Ballary

ಕುರುಗೋಡು ಪುರಸಭೆ : ಬಯಲು ಮಲ, ಮೂತ್ರ ವಿಸರ್ಜನೆ ನಿಷೇಧ


ಬಳ್ಳಾರಿ,ಜ.16 : ಕುರುಗೋಡು ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡ್‍ಗಳನ್ನು ಓಡಿಎಫ್ (ಬಯಲು ಮುಕ್ತ ಪ್ರದೇಶ) ಪಟ್ಟಣವೆಂದು ಹಾಗೂ ಬಿನ್ ಫ್ರೀ ವಾರ್ಡ್‍ಗಳನ್ನು ಅಭಿವೃದ್ಧಿ ಪಡಿಸಿ ಘೋಷಿಸಿರುವ ಹಿನ್ನೆಲೆಯಲ್ಲಿ ಪುರಸಭೆಯ ವ್ಯಾಪ್ತಿಯಲ್ಲಿ ಬಯಲು ಮುಕ್ತ ಶೌಚಾಲಯ ಮಾಡುವುದು ನಿಷೇಧಿಸಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುರುಗೋಡು ಪುರಸಭೆಯು ಓಡಿಎಫ್ + ಎಂದು ಘೋಷಿಸುವ ಸಲುವಾಗಿ ಬಯಲು ಶೌಚಾಲಯ ಬಯಲು ಮಲ – ಮೂತ್ರ ಮಾಡುವುದು ನಿಷೇಧಿಸಲಾಗಿದೆ. ನಾಗರೀಕರು ಬಯಲು ಶೌಚಾಲಯ ಮಾಡುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು.  ಬಯಲು ಮಲ ಮತ್ತು ಮೂತ್ರ ವಿಸರ್ಜನೆ ಮಾಡಿದರೆ ಬೈಲಾ ಪ್ರಕಾರ ಮೊದಲ ಬಾರಿಗೆ 50 ರೂ. ಮತ್ತು ಎರಡನೇ ಬಾರಿಗೆ 100 ರೂ. ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


Leave a Reply