BallaryBelagavibidarGadaggulburgakarwar uttar kannadaKoppalStatevijayapur

ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣಾ ಕಾರ್ಯಕ್ರಮ


ಕುಷ್ಠಗಿ ; ದಿನಾಂಕ 17.01.2021 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಸಾಮಾಜಿಕ ಸಂದೇಶ ಮತ್ತು ಜಾಗ್ರತಿ ಮೂಡಿಸುವ ಚಲನಚಿತ್ರ ಪ್ರದರ್ಶನ ಮತ್ತು ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣಾ ಕಾರ್ಯಕ್ರಮ ಕುಷ್ಟಗಿ ತಾಲೂಕಿನ ರೇಣುಕಾಚಾರ್ಯ ಕಲ್ಯಾಣಮಂಟಪದಲ್ಲಿ ನಡೆಯಿತು. ಸದ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಷ್ಟಗಿ ತಾಲೂಕಿನ ಶಾಸಕರಾದ ಅಮರೇಗೌಡ ಬಯ್ಯಾಪುರರವರು ಮಾತನಾಡಿ, ಸರಕಾರದವರು ಮಾಡಬೇಕಾದ ಕಾರ್ಯಕ್ರಮವನ್ನು ಧರ್ಮಸ್ಥಳ ಸಂಸ್ಥೆಯ ಅಧ್ಯಕ್ಷರಾದ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ. ತಾಲೂಕಿನಲ್ಲಿ 35 ಮಂದಿ ನಿರ್ಗತಿಕರಿಗೆ ಪ್ರತೀ ತಿಂಗಳು 750 ರೂ ದಿಂದ 1000 ದ ವರೆಗೆ ಮಾಶಾಶನ ಕೊಡುತ್ತಿದ್ದಾರೆ.ಅವರಲ್ಲಿ ಮೂಲಭೂತ ಸೌಕರ್ಯ ಕೊರತೆಯಿರುವವರಿಗೆ ಪಾತ್ರೆ ಚಾಪೆ ಹೊದಿಕೆಯನ್ನೊಳ ಗೊಂಡ ವಾತ್ಸಲ್ಯ ಕಿಟ್ ಕೊಡುತ್ತಿರುವುದು ಉತ್ತಮ ಕಾರ್ಯಕ್ರಮ ವಾಗಿದೆ. ಕುಷ್ಟಗಿ ತಾಲೂಕಿನಲ್ಲಿ 200ಕೋಟಿಗೂ ಮಿಕ್ಕಿದ ಸಾಲವನ್ನು ಸ್ವ ಸಹಾಯ ಸಂಘದ ಸದಸ್ಯರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಒದಗಿಸಿಕೊಟ್ಟಿರುತ್ತಾರೆ. ಹೀಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವುದಾಗಿ ಶಾಸಕರು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ಜಿಲ್ಲೆಯ ನಿರ್ದೇಶಕರಾದ ಮುರಳೀಧರ್ ಎಚ್ ಎಲ್ ರವರು ಮಾತನಾಡಿ ಯೋಜನೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ, ಮದ್ಯವಾಸನಿಗಳಿಗಾಗಿ ಮದ್ಯವರ್ಜನ ಶಿಬಿರ, ಸ್ವ ಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಆನ್ಲೈನ್ ತರಗತಿಗಾಗಿ ರಿಯಾಯತಿ ದರದಲ್ಲಿ ಟ್ಯಾಬ್ ಮತ್ತು ಲ್ಯಾಪ್ಟಾಪ್ ಕೊಡುವ ಕಾರ್ಯಕ್ರಮ ಮತ್ತು ಸುಜ್ಞಾನನಿಧಿ ಶಿಷ್ಯವೇತನ ಕೊಡುವ ಕಾರ್ಯಕ್ರಮ, ವಿಕಲಚೇತನರಿಗೆ ಉಪಕರಣ ಕೊಡುವ ಕಾರ್ಯಕ್ರಮ, ಇವೆಲ್ಲವನ್ನು ಅನುಷ್ಠಾನ ಮಾಡಲಾಗುತ್ತಿದೆ. ಎಂದು ಮಾಹಿತಿಯನ್ನು ನೀಡಿದರು. ಸ್ವ ಸಹಾಯ ಸಂಘದ 120 ಮಂದಿ ಸದಸ್ಯರು ಮತ್ತು ಸೇವಾ ಪ್ರತಿನಿಧಿಗಳು ಕಾಯಕ್ರಮದಲ್ಲಿ ಪಾಲ್ಗೊಂಡಿದ್ದರು. ಒಕ್ಕೂಟದ ಅಧ್ಯಕ್ಷರಾದ ಜಯಶ್ರೀಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಾಸಕರು ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಿದರು. ಯೋಜನೆಯ ಕುಷ್ಟಗಿ ತಾಲೂಕಿನ ಯೋಜನಾಧಿಕಾರಿ ವಿನಾಯಕರವರು ಕಾರ್ಯಕ್ರಮಕ್ಕೆ ಸ್ವಾಗತ ಕೋರುವುದರೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಜಯಲಕ್ಷ್ಮಿ ವಂದಿಸಿದರು. ನಂತರ ಚಲನಚಿತ್ರ ಪ್ರದರ್ಶನ ಮಾಡಲಾಯಿತು.


Leave a Reply