Uncategorized

ದಿ. 17 ರಂದು ಜನಸೇವಕ ಸಮಾವೇಶ : ಅಮೀತ ಶಾ ಬೆಳಗಾವಿಗೆ


ಬೆಳಗಾವಿ : ನಗರದ ನೆಹರೂ ಕ್ರೀಡಾಂಗಣದಲ್ಲಿ ದಿ. 17 ರಂದು  ನಡೆಯುವ “ ಜನಸೇವಕ ಸಮಾವೇಶ ಸಮಾರಂಭ ” ದಲ್ಲಿ ಭಾಗವಹಿಸಲು ಕೇಂದ್ರ ಗ್ರಹ ಸಚಿವ ಅಮೀತ ಶಾ ಅವರು ಬೆಳಗಾವಿ ನಗರಕ್ಕೆಆಗಮಿಸುವವರಿದ್ದು, ಅವರೊಂದಿಗೆ ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಇನ್ನಿತರ ಕೇಂದ್ರ, ರಾಜ್ಯ ಸಚಿವರು, ಗಣ್ಯ ವ್ಯಕ್ತಿಗಳ ಆಗಮಿಸುವ ಹಿನ್ನೆಲೆಯಲ್ಲಿ  ಮುಂಜಾಗೃತಾ ಕ್ರಮವಾಗಿ  ಬಂದೋಬಸ್ತ ಕರ್ತವ್ಯಕ್ಕೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆ ಹಾಗೂ ವಿವಿಧ ವಿಶೇಷ ಘಟಕಗಳಿಂದ ಈಗಾಗಲೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು  ಆಗಮಿಸಿದ್ದು, ಈ ಕಾರ್ಯಕ್ರಮಕ್ಕೆ 1- ಪೊಲೀಸ್ ಆಯುಕ್ತರು, 15- ಎಸ್‌ಪಿ, 53-ಡಿಎಸ್‌ಪಿ, 118-ಸಿಪಿಐ/ಪಿಐ, 350-ಎಎಸ್‌ಐ ಮತ್ತು 2380- ಹೆಚ್‌ಸಿ/ಪಿಸಿ ಹಾಗೂ 235-ಪಿಎಸ್‌ಐ,ಇವರೊಂದಿಗೆ ವಿಶೇಷ ಘಟಕಗಳಾದ ಕೆಎಸ್‌ಆರ್‌ಪಿ, ಕೆಎಸ್‌ಐಎಸ್‌ಎಫ್-16, ಎಎಸ್‌ಸಿ-10, ಸಿಆರ್‌ಪಿಎಫ್, ಜಡಿಡಿಎಸ್, ಎಫ್‌ಪಿಐ, ಸಿಐಡಿ, ರಾಜ್ಯಗುಪ್ತವಾರ್ತೆ, ಇಂಟರನಲ್ ಸೆಕ್ಯುರಿಟಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿವರನ್ನು ನಿಯೋಜಿಸಿ,  ಕಾನೂನು ಸುವ್ಯವಸ್ಥೆಯ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಕಾರ್ಯಕ್ರಮದ ಸಮಯದಲ್ಲಿ ದಿನಾಂಕಃ 17ರಂದು ಬೆಳಿಗ್ಗೆ 07.00 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯವಾಗುವವರೆಗೆ ಈ ಕೆಳಗೆ ನಮೂದಿಸಿದಂತೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ, ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಬೆಳಗಾವಿ ನಗರ ಪೋಲಿಸ ಆಯುಕ್ತರು ಸಾರ್ವಜನಿಕರಲ್ಲಿ ಕೋರಿದ್ದಾರೆ.
ಜನಸೇವಕ ಸಮಾವೇಶ ಸಮಾರಂಭಕ್ಕೆ ನಿಪ್ಪಾಣಿ, ಅಥಣಿ, ಚಿಕ್ಕೋಡಿ, ಸಂಕೇಶ್ವರ, ಯಮಕನಮರ್ಡಿ, ಕಾಕತಿ ಕಡೆಗಳಿಂದ ಆಗಮಿಸುವ ಸಾರ್ವಜನಿಕರ ಎಲ್ಲ ಮಾದರಿಯ ವಾಹನಗಳು ರಾಷ್ಟ್ರೀಯ ಹೆದ್ದಾರಿ-4ರ ಮುಖಾಂತರ ನಿಸರ್ಗ ಧಾಬಾ ಎದುರಿಗಿನ ಸವಿರ್ಸ್ ರಸ್ತೆ ಮೂಲಕ ಶ್ರೀನಗರ ಗಾರ್ಡನ್, ಶಿವಬಸವನಗರ ರಸ್ತೆಯಲ್ಲಿ ಜನರನ್ನು ಇಳಿಸಿ, ಮರಳಿ ನಿಸರ್ಗ ಧಾಬಾ, ಕೆಎಲ್‌ಇ ಛತ್ರಿ ಮೂಲಕ ಸಾಗಿ ಹಿಂಡಾಲ್ಕೋ ಅಂಡರ್ ಬ್ರಿಡ್ಜ್‌ ದಾಟಿ ಹಿಂಡಾಲ್ಕೋ ಮೈದಾನದಲ್ಲಿ ನಿಲುಗಡೆ ಮಾಡುವುದು.

“ಜನಸೇವಕ ಸಮಾವೇಶ ಸಮಾರಂಭಕ್ಕೆ ಗೋಕಾಕ, ಕಣಬರ್ಗಿ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ಎಲ್ಲ ಮಾದರಿಯ ವಾಹನಗಳು ಕೆ.ಎಂ.ಎಫ್ ಡೈರಿ ಕ್ರಾಸ್ ಮೂಲಕ ಶ್ರೀ ಸಿದ್ನಾಳವರ ಮನೆ ಕ್ರಾಸ್ ಮಾರ್ಗವಾಗಿ ಆಂಜನೇಯ ನಗರ ಮುಖ್ಯ ರಸ್ತೆ ಸೇರಿ ಮಹಾಂತ ಭವನ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೊಳಿಸುವುದು.

“ಜನಸೇವಕ ಸಮಾವೇಶ ಸಮಾರಂಭಕ್ಕೆ ಬಾಗಲಕೋಟ, ರಾಮದುರ್ಗ, ಯರಗಟ್ಟಿ ಕಡೆಗಳಿಂದ ನಗರಕ್ಕೆ ಬರುವ ಎಲ್ಲ ಮಾದರಿಯ ವಾಹನಗಳು ಮೋದಗಾ, ಮರಕಟ್ಟಿ ಕ್ರಾಸ್, ಚಂದನಹೊಸೂರು, ತಾರಿಹಾಳ, ಹಲಗಾ ಮಾರ್ಗವಾಗಿ ಬಂದು ಅಲಾರವಾಡ ಸವಿರ್ಸ್ ರಸ್ತೆ, ಹಳೆ ಪಿ.ಬಿ ರಸ್ತೆ, “ವ್ಹಿ.ಆರ್‌.ಎಲ್ ಲಾಜಿಸ್ಟಿಕ್, ಜೀಜಾಮಾತಾ ಸರ್ಕಲ್, ಶನಿಮಂದಿರ, ಪೋಸ್ಟಮ್ಯಾನ ಸರ್ಕಲ್, ಖಾನಾಪೂರ ರಸ್ತೆ, ಮೂಲಕ ಸಿಪಿಎಡ್ ಮೈದಾನ ದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು.

“ಜನಸೇವಕ ಸಮಾವೇಶ ಸಮಾರಂಭಕ್ಕೆ ಹುಬ್ಬಳ್ಳಿ, ಧಾರವಾಡ, ಬೈಲಹೊಂಗಲ, ಸವದತ್ತಿ, ಕಿತ್ತೂರ ಹಿರೇಬಾಗೇವಾಡಿ ಕಡೆಗಳಿಂದ ಬರುವ ಎಲ್ಲ ಮಾದರಿಯ ವಾಹನಗಳು ಅಲಾರವಾಡ ಸವಿರ್ಸ್ ರಸ್ತೆ, ಹಳೆ ಪಿ.ಬಿ ರಸ್ತೆ, ವ್ಹಿ.ಆರ್‌.ಎಲ್ ಲಾಜಿಸ್ಟಿಕ್, ಜೀಜಾಮಾತಾ ಸರ್ಕಲ್, ಶನಿ ಮಂದಿರ, ಪೋಸ್ಟಮ್ಯಾನ ಸರ್ಕಲ್, ಖಾನಾಪೂರ ರಸ್ತೆ, ಮೂಲಕ ಸಿಪಿಎಡ್ ಮೈದಾನ ದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು.

“ಜನಸೇವಕ ಸಮಾವೇಶ ಸಮಾರಂಭಕ್ಕೆ ಕಾರವಾರ, ಹಳಿಯಾಳ, ಖಾನಾಪೂರ ಮಾರ್ಗವಾಗಿ ನಗರಕ್ಕೆ ಆಗಮಿಸುವ ಎಲ್ಲ ವಾಹನಗಳು ಸಿಪಿಎಡ್ ಮೈದಾನದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು.

“ಜನಸೇವಕ ಸಮಾವೇಶ ಸಮಾರಂಭಕ್ಕೆ ವೆಂಗುರ್ಲಾ, ಸಾವಂತವಾಡಿ, ಸುಳಗಾ ಕಡೆಗಳಿಂದ ಆಗಮಿಸುವ ಎಲ್ಲ ಮಾದರಿಯ ವಾಹನಗಳನ್ನು ಹಿಂಡಲಗಾ ಫಾರೆಸ್ಟ ನಾಕಾ, ಹಿಂಡಲಗಾ ಗಣೇಶ ಮಂದಿರ, ಗಾಂಧಿ ಸರ್ಕಲ್ ಮೂಲಕ ಸಿಪಿಎಡ್ ಮೈದಾನ ದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು.

ಬೆಳಗಾವಿ ನಗರದಿಂದ ಹೊರ ಹೋಗುವ ಧಾರವಾಡ, ಹುಬ್ಬಳ್ಳಿ, ಸವದತ್ತಿ, ಬೈಲಹೊಂಗಲ, ಯರಗಟ್ಟಿ, ಬಾಗಲಕೋಟ, ವಿಜಯಪೂರ.ಗೋಕಾಕ, ಸಂಕೇಶ್ವರ, ಅಥಣಿ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಹಳೆ ಪಿಬಿ ರಸ್ತೆ ಮುಖಾಂತರ ರಾಷ್ಟ್ರೀಯ ಹೆದ್ದಾರಿ-4 ಕ್ಕೆ ಸೇರಿ ಎಲ್ಲ ಕಡೆಗೆ ಸಾಗುವುದು.

ಕೆಎಲ್‌ಇ ಆಸ್ಪತ್ರೆಗೆ ಬರುವ ತುರ್ತು ಅಂಬ್ಯೂಲನ್ಸ್‌ ವಾಹನಗಳಿಗೆ ಕೆಎಲ್‌ಇ ಛತ್ರಿ ಹಾಗೂ ಕೊಲ್ಲಾಪೂರ ಸರ್ಕಲ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

“ಜನಸೇವಕ ಸಮಾವೇಶ ಸಮಾರಂಭದ ಪ್ರಯುಕ್ತ ಬೆಳಗಾಂವಿ ನಗರದಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ನಿರ್ಬಂಧಿತಗೊಳಿಸಲಾದ ಮಾರ್ಗಗಳು ಈ ಕೆಳಗಿನಂತಿವೆ.
ರಾಣಿ ಚೆನ್ನಮ್ಮ ಸರ್ಕಲ್‌ದಿಂದ ಡಾ: ಅಂಬೇಡ್ಕರ ರಸ್ತೆ, ಕೃಷ್ಣದೇವರಾಯ (ಕೊಲ್ಹಾಪೂರ) ಸರ್ಕಲ ಕಡೆಗೆ
ಸಂಗೊಳ್ಳಿ ರಾಯಣ್ಣ ವೃತ್ತ ದಿಂದ ಕೃಷ್ಣದೇವರಾಯ (ಕೊಲ್ಹಾಪೂರ) ವೃತ್ತದ ಹಳೆ ಪಿ.ಬಿ.ರಸ್ತೆ.
ಹಳೆ ಪಿಬಿ ರಸ್ತೆಗೆ (ಎಸ್‌ಪಿ ಕಛೇರಿ ರೋಡ್) ನ್ಯಾಯಮಾರ್ಗದಿಂದ ಮರಾಠಾ ಮಂಡಳ ಕಡೆಗೆ
ಮರಾಠಾ ಮಂಡಳ ರಸ್ತೆಯಲ್ಲಿ ಅಂಧರ ಮಕ್ಕಳ ಶಾಲೆಯ ಕ್ರಾಸ್ ಕಡೆಗೆ ಗ್ಯಾಂಗವಾಡಿ ಸರ್ಕಲದಿಂದ ಹೊಟೇಲ್ ರಾಮದೇವ ಕಡೆಗೆ (ಕೆಎಲ್‌ಇ ರಸ್ತೆ)
ಶಿವಬಸವ ನಗರ ಕೆಪಿಟಿಸಿಎಲ್ ಕಲ್ಯಾಣ ಮಂಟಪ ಸ್ಮಾರ್ಟ ಸಿಟಿ ಮಾದರಿ ರಸ್ತೆಗೆ ಬಾಳೆಕುಂದ್ರಿ ಇಂಜನಿಯರಿಂಗ್ ಕಾಲೇಜ್ ಕಡೆಯಿಂದ ಕೆಪಿಟಿಸಿಎಲ್ ರಸ್ತೆಯಲ್ಲಿ ಶಿವಬಸವ ಕ್ರಾಸ್ ಹತ್ತಿರ ಕೆಎಲ್‌ಇ ಡೆಂಟಲ್ ಕಾಲೇಜ್ ಕಡೆಗೆ
ಹಿಂಡಾಲ್ಕೋ ಅಂಡರ್ ಬ್ರೀಡ್ಜ್‌ ಸವಿರ್ಸ್ ರಸ್ತೆ ಕಡೆಯಿಂದ ಕೆಎಲ್‌ಇ ಛತ್ರಿ ಕಡೆಗೆ ಭಾಕ್ಷೈಟ್ ರಸ್ತೆಯಲ್ಲಿ ಶಿವಾಲಯ ಕ್ರಾಸ್ ಕಡೆಗೆ
ನೆಹರು ನಗರ(ಎಪಿಎಂಸಿ ರೋಡ್) 1 ಹಾಗೂ 2 ನೇ ಕ್ರಾಸ್‌ದಿಂದ ಕೆಎಲ್‌ಇ ರಸ್ತೆ ಕಡೆಗೆ ಲಕ್ಷ್ಮೀ ಕಾಂಪ್ಲೆಕ್ಷ್‌ ಕಡೆುಂದ ಬಾಟಾ ಶೋರೂಂ ಸಿವ್ಹಿಲ್ ಆಸ್ಪತ್ರೆ ರಸ್ತೆ ಕಡೆಗೆ ಎಲ್ಲ ಮಾದರಿಯ ವಾಹನಗಳಿಗೆ ನಿಷೇಧ ಇರುತ್ತದೆ ಎಂದು ಪೋಲಿಸರು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply