vijayapur

ಉಚಿತ ಆಪ್ತ ಸಮಾಲೋಚನೆ ಸೌಲಭ್ಯ ಕರೆ

ವಿಜಯಪುರ ಜ.೧೬: ಜಿಲ್ಲೆಯಲ್ಲಿ ಸಮಾಲೋಚನೆ ಅಗತ್ಯವಿರುವ ಎಲ್ಲಾ ಮಕ್ಕಳು ಹಾಗೂ ಮಕ್ಕಳ ಪೋಷಕರು ಸಹ ೧೪೪೯೯ ಸಂಖ್ಯೆಗೆ ಕರೆ ಮಾಡುವ ಮೂಲಕ ಉಚಿತವಾಗಿ ಆಪ್ತ ಸಮಾಲೋಚನೆ ಬೆಳಿಗ್ಗೆ ೦೮:೦೦ ರಿಂದ ರಾತ್ರಿ ೦೮:೦೦ ರವರೆಗೆ ಸೌಲಭ್ಯ ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು, ಹಾಗೂ ಅಧ್ಯಕ್ಷರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರು ತಿಳಿಸಿದ್ದಾರೆ.
ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಮಕ್ಕಳಿಗಾಗಿ ಉಚಿತ ದೂರವಾಣಿ ಸಮಾಲೋಚನೆ ನೀಡಲು, ಟೋಲ್ ಫ್ರೀ ಸಂಖ್ಯೆ : ೧೪೪೯೯ ಪ್ರಾರಂಭಿಸುತ್ತಿದೆ. ಮಗುವಿನ ನಿರ್ಧಿಷ್ಟವಾದ ಸಮಾಲೋಚನೆ ಅವಶ್ಯಕತೆಯನ್ನು ಆಧರಿಸಿ, ಸಂಬAಧಪಟ್ಟ ಸಮಾಲೋಚಕರಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಟೋಲ್ ಫ್ರೀ ಸಂಖ್ಯೆ: ೧೪೪೯೯ ಕುರಿತು ಉಚಿತ ಆಪ್ತ ಸಮಾಲೋಚನೆಗಾಗಿ ೧೪೪೯೯ ಗೆ ಕರೆ ಮಾಡಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker