Gadag

ಗದಗ: ಕೋವಿಡ್-19 ಲಸಿಕೆ ನೀಡಿಕೆಯ ವಿವರ


ಗದಗ  16 : ಕೋವಿಡ್ 19 ಲಸಿಕೆ ನೀಡುವ ಪ್ರಕ್ರಿಯೆಯನ್ನು ಜಿಲ್ಲೆಯಲ್ಲಿ ಗುರುತಿಸಲಾದ ಏಳು ಕೇಂದ್ರಗಳಲ್ಲಿ ಬೆಳ್ಳಿಗೆ 11 ಗಂಟೆಗೆ ಪ್ರಾರಂಭಿಸಿ ಸಂಜೆ ಮುಕ್ತಾಯಗೊಳಿಸಲಾಯಿತು. ಜಿಲ್ಲೆಯ 7 ಲಸಿಖಾ ಕೇಂದ್ರಗಳಿಗೆ ಇಂದು ಒಟ್ಟಾರೆ 664 ವಾರಿಯರ್ಸಗಳಿಗೆ ಲಸಿಕೆ ನೀಡುವ ಗುರಿ ನಿಗದಿಪಡಿಸಲಾಗಿತ್ತು, 469 ಕೋರೋನಾ ವಾರಿಯರ್ಸ್‍ಗಳಿಗೆ ಲಸಿಕೆ ನೀಡುವ ಮೂಲಕ ಶೇ.70 ರಷ್ಟು ಲಸಿಕೆ ನೀಡಿದಂತಾಗಿದೆ.
ಜಿಲ್ಲೆಯಲ್ಲಿನ ಲಸಿಕಾ ಕೇಂದ್ರವಾರು ಲಸಿಕೆ ನೀಡಿಕೆಯ ವಿವರ ಇಂತಿದೆ. ಗದಗನ ಹೆರಿಗೆ ಆಸ್ಪತ್ರೆ-69, ಗದಗ ನಗರದ  ಪ್ರಾಥಮಿಕ ಆರೋಗ್ಯ ಕೇಂದ್ರ-80, ಮುಂಡರಗಿ-69, ನರಗುಂದ-54, ರೋಣ-66, ಶಿರಹಟ್ಟಿ-53, ಲಕ್ಕುಂಡಿ-78 ವಾರಿಯರ್ಸಗಳಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ (ಪ್ರ) ಡಾ. ಆನಂದ ಕೆ ಅವರು ತಿಳಿಸಿದ್ದಾರೆ.
ಇಂದು ನಡೆದ ಲಸಿಕೆ ನೀಡಿಕೆ ಅಭಿಯಾನ ಕಾರ್ಯಕ್ರಮದಲ್ಲಿ ನರಗುಂದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ.ಸಿ. ಪಾಟೀಲ ಅವರು ಪಾಲ್ಗೊಂಡು ಲಸಿಕೆ ಪಡೆದ ಕೊರೊನಾ ವಾರಿಯರ್ಸ್ ಗಳನ್ನು ಮಾತನಾಡಿಸಿದರು.

Leave a Reply