ಪ್ರತಿ ಗ್ರಾಮಕ್ಕೂ ಶುದ್ದ ಕುಡಿಯುವ ನೀರು : ಶಾಸಕ ಮಹಾದೇವಪ್ಪ ಯಾದವಾಡ

ರಾಮದುರ್ಗ: ತಾಲೂಕಿನ ಪ್ರತಿ ಗ್ರಾಮಕ್ಕೂ ಮಲಪ್ರಭಾ ಆಣೆಕಟ್ಟಿನಿಂದ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ರಾಜ್ಯ ಸರ್ಕಾರಕ್ಕೆ ರೂ. ೩೫೦ ಕೋಟಿಯ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಶನಿವಾರ ತಾಲೂಕಿನ ಉದುಪುಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಳ್ಳೂರ ಗ್ರಾಮದಲ್ಲಿ ರೂ. ೧ ಕೋಟಿ ವೆಚ್ಚದಲ್ಲಿ ಮುಖ್ಯ ರಸ್ತೆಯಿಂದ ಪರಿಶಿಷ್ಟ ಸಮುದಾಯದ ಕಾಲೋನಿ ವರೆಗೆ ಸಿಸಿ ರಸ್ತೆ ನಿರ್ಮಾಣ, ರೂ. ೨೨ ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಶಾಲೆಯ ೨ ಹೆಚ್ಚುವರಿ ಶಾಲಾ ಕೊಠಡಿ ನಿರ್ಮಾಣ, ಜಲ ಜೀವನ ಮಿಶನ್ ಯೋಜನೆಯಡಿ ರೂ. ೮.೫೮ ಲಕ್ಷ ವೆಚ್ಚದಲ್ಲಿ ಬೀಡಕಿ ಗ್ರಾಮದ ಮನೆಗಳಿಗೆ ನಳಗಳ ಸಂಪರ್ಕ ಮತ್ತು ರೂ. ೧೯.೭೨ ಲಕ್ಷ ವೆಚ್ಚದಲ್ಲಿ ಉದುಪುಡಿ ಗ್ರಾಮದ ಮನೆಗಳಿಗೆ ನಳ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ಅನುದಾನ ಸದ್ಬಳಕೆಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಯೋಜನೆಗಳ ಸಮರ್ಪಕ ಉಸ್ತುವಾರಿಯಿಂದ ಮಾತ್ರ ಸಾಧ್ಯವಿದೆ ಎಂದು ಹೇಳಿದರಲ್ಲದೆ ಗುಣ ಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಇದೇ ದಿವಸ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ರೂ. ೪೦ ಲಕ್ಷ ವೆಚ್ಚದಲ್ಲಿ ಆರಬೆಂಚಿ ತಾಂಡಾ ಮತ್ತು ರೂ. ೪೦ ಲಕ್ಷ ವೆಚ್ಚದಲ್ಲಿ ಸಿ. ಸಿ ರಸ್ತೆ ನಿರ್ಮಾಣ, ಪ್ಲೇವರ್ ಅಳವಡಿಕೆ ಕಾರ್ಯಕ್ಕೆ ಶಾಸಕರು ಚಾಲನೆ ನೀಡಿದರು.
ಬಸವಾನಂದ ಭಾರತಿ ಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೃಷ್ಣಾ ಲಮಾಣಿ, ಶ್ರೀ ಧನಲಕ್ಷಿö್ಮÃ ಶುಗರ್ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಓಬಳಾಪೂರ ಗ್ರಾಪಂ ಅಧ್ಯಕ್ಷ ಶಂಕರ ಲಮಾಣಿ, ಎಪಿಎಂಸಿ ಸದಸ್ಯ ಮಾರುತಿ ಕೊಪ್ಪದ, ಜಿಪಂ ಎಇಇ ಕೋಳಿ, ಪಿಡಬ್ಲೂಡಿ ಎಇಇ ಸೊಲಾಪುರೆ, ಇಂಜನೀಯರರಾದ ಬಿ. ಎಸ್. ಕರ್ಕಿ, ರವಿಕುಮಾರ, ಚೌಗಲಾ ಸೇರಿದಂತೆ ಗ್ರಾಮಸ್ಥರು ಇದ್ದರು.