Koppal

ಸಹಸ್ರಾಂಜನೇಯ ದೇವಸ್ಥಾನದಲ್ಲಿ ಶೇಖಣ್ಣಾಚಾರ್ ಪುಣ್ಯಸ್ಮರಣೆ


ಕೊಪ್ಪಳ, ಜ. ೧೬: ನಗರದ ಶ್ರೀ ಸಹಸ್ರಾಂಜನೇಯ ದೇವಸ್ಥಾನದ ಆವರಣದಲ್ಲಿ ಶ್ರೀ ಶೇಖಣ್ಣಾಚಾರ್ ಅವರ ೧೫ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ವಿಶೇಷ ಪೂಜೆ ನಡೆಯಿತು.
ಪ್ರಸ್ತುತ ಶ್ರೀ ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರವಿರುವ ಶ್ರೀ ಸಹಸ್ರಾಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ್, ಎಳನೀರು ಸೇವೆ ಜರುಗಿತು. ಶೀಘ್ರ ಭಾರತ ರೋಗ ಮುಕ್ತವಾಗಬೇಕು ಎಂಬುದು ಅಜ್ಜನ ಸಂಕಲ್ಪವಾಗಿದೆ ಅದರಂತೆ ೫೧೪೫ನೇ ಅಭಯಾಂಜನೇಯ ಮೂರ್ತಿಯನ್ನು ಕೆತ್ತನೆ ಮಾಡಿ ಪೂಜೆ ಸಲ್ಲಿಸಲಾಯಿತು. ಟ್ರಸ್ಟ್ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ ವಿಶ್ವದಲ್ಲಿಯೇ ಇಂಥಹ ದೇವಸ್ಥಾನ ಸಿಗುವದಿಲ್ಲ, ಒಂದೇ ಕಡೆಗೆ ೫೧೪೫ ಆಂಜನೇಯನ ಮೂರ್ತಿಗಳು ನೋಡಲು ಸಿಗುತ್ತವೆ, ಕಿಷ್ಕಿಂದೆ ಐತಿಹಾಸಿಕವಾಗಿ ಮಹತ್ವದ ಸ್ಥಳವಾಗಿದೆ. ಅದರಂತೆ ಕೊಪ್ಪಳ ಹನುಮನ ದಿವ್ಯ ಶಕ್ತಿ ಕೇಂದ್ರವಾಗಲಿದೆ, ಬರುವ ದಿನಗಳಲ್ಲಿ ಇಲ್ಲಿಗೆ ವಿಶ್ವದ ಸರ್ವ ಹನುಮ ಭಕ್ತರು ಬರುವರು ಎಂದರು.
ಟ್ರಸ್ಟ್ ಅಧ್ಯಕ್ಷ ಮತ್ತು ಆಂಜನೇಯನ ಆರಾಧಕರಾದ ಪ್ರಕಾಶ ಶಿಲ್ಪಿ ಅವರು ಒಬ್ಬರೇ ಮಡಿಯಲ್ಲಿ ೫೧೪೫ ಆಂಜನೇಯನ ಮೂರ್ತಿಗಳನ್ನು ಕೆತ್ತಿದ್ದಾರೆ, ಕಳೆ ೧೫ ವರ್ಷಗಳಿಂದ ಒಂದು ದಿನವೂ ತಪ್ಪದೇ ಅವರು ಕಲ್ಲಿನಲ್ಲಿ ಹನುಮನ ಮೂರ್ತಿ ಮಾಡಿ, ಪೂಜೆಯ ನಂತರವಷ್ಟೇ ಪ್ರಸಾದ ಸ್ವೀಕರಿಸಿದ್ದಾರೆ, ಜೊತೆಗೆ ಹನುಮನ ದಿವ್ಯ ಮಂದಿರ ಸಹಸ್ರಾಂಜನೇಯ ದೇಗುಲ ಕಟ್ಟುವವರೆಗೆ ಪಾದರಕ್ಷೆ ತೊಡದಿರಲು ನಿರ್ಧರಿಸಿ ನಾಲ್ಕು ವರ್ಷದಿಂದ ವೃತ ಮಾಡುತ್ತಿದ್ದಾರೆ, ನಿಜಕ್ಕೂ ಅಂದೊAದು ವಿಸ್ಮಯ ಎಂದರು. ಈ ಸಂದರ್ಭದಲ್ಲಿ ಮಂಜುನಾಥ ಶಿಲ್ಪಿ, ಅಶೋಕ ಬಜಾರಮಠ, ವೀರೇಶ ಚೋಳಪ್ಪನವರ, ಪ್ರಕಾಶಪ್ಪ ಇತರರು ಇದ್ದರು. ಸಂಜೆ ಕಾರ್ತಿಕ ಇಳಿಸುವ ಕಾರ್ಯಕ್ರಮ ಅದರ ನಿಮಿತ್ಯ ಮದ್ದು ಸುಡುವ ಕಾರ್ಯಕ್ರಮ ಸಾಖೇತಿಕವಾಗಿ ಜರುಗಿತು.


Leave a Reply