Belagavi

ನಟಿ ಮಧುಬಾಲಾ ಜನಪ್ರಿಯ ಹಾಡುಗಳ ಕರ‍್ಯಕ್ರಮ


 

ಬೆಳಗಾವಿ ೧೬ – ನಗರದ ‘ಫ್ಯಾನ್ ಕ್ಲಬ್ ಆಫ್ ಓಲ್ಡ್ ಸಾಂಗ್ಸ್’ ಇದೇ ದಿ. ೧೭ ರವಿವಾರದಂದು ಸಾಯಂಕಾರ ೭ ಗಂಟೆಗೆ ಫೇಸ್ ಬುಕ್ ಲೈವ್ ದಲ್ಲಿ ಹಿಂದಿ ಚಿತ್ರರಂಗದ ಸೌಂದರ್ಯರಾಣಿ ಮಧುಬಾಲಾರ ಜನಪ್ರಿಯ ಹಾಡುಗಳ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಈ ಕರ‍್ಯಕ್ರಮದಲ್ಲಿ ಮಧುಬಾಲಾ ನಟಿಸಿರುವ ಚಿತ್ರಗಳ ಜನಪ್ರಿಯ ಹಾಡುಗಳನ್ನು ಕಲಾವಿದರಾದ ದೀಪಾ ಪದಕಿ, ಸೌಂದರ್ಯಾ ಪದಕಿ, ಮೇಘನಾ ಹುದ್ದಾರ, ಅಂತರಾ ಕುಲಕರ್ಣಿ ಇವರು ಹಾಡಲಿದ್ದಾರೆ. ಫ್ಯಾನ್ ಕ್ಲಬ್ ಆಫ್ ಓಲ್ಡ ಸಾಂಗ್ಸ ಬೆಳಗಾವಿ ಯಿಂದ ಫೇಸ್ ಬುಕ್ ನೇರ ಪ್ರಸಾರವಿದ್ದು ಆಸಕ್ತರು ಈ ಹಾಡುಗಳನ್ನು ಕೇಳಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರ ಮೂಲಕ ಕಲಾವಿದರನ್ನ ಪ್ರೋತ್ಸಾಹಿಸುವಂತೆ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ ಪ್ರಕಟಣೆಯಲಿ ತಿಳಿಸಿದ್ದಾರೆ.


Leave a Reply