Gadag

ಗದಗ ಜಿಲ್ಲೆಯಲ್ಲಿ ಕೋವಿಡ್ 19 ಲಸಿಕಾಕರಣ ಅಭಿಯಾನ ಆರಂಭ


ಗದಗ  16 : ಕೋವಿಡ್ 19 ಲಸಿಕೆ ನೀಡುವ ಪ್ರಕ್ರಿಯೆಯನ್ನು ಜಿಲ್ಲೆಯಲ್ಲಿ ಗುರುತಿಸಲಾದ ಏಳು ಕೇಂದ್ರಗಳಲ್ಲಿ ಬೆಳ್ಳಿಗೆ 11 ಗಂಟೆಗೆ ಪ್ರಾರಂಭಿಸಲಾಯಿತು. ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಹಗಲಿರುಳೆನ್ನದೇ ಕರ್ತವ್ಯ ನಿರ್ವಹಿಸಿದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಗ್ರುಪ್ ಡಿ ಸಿಬ್ಬಂದಿಗಳಿಗೆ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಲಾಯಿತು.
ಜಿಲ್ಲೆಯ 7 ಲಸಿಕಾ ಕೇಂದ್ರಗಳಲ್ಲಿ ಪ್ರತಿದಿನಕ್ಕೆ ಗರಿಷ್ಟ 700 ಕೊರೋನಾ ವಾರಿಯರ್ಸಗೆ ಲಸಿಕೆ ನೀಡಲು ನಿಗದಿಪಡಿಸಲಾಗಿದ್ದು ಲಸಿಕೆ ನೀಡುವ ಪ್ರಕ್ರಿಯೆಗೆ ಅಧಿಕೃತವಾಗಿ  ಬೆಳಿಗ್ಗೆ 10.30 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ವೇದಿಕೆಯ ಮೂಲಕ ರಾಷ್ಟ್ರ ವ್ಯಾಪಿ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 8,877 ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆ ಇಂದಿನಿಂದ ಆರಂಭಿಸಲಾಗಿದೆ. ಪ್ರಥಮ ಡೋಸ್ ಲಸಿಕೆ ಪಡೆದವರು 28 ದಿನಗಳ ನಂತರ ಮತ್ತೆ ಎರಡನೇ ಡೋಸ್ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳಿಗೆ ಆಗಮಿಸಬೇಕು. ಈ ಸಂದರ್ಭದಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವೆಂದು ಲಸಿಕೆ ಪಡೆದವರಿಗೆ ತಿಳಿಸಲಾಯಿತು.
ಲಸಿಕೆ ಪಡೆಯಲು ಕೊರೋನಾ ವಾರಿಯಸ್ ್ಗಳು ಮೊದಲು ಕೋವಿನ್ ಆ್ಯಪ್ ಮೂಲಕ ಲಸಿಕಾ ಕೇಂದ್ರಗಳಿಗೆ ಆಗಮಿಸಿ ಗುರುತಿನ ಚೀಟಿ ತೋರಿಸುವ ಮೂಲಕ ನೊಂದಾಯಿಸಿಕೊಳ್ಳಬೇಕು.  ನಂತರದಲ್ಲಿ ಲಸಿಕೆ  ಹಾಕಿಸಿಕೊಂಡ ನಂತರ ಆಬ್ಸರ್ವೇಷನ್ ಕೋಣೆಯಲ್ಲಿ ಅರ್ಧ ಗಂಟೆಗಳ ಕಾಲ ಲಸಿಕೆ ಪಡೆದವರನ್ನು ನಿಗಾ ವಹಿಸುವುದು ಎಲ್ಲ ಲಸಿಕಾ ಕೇಂದ್ರಗಳಲ್ಲಿ  ಕಂಡು ಬಂದ ಸಾಮಾನ್ಯ ದೃಶ್ಯವಾಗಿತ್ತು.
ಜಿಲ್ಲೆಯ ಲಸಿಕಾ ಕೇಂದ್ರಗಳಿಗೆ ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್ ಕೆ ಭೇಟಿ ನೀಡಿ ಲಸಿಕಾ ಕಾರ್ಯಕ್ರಮ ಸಿದ್ಧತೆ ಹಾಗೂ  ಚಾಲನೆ ಪ್ರಕ್ರಿಯೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಬಸರಿಗಿಡದ, ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ.ಗೊಜನೂರ, ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಎಸ್.ನೀಲಗುಂದ ಸೇರಿದಂತೆ ಇತರೆ ಸಿಬ್ಬಂದಿಗಳು ಹಾಜರಿದ್ದರು.
ಲಸಿಕೆ ಪಡೆದವರ ಅಭಿಪ್ರಾಯ :
1.  ಕೊರೋನಾ ಸೋಂಕು ನಿಯಂತ್ರಣದಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಿದ್ದುನ್ನು ಗುರುತಿಸಿ ಪ್ರಥಮವಾಗಿ ಗ್ರುಪ್ ಡಿ ನೌಕರರಿಗೆ ಲಸಿಕೆ ಹಾಕಿರುವುದು ಅಭಿನಂದನಾರ್ಹವಾಗಿದೆ. ಕೋವಿಡ್ ಲಸಿಕೆ ಕುರಿತು ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡದೇ ಧೈರ್ಯವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬಹುದಾಗಿದೆ. ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗಿರುವುದಿಲ್ಲ. ಲಸಿಕೆ ಪಡೆದು ಸೋಂಕಿನಿಂದ ಆಗುವ ಜೀವಹಾನಿಯನ್ನು ತಡೆಯಲು ಮುಂದಾಗೋಣ.
ಸಲ್ಮೋನಾ  ದಿವಾಕರ್ ಗೌಡಲ್ಕರ್
– ಗ್ರುಪ್ ಡಿ ನೌಕರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಗದಗ
2.   ಕೋವಿಡ್ ಲಸಿಕೆಯ ಕುರಿತು ಯಾವುದೇ ರೀತಿಯ ಭಯ ಪಡದೇ ನಿರ್ಭಿತಿಯಿಂದ ಲಸಿಕಾ ಕೇಂದ್ರಗಳಿಗೆ ಆಗಮಿಸಿ ಲಸಿಕೆ ಪಡೆಯಬೇಕು. ಪ್ರಥಮಾಧ್ಯತೆ ಮೇರೆಗೆ ಕೊರೋನಾ ವಾರಿಯರ್ಸಗೆ ಲಸಿಕೆ ನೀಡುತ್ತಿರುವುದು ಕೋರೋನಾ ವಾರಿಯರ್ಸಗೆ ನೀಡಿದ ಅವರಿಗೆ ಸಂದ ಗೌರವವಾಗಿದೆ.
ಡಾ. ಪ್ರತೀಕ ಕುಲಕರ್ಣಿ
– ಮೈಕ್ರೋ ಬಯೋಲಾಜಿಸ್ಟ್, ಗದಗ


Leave a Reply