vijayapur

ವಿಶ್ವದಲ್ಲಿ ಅತಿದೊಡ್ಡ ಕೋವಿಡ್-೧೯ ಲಸಿಕಾ ಅಭಿಯಾನ ಅಂಗವಾಗಿ ಸಕಲ ಕ್ರಮಗಳೊಂದಿಗೆ ಕೋವಿಡ್ ೧೯ ಲಸಿಕೆ ನೀಡುವ ಕಾರ್ಯ ಆರಂಭ

ವಿಜಯಪುರ:ಜ:೧೬: ಕೋವಿಡ್ ೧೯ ಲಸಿಕೆ ನೀಡುವ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ರೀತಿಯಿಂದ ಸನ್ನದ್ದಗೊಂಡು,ಈಗಾಗಲೇ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದೆ.
ನಗರದ ಜಿಲ್ಲಾಸ್ಪತ್ರೆ ವ್ಯಾಪ್ತಿಯಲ್ಲಿ ಕೋವಿಡ್-೧೯ ಲಸಿಕೆ ನೀಡಲು ಲಸಿಕಾ ಕೇಂದ್ರ ಸ್ಥಾಪಿಸಲಾಗಿದ್ದು ಆಧಾರ್ ವೆರಿಫಿಕೇಶನ್ ಕೊಠಡಿ, ಲಸಿಕಾ ಕೊಠಡಿ ಹಾಗೂ ಅಬ್ಸರ್ವೇಷನ್ ಕೊಠಡಿಗಳನ್ನು ಸ್ಥಾಪಿಸಲಾಗಿದೆ.
ಕೋವಿಡ್ ಲಸಿಕೆಯನ್ನು ಸರ್ಕಾರದ ನಿರ್ದೇಶನದಂತೆ ಮೊದಲ ಹಂತದಲ್ಲಿ ನಿಗದಿತ ಅರ್ಹ ಫಲಾನುಭವಿಗಳಿಗೆ (ಆರೋಗ್ಯ ಕಾರ್ಯಕರ್ತರಿಗೆ) ಲಸಿಕೆ ನೀಡಲು ಲಸಿಕಾ ಸಿಬ್ಬಂದಿಗಳ ಸರ್ವರೀತಿಯಲ್ಲಿ ಸನದ್ದಗೊಂಡಿದ್ದು, ಲಸಿಕಾ ಅಭಿಯಾನಕ್ಕೆ ಮಾನ್ಯ ಪ್ರಧಾನ ಮಂತ್ರಿಗಳು ಚಾಲನೆ ನೀಡಿದ ತಕ್ಷಣ ಜಿಲ್ಲೆಯಲ್ಲಿ ಕೂಡ ಲಸಿಕಾ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ.
ಇಂದು ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಲಸಿಕಾ ಕೇಂದ್ರದ ಎಲ್ಲ ಸಿದ್ಧತೆಗಳ ಬಗ್ಗೆ ಬೆಳಿಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲಕ್ಷ್ಮಿಕಾಂತ ರೆಡ್ಡಿ ಅವರು ಪರಿಶೀಲನೆ ನಡೆಸಿದರು.
ಲಸಿಕಾ ಕೇಂದ್ರದಲ್ಲಿ ಪ್ರಧಾನಮಂತ್ರಿಗಳ ಭಾಷಣ ನೇರಪ್ರಸಾರದ ವೀಕ್ಷಣೆಗೆ ಪ್ರೋಜೆಕ್ಟರ್ ವ್ಯವಸ್ಥೆ ಸಹ ಮಾಡಲಾಗಿತ್ತು. ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಕೊಠಡಿ ನಿಗದಿಪಡಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗ್ರೂಪ್’ ಡಿ’ ನೌಕರ ಲಕ್ಷ್ಮಣ್ ಕೊಳೂರಗಿ ೫೭ ವರ್ಷ ಇವರು ಕೋವಿಡ್-೧೯ ಪ್ರಥಮ ಲಸಿಕೆಯನ್ನು ಜಿಲ್ಲಾ ಆಸ್ಪತ್ರೆಯ ಕೇಂದ್ರದಲ್ಲಿ ಪಡೆದಿದ್ದಾರೆ.
ಆರೋಗ್ಯ ಅಧಿಕಾರಿಗಳ ನಿಗಾದಲ್ಲಿ ಲಸಿಕಾ ಕಾರ್ಯ ಬಗ್ಗೆ ನಿಗಾ ಇಡಲಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಹಾಗೂ ನೋಡಲ್ ಅಧಿಕಾರಿಗಳಾದ ಡಾ. ಜಯರಾಜ್, ಜಿಲ್ಲಾಸ್ಪತ್ರೆ ಸರ್ಜನ್ ಡಾ. ಶರಣಪ್ಪ ಕಡ್ಡಿ, ಡಾ. ಲಕ್ಕಣ್ಣವರ್ ಡಾ. ಎಂ ಬಿ ಬಿರಾದಾರ್, ಸಿ.ಎಚ್ ಅಧಿಕಾರಿ ಮಹೇಶ್ ಭಟ್ ಅವರು ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಪಸ್ಥಿತರಿದ್ದು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker