Ballary

ಬಳ್ಳಾರಿ ಆಂಧ್ರಕ್ಕೆ ಸೇರಿಸಿ ಹೇಳಿಕೆಗೆ ಆಕ್ರೋಶ


ಬಳ್ಳಾರಿ ; ಇತ್ತೀಚಿನ ದಿನಗಳಲ್ಲಿ ಗಡಿಭಾಗದ ವಿಷಯ ಕುರಿತು ಕರ್ನಾಟಕ ಸರ್ಕಾರದ  ಗಡಿ ಜಿಲ್ಲೆಗಳಿಂದ  ವಿಚಿತ್ರವಾದ ಕೂಗುಗಳು ಕೇಳಿ ಬರುತ್ತವೆ. ಈಗಾಗಲೇ ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವ ಮ‌ೂಲಕ ಹೊಸದಾಗಿ ವಿಜಯನಗರ ಜಿಲ್ಲೆಯನ್ನು ಮಾಡಲು ಬಿಜೆಪಿ ಸರ್ಕಾರ ಮುಂದೆ ಅಗಿರವ ಹಿನ್ನೆಲೆಯಲ್ಲಿ, ಅದನ್ನು ವಿರೋಧಿಸಿ,ಕನ್ನಡಪರ,ಸಂಘಟನೆ ಗಳು ತಿಂಗಳುಗಳು ಗಟ್ಟಲೆ ಹೋರಾಟ ಮಾಡಿದವು, ಕೊನೆ ಹಂತದಲ್ಲಿ ಕಾನೂನು ಹೋರಾಟ ಮಾಡಲು ಬಳ್ಳಾರಿ ಹೋರಾಟಗಾರರು ಸಿದ್ದವಾಗಿದ್ದಾರೆ.ಇಂತಹ ಪರಿಸ್ಥಿತಿ ನಲ್ಲಿ ಗಡಿ ಬಾಗದ ಆಂದ್ರಪ್ರದೇಶದ ಕೇಲ ಸಂಘಟನೆ ಗಳು ಬಳ್ಳಾರಿ ಯನ್ನು ಆಂದ್ರಪ್ರದೇಶಕ್ಕೆ ಸೇರಿಸುವಂತೆ,ಪತ್ರಿಕೆ ಗಳಲ್ಲಿ ಸುದ್ದಿಗಳಾಗಿವೆ,ಕೆಲವು ವಿಡಿಯೋ ಗಳು ವೈರಲ್ ಅಗಿವೆ.ಇದಕ್ಕೆ  ಕನ್ನಡ ಪರ ಸಂಘಟನೆ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಅಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿ ಬಳ್ಳಾರಿ ವಿಭಜನೆ ಆಗದಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

 


Leave a Reply