದ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply