Uncategorized

ಸಂಭ್ರಮದಿಂದ ಎಳ್ಳು ಅಮವಾಸ್ಯೆ ಆಚರಿಸಿದ ರೈತರು


-ಕುಷ್ಠಗಿ : ಪ್ರತಿ  ವರ್ಷದಂತೆ ಈ ವರ್ಷವು ಕೂಡ ಮುಂಗಾರು ಮತ್ತು ಹಿಂಗಾರು ಮಳೆ ಚೆನ್ನಾಗಿ ಆಗಿದ್ದರಿಂದ ರೈತರು ತಮ್ಮ ತಮ್ಮ ಎರಿ ಹೊಲದಲ್ಲಿ ಬನ್ನಿಗುಡಕ್ಕೆ ಪಂಚ ಪಾಂಡವರನ್ನು ಹಾಗೂ ಭೂಮಿ ತಾಯಿ ಮತ್ತು ಲಕ್ಷ್ಮೀ ದೇವಿ ಪೂಜೆ ಮಾಡಿ ಹುಲ್ ಹುಲ್ಗ್ಯೋ ಚಳ್ ಚಳಂಬ್ರಿಗೋ ಎಂಬ ವಾಣಿಯೊಂದಿಗೆ ಅತ್ಯಂತ ಸಡಗರ ಸಂಭ್ರಮದಿಂದ ಭೂಮಿ ತಾಯಿಗೆ ಚರಗ ಚಲ್ಲುವುದರೊಂದಿಗೆ ನೈವೈಧ್ಯ ಮಾಡಿ ಎಳ್ಳ ಅಮವಾಸ್ಯೆ ಯನ್ನು ಆಚರಣೆ ಮಾಡಿದರು.ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ತಮ್ಮ ಗೆಳೆಯರು ಹಿತೈಷಿಗಳನ್ನು ತಮ್ಮ ಜಮೀನಿಗೆ ಪೂಜೆಗೆಬ ಕರೆಸಿ ಅಲ್ಲಿಯೇ ಊಟ ಮಾಡಿ ಸಂಬ್ರಮಿಸುವದು ಸಂಪ್ರದಾಯ. ಈ ಸಂದರ್ಭದಲ್ಲಿ ಹಲವಾರು ರೀತಿಯ ತಿಂಡಿ ತಿನುಸುಗಳನ್ನು ಮನೆಯಲ್ಲಿ ಮಾಡಿ ಕೊಂಡು ಎರಿ ಹೊಲಕ್ಕೆ ಎಲ್ಲಾ ಆಹಾರ ಪದಾರ್ಥದೊಂದಿಗೆ ಹೊಲದಲ್ಲಿ ಊಟ ಮಾಡುವದು ನಮ್ಮ ಭಾಗದ ಬಹಳ ವಿಶಿಷ್ಠ ಸಂಪ್ರದಾಯವಾಗಿದೆ ಎನ್ನುತ್ತಾರೆ .


Leave a Reply