
ನಾರ್ವೆ ದೇಶದಲ್ಲಿ ಕೋವಿಡ ಲಸಿಕೆ ಹಾಕಿಸಿಕೊಂಡ 23 ಜನರು ಸಾವಿಗೀಡಾಗಿದ್ದಾರೆ,ಸಾವಿಗೀಡಾದವರೆಲ್ಲ ಹಿರಿಯ ನಾಗರಿಕರಾಗಿದ್ದಾರೆ ಮತ್ತು ಹೆಚ್ಚು ವಯಸ್ಸಾದವರೇ ಆಗಿದ್ದಾರೆ .
ಸಾವಿಗೀಡಾದವರ ಮರಣೋತ್ತರ ಪರೀಕ್ಷೆಯನ್ನು ಮಾಡಿದ ನಂತರ ಲಸಿಕೆ ಪಡೆದ ನಂತರ ಅದರಿಂದಾದ ರಿಯಾಕ್ಷನ್ ಗಳಿಂದಾಗಿ ಅವರು ಮೃತರಾದರು ಎಂದು ವರದಿಗಳು ತಿಳಿಸಿವೆ . ಖಾಸಗಿ ಕಂಪನಿ ಅಭಿವೃದ್ದಿಪಡಿಸಿದ ಕೋವಿಡ ಲಸಿಕೆ ಇದಾಗಿದೆ .ಈ ಹಿನ್ನೆಲೆಯಲ್ಲಿ ವಯೋವೃದ್ಧರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ಲಸಿಕೆಯನ್ನು ನೀಡದಂತೆ ನಾರ್ವೆ ಸರ್ಕಾರ ಸೂಚನೆ ನೀಡಿದೆ .
ಹೆಚ್ಚು ವಯಸ್ಸಾದವರು ಈ ಲಸಿಕೆ ಪಡೆಯುವುದರಿಂದ ಯಾವುದೇ ಹೆಚ್ಚಿನ ಪ್ರಯೋಜನ ಆಗುವುದಿಲ್ಲ ಎಂದು ನಾರ್ವೆ ದೇಶದ ಆರೋಗ್ಯ ಇಲಾಖೆ ತಿಳಿಸಿದೆ .ಅದೇ ರೀತಿ ಅನಾರೋಗ್ಯದಿಂದ ಬಳಲುತ್ತಿರುವವರು ಮತ್ತು ಅಶಕ್ತ ಜನರು ಈ ಲಸಿಕೆಯನ್ನು ಪಡೆದುಕೊಳ್ಳಬಾರದು ಎಂದು ಸರಕಾರ ಹೇಳಿದೆ .ಆರೋಗ್ಯದಿಂದ ಬಲಿಷ್ಠರಾದವರು ಮತ್ತು ಯುವಜನರು ಈ ಲಸಿಕೆಯನ್ನು ತೆಗೆದುಕೊಳ್ಳಬಹುದು . ಒಟ್ಟು 33 ಸಾವಿರ ಜನಕ್ಕೆ ಕೋವಿಡ ಲಸಿಕೆಯನ್ನು ನೀಡಲಾಗಿತ್ತು ಆ ಪೈಕಿ 29 ಜನರಿಗೆ ರಿಯಾಕ್ಷನ್ ಆಗಿದೆ .ಇವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಂಡುಬಂದಿವೆ ,ಗಂಭೀರ ರೀತಿಯ ಅಡ್ಡ ಪರಿಣಾಮಗಳಿಂದ ಜೀವ ಕಳೆದುಕೊಂಡಿದ್ದಾರೆ ಎಂದು ಅಲ್ಲಿನ ಸರ್ಕಾರ ಹೇಳಿದೆ .