Ballary

ಗುರು ಶಿಷ್ಯ ಪರಂಪರೆ ಯೋಜನೆಯಡಿ ಸಂಗೀತ ನೃತ್ಯ ತರಬೇತಿಗೆ ಅರ್ಜಿ ಆಹ್ವಾನ


ಕೊಪ್ಪಳ ಜ.16 : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಗುರು ಶಿಷ್ಯ ಪರಂಪರೆ ಯೋಜನೆಯಡಿ ಸಂಗೀತ ನೃತ್ಯ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.  
2020-21ನೇ ಸಾಲಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಗುರು ಶಿಷ್ಯ ಪರಂಪರೆ ಯೋಜನೆಯಡಿ ಪ್ರತಿಷ್ಠತ ಸಂಸ್ಥೆಗಳ ಮೂಲಕ ಅಕಾಡೆಮಿ ವ್ಯಾಪ್ತಿಗೆ ಒಳಪಡುವ ಕರ್ನಾಟಕ ಸಂಗೀತ, ಸುಗಮ ಸಂಗೀತ, ನೃತ್ಯ, ಕಥಾಕೀರ್ತನ ಮತ್ತು ಗಮಕ ಕಲಾಪ್ರಕಾರಗಳಲ್ಲಿ ಕಲಿಯಲು ಆಸಕ್ತಿಯುಳ್ಳ, ಅಭ್ಯಾಸ ಮಾಡುತ್ತಿರುವ, ಹೆಚ್ಚಿನ ಅಭ್ಯಾಸ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಗೆ 3 ತಿಂಗಳವರೆಗೆ ತರಬೇತಿ ನೀಡಲಾಗುವುದು.
ಅರ್ಹ 14 ರಿಂದ 26 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಅಕಾಡೆಮಿಯ ಕಚೇರಿ ವೇಳೆಯಲ್ಲಿ, ಅಲ್ಲದೇ ಅಕಾಡೆಮಿ ಅಂರ್ತಜಾಲತಾಣ https//karnatakasangeetanrityaacademy.com    ಮೂಲಕ ಪಡೆದು ಸಲ್ಲಿಸಬಹುದು.  ಅಥವಾ ಅಭ್ಯರ್ಥಿಗಳು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಅರ್ಜಿಗಳನ್ನು ಪಡೆಯಬಹುದಾಗಿದೆ.
ಅರ್ಜಿಯನ್ನು ರಿಜಿಸ್ಟಾçರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560002 ಇಲ್ಲಿಗೆ ಕೊನೆಯ ಜನವರಿ 30 ರೊಳಗಾಗಿ ಕಳುಹಿಸಿಕೊಡಬೇಕಾಗಿ ಅಕಾಡೆಮಿಯ ರಿಜಿಸ್ಟಾçರ್ ಬನಶಂಕರಿ ವಿ. ಅಂಗಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply