Belagavi

ನಿರುಪಯುಕ್ತ ವಾಹನ ಬಹಿರಂಗ ಹರಾಜು


ಬೆಳಗಾವಿ, ಜ.೧೬: ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಬೆಳಗಾವಿ ಪ್ರಾದೇಶಿಕ ಕಚೇರಿಯ ನಿರುಪಯುಕ್ತ ವಾಹನ ೨೦೦೨ರ ಮಾದರಿಯ ಕೆಎ೦೧ ಜಿ೩೯೩೫ ಮಹೇಂದ್ರ ಜೀಪ್ ವನ್ನು ಜ.೨೮ ರಂದು ಬೆಳ್ಳಿಗ್ಗೆ ೧೧:೩೦ ಗಂಟೆಗೆ ಟೆಂಡರ್-ಕA-ಬಹಿರAಗ ಹರಾಜು ಕರೆಯಲಾಗಿದೆ.
ಬಹಿರಂಗ ಹರಾಜು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಬೆಳಗಾವಿ ಪ್ರಾದೇಶಿಕ ಕಚೇರಿ ಆವರಣ ವೀರಭದ್ರ ನಗರ ೨ನೇ ಕ್ರಾಸ್ ಬೆಳಗಾವಿಯಲ್ಲಿ ನಡೆಯಲಿದ್ದು, ನಿರುಪಯುಕ್ತ ವಾಹನವನ್ನು ಕಚೇರಿ ಆವರಣದಲ್ಲಿ ಪರಿಶೀಲನೆಗಾಗಿ ಇಡಲಾಗುವುದು. ಕಚೇರಿ ವೇಳೆಯಲ್ಲಿ ನಾ.ಹ.ಜಾ.ನಿ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಕೆ.ಕಾಲೋಜಿ ಅವರನ್ನು ಸಂಪರ್ಕಿಸಿ ಪರಿಶೀಲನೆ ಮಾಡಲು ಅವಕಾಶವಿದೆ ಎಂದು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟೆಣಡರ್ ಮೊಹರು ಮಾಡಿದ ಲಕೋಟಿಯನ್ನು ಪೊಲೀಸ್ ಅಧೀಕ್ಷಕರ ವಿಳಾಸಕ್ಕೆ ಕಳುಹಿಸಬೇಕು. ಲಕೋಟೆಯ ಮೇಲೆ ನಿರುಪಯುಕ್ತ ವಾಹನವನ್ನು ಖರೀದಿಸುವ ಬಗ್ಗೆ ಎಂಬುದನ್ನು ಸ್ಪಷ್ಟವಾಗಿ ಬಿಡಿ ಅಕ್ಷರಗಳಲ್ಲಿ ಬರೆಯಬೇಕು. ಪೂರ್ಣಗೊಳಿಸಿದ ಟೆಂಡರ್‌ಗಳನ್ನು ಜ.೨೫ ರ ಮಧ್ಯಾಹ್ನ ೧ ಗಂಟೆ ಒಳಗಾಗಿ ಕಾರ್ಯಾಲಯಕ್ಕೆ ಕಳುಹಿಸಬೇಕು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ವೇಳೆಯಲ್ಲಿ ಬಂದು ತಿಳಿದುಕೊಳ್ಳಲು ತಿಳಿಸಿದ್ದಾರೆ.


Leave a Reply