vijayapur

ಮಕ್ಕಳ ಪಾಲನಾ ಸಂಸ್ಥೆಗಳನ್ನು ಸುಧಾರಣಾ ಸಂಸ್ಥೆಗಳು (ಕರೆಕ್ಷನ್ ಹೋಮ್ಸ) ಎಂದೂ ಕರೆಯುವುದು ತಪ್ಪು


ವಿಜಯಪುರ ಜ.೧೬: ಬಾಲಾಪರಾಧಿಗಳು ಎಂದು ಸಂಬೋಧಿಸುವ ಬದಲು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ ೨೦೧೫ ಕಲಂ ೨ (೧೩) ರನ್ವಯ “ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು” ಎಂದು ಹಾಗೂ ಸುಧಾರಣಾ ಸಂಸ್ಥೆಗಳು, ಕರೆಕ್ಷನ್ ಹೋಮ್ಸ್ ಎಂದು ಸಂಭೋಧಿಸುವ ಬದಲು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ ೨೦೧೫ ಕಲಂ ೨ (೨೧) ರನ್ವಯ ಮಕ್ಕಳ ಪಾಲನಾ ಸಂಸ್ಥೆಗಳು ಎಂದು ಮಾತ್ರ ಸಂಬೋಧಿಸಲು ವಿಜಯಪುರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರು ತಿಳಿಸಿದ್ದಾರೆ.
ಅದರಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ ೨೦೧೫ ನ್ನು ಅನುಷ್ಠಾನಗೊಳಿಸುತ್ತಿದೆ. ಈ ಕಾಯ್ದೆ ಅನುಸಾರ ಕಾನನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿಗೆ ಬಾಲಾಪರಾಧಿಗಳು ಎಂದೂ ಮಕ್ಕಳ ಪಾಲನಾ ಸಂಸ್ಥೆಗಳನ್ನು ಸುಧಾರಣಾ ಸಂಸ್ಥೆಗಳು (ಕರೆಕ್ಷನ್ ಹೋಮ್ಸ) ಎಂದೂ ಕರೆಯುವುದು ತಪ್ಪಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply