Belagavi

ಸವದತ್ತಿ ಯಲ್ಲಮ್ಮ ಪುರಸಭೆಯ ಬಜೇಟ ಪೂರ್ವಭಾವಿಸಭೆ


ಸವದತ್ತಿ ೧೬ ಸವದತ್ತಿ ಯಲ್ಲಮ್ಮ ಪುರಸಭೆಯ ಸನ್೨೦೨೦-೨೧ ನೇಸಾಲಿನ ಅಂದಾಜು ಆಯುವೇಯ ಬಜೇಟ ಮಂಡನೆ ಕಾರ್ಯಕ್ರಮ ಜರುಗಿತು. ಈ ಸಭೆಯಲ್ಲಿ ಪುರಸಭೆ ಅದ್ಯಕ್ಷ ರಾಜಶೇಕರ ವಿ ಕಾರದಗಿಯವರು ಸಭೆಯ ಅದ್ಯಕ್ಷತೆ ವಹಿಸಿದ್ದರು.
ಈ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದ ರಾಜಶೇಖರ ವಿ ಕಾರದಗಿ ಯವರು ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಶಾಸಕರು ಕೈಗೊಂಡಿರುತ್ತಾರೆ. ಕಾಯಿಪಲ್ಯೆ ಮಾರುಕಟ್ಟೆ ಕಾಮಗಾರಿಯು ಸದ್ಯದಲ್ಲಿಯೇ ಪ್ರಾರಂಭವಾಗಲಿದೆ. ಪುರಸಭೆಯಿಂದ ದಾರವಾಡರೋಡದ ಪಕ್ಕದ ಪ್ರವಾಸಿ ಮಂದಿರದ ವರೆಗಿನ ರಸ್ತೆಯನ್ನು ಸುಮಾರು ೧೦ ಕೋಟಿರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಮತ್ತು ಪಟ್ಟಣದಲ್ಲಿ ೨೪ ಘಂಟೆಗಳಕಾಲ ಕುಡಿಯುವ ನೀರಿನ ಯೋಜನೆ ಸೇರಿದಂತೆ ಇನ್ನೂ ಹಲವಾರು ಯೋಜನೆಗಳನ್ನು ಶಾಸಕ ಆನಂದ ಮಾಮನಿಯವರು ಕೈಗೊಂಡಿದ್ದಾರೆ. ಎಂದು ಮಾತನಾಡಿದರು.
ಈ ಸಭೆಯಲ್ಲಿ ಸಾರ್ವಜನಿಕರು ತಮ್ಮ ದೂರುಗಳನ್ನು ಸಲ್ಲಿಸಿದ ಅವರು ಪಟ್ಟಣದಲ್ಲಿ ಕುಡಿಯುವ ನೀರನ್ನು ಮೂರುದಿನಕ್ಕೊಮ್ಮೆಯಾದರು ಬೀಡಬೇಕು. ಮತ್ತು ನೀರು ಪೋಲಾಗದಂತೆ ನೋಡಿಕೊಳ್ಳಲು ನೀರು ಬಿಡುವ ಅವದಿಯನ್ನು ಕಡಿಮೇ ಮಾಡಬೇಕು ನೀರು ಸಾಕಷ್ಟು ಹರಿದು ಹೋಗಿ ಪೋಲಾಗುತ್ತಿದೆ. ಮತ್ತು ಪಟ್ಟಣದ ಬಜಾರದಲ್ಲಿ ಸಾಕಷ್ಟು ಟ್ರಾಫಿಕ ಕಿರಿಕಿರಿ ಯಾಗುತ್ತಿದೆ. ಆದ್ದರಿಂದ ಕೂಡಲೆ ಮಾಸ್ಟರಪ್ಲಾನ್ ಕಾಮಗಾರಿಯನ್ನು ಆರಂಭಿಸ ಬೇಕು ಮತ್ತು ಅದರ ಜೋತೆಯಾಗಿ ಯು ಜಿ ಡಿ ಸ್ಕಿಂ ಅನ್ನು ಪ್ರಾರಂಭಿಸಬೇಕು. ಎಂದು ಪುರಸಭೆ ಅದ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ದೂರು ನೀಡಿದರು.
ಈ ಸಭೆಯ ಪ್ರಾರಂಭದಲ್ಲಿ ಪೂರಸಭೆ ಮುಖ್ಯಾಧಿಕಾರಿ ಪ್ರಕಾಶ ಚಿನ್ನಪ್ಪನವರ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ನಂತರ ನಿವೃತ್ತ ಶಿಕ್ಷಕರಾದ ಜಿ ಎಸ್ ಸುಣಗಾರರವರು ಮಾತನಾಡಿ ಪಟ್ಟದಕಲ್ಲ ಓಣಿಯ ಎಲ್ಲ ರಸ್ತೆಗಳು ಸಾಕಷ್ಟು ತೆಗ್ಗು ಬಿದ್ದಿವೆ ಇದರಿಂದ ಓಣಿಯಲ್ಲಿ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಪಟ್ಟದಕಲ್ಲ ಓಣಿ ರಸ್ತೆಗಳನ್ನು ಅಭಿವೃದ್ದಿ ಪಡಿಸಬೇಕೆಂದು ಹೇಳಿದರು.
ಇದೆ ರೀತಿಯಾಗಿ ಮಾಜಿ ಪೂರಸಭೆ ಸದಸ್ಯರಾದ ಭಾರತಿ ಕಲ್ಲಮ್ಮನವರ ಮಾತನಾಡಿ ದಾರವಾಡ ರೋಡ ಬೈಪಾಸ ಹತ್ತಿರ ಇರುವ ನಮ್ಮ ವಾರ್ಡನಲ್ಲಿ ರಸ್ತೆ ಹಾಗೂ ಗಟಾರಿಗಳು ಸಾಕಷ್ಟು ದುರಸ್ಥಿಯಲ್ಲಿವೆ. ಈ ವಿಷಯವಾಗಿ ನಾನು ಸಾಕಷ್ಠು ಬಾರಿ ಪುರಸಭೆಗೆ ತಿಳಿಸಿರುವೆ. ಆದ್ದರಿಂದ ನಮ್ಮ ವಾರ್ಡಕಡೆ ಗಮನಹರಿಸಿ ನಮ್ಮ ವಾರ್ಡನ್ನು ಅಭಿವೃದ್ದಿ ಪಡಿಸಬೇಕೆಂದು ಹೇಳಿದರು.
ಈ ಸಭೆಯಲ್ಲಿ ಪುರಸಭೆ ಉಪಾದ್ಯಕ್ಷರಾದ ದಿಪಕ್ ಜಾನ್ವೆಕರ, ಗಣ್ಯರಾದ ಎಮ್ ಟಿ ಸಿಗ್ಲಿ, ಹುಸೇನಸಾಬ ಗೋರವನಕೊಳ್ಳ, ಕೆ ಕೆ ಪುಣೆದ, ನ್ಯಾಯವಾಧಿಗಳಾದ ಅನುಸುಯಾ ಕಿಟದಾಳ, ಮಹಾದೇವಪ್ಪ ತುರಮರಿ,ಸೇರಿದಂತೆ ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.


Leave a Reply