Koppal

ನಿಸರ್ಗ ಕರೋಕೆ ಸಿಂಗಿಂಗ್ ಸ್ಟೂಡಿಯೋ & ಕಲ್ಚರ್ ಅಕಾಡೆಮಿ


ಕುಷ್ಠಗಿ : ಕುಷ್ಟಗಿ ಪಟ್ಟಣದಲ್ಲಿ ನಿಸರ್ಗ ಕರೋಕೆ ಸಿಂಗಿಂಗ್ ಸ್ಟೂಡಿಯೋ & ಕಲ್ಚರ್ ಅಕಾಡೆಮಿ ಇಂದು ಲೋಕಾರ್ಪಣೆ ಮಾಡಲಾಯಿತು. ಉದ್ಘಾಟನೆ ಯನ್ನು ೧೦೮ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ ಕುಷ್ಟಗಿ ರವರು ಮಾಡಿದರು.ಈ ಕಾರ್ಯಕ್ರಮದ ಅಂಗವಾಗಿ ಸಂಜೆ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಈ ಕಾರ್ಯಕ್ರದ ಜೊತೆಗೆ ಕುಷ್ಟಗಿ ಪೋಲಿಸ್ ಠಾಣೆಯ ವತಿಯಿಂದ ಅಪಘಾತ ತಡೆಯಲು ಹಲವಾರು ಕಾನೂನು ಗಳನ್ನು ಜಾರಿಗೆ ತಂದಿದ್ದಾರೆ.ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನಗಳ ದಾಖಲಾತಿಗಳನ್ನು ಸರಿಯಾಗಿ ಇಟ್ಟು ಕೊಂಡು ವಾಹನ ಸವಾರರು ವಾಹನ ಚಲಾಯಿಸಿ ಜೀವ ಕಾಪಾಡಿ ಕೊಂಡು ಹೋಗಬೇಕು ಎಂದು ಡಿ ವಾಯ್ ಎಸ್ ಪಿ ರುದ್ರೇಶ ಉಜ್ಜನಕೊಪ್ಪರವರು ಹೇಳಿದರು.ಸಾನಿದ್ಯ ವಹಿಸಿ ಮಾತನಾಡಿ ಪೂಜ್ಯರು ಹೀಗಾಗಲೇ ಜನ ಕರೋನಾ ದಿಂದ ಸಾಕಷ್ಟು ಜನರ ಜೀವ ಕಳೆದು ಕೊಂಡಿದ್ದಾರೆ.ಇಂತಹ ಸಮಯದಲ್ಲಿ ಹಲವಾರು ಸಂಗೀತ ಕಲಾವಿದರು ಬದುಕು ಬಹಳ ಚಿಂತಾಜನಕ ಸ್ಥತಿಯಲ್ಲಿದೆ. ಇಂತಹ ಕಾರ್ಯಕ್ರಮ ಗಳನ್ನು ಸಂಗೀತ ಕಲಾವಿದರಿಗೆ ಸಹಾಯ ವಾಗುತ್ತೆ ಜೊತೆಗೆ ನಮಗೂ ಸಹ ಆರೋಗ್ಯ ಆಯ್ಯುಷ್ಯು ಮತ್ತಷ್ಟು ಹೆಚ್ಚುತ್ತದೆ ಎಂದರು.ನಂತರ ರುದ್ರೇಶ ಉಜ್ಜನಕೊಪ್ಪ ಡಿ ಎಸ್ ಪಿ ರವರು ನಮ್ಮ ಜಿಲ್ಲೆಗೆ ಅವರ ಕೊಡುಗೆ ಬಹಳ ಇದೆ ಜೊತೆಗೆ ಅವರು ಒಬ್ಬ ಹವ್ಯಾಸಿ ಕಲಾವಿದರು ಹೌದು,ಹಾಗಾಗಿ ಮುಂದಿನ ದಿನ ಮಾನದಲ್ಲಿ ಅವರು ಇನ್ನೂ ಉನ್ನತ ಹುದ್ದೆಗೆ ಸಾಗಲಿ ಎಂದು ಶುಭ ಹಾರೈಸಿದರು. ಜೊತೆಗೆ ವಜೀರ್ ಬಿ. ಗೋನಾಳರವರು ಇಂತಹ ಹಲವಾರು ಕಾರ್ಯಕ್ರಮ ಗಳನ್ನು ಕುಷ್ಟಗಿ ತಾಲೂಕಿನ ಜನತೆ ಗೆ ನೀಡುತ್ತಾ ಬಂದಿದ್ದಾರೆ ಹಾಗಾಗಿ ಅವರಿಗೆ ಹಾಗೂ ಅವರ ಕುಟುಂಬದ ವರಿಗೆ ಆ ಭಗವಂತನ ಸರ್ವ ಸಂಪತ್ತು ಆರೋಗ್ಯ ಕೊಟ್ಟು ಕಾಪಾಡಲಿ ,ಎಂದು ಶ್ರೀಗಳು ವಜೀರ್ ಬಿ ಗೋನಾಳ ರವರಿಗೆ ಆಶೀರ್ವದಿಸಿ ದರು.ಈ ಸಂದರ್ಭದಲ್ಲಿ,ಕುಷ್ಟಗಿ ಪುರಸಭೆ ಅಧ್ಯಕ್ಷರಾದ ಗಂಗಾಧರ ಹಿರೇಮಠ, ಕುಷ್ಟಗಿ ಸಿಪಿಐ ನಿಂಗಪ್ಪ. ಎನ್. ಆರ್. ಪಿಎಸ್ ಐ ಗಳಾದ ತಿಮ್ಮಣ್ಣ ನಾಯಕ,ಅಶೋಕ ಬೇವೂರು.ಗಾಯಕರಾದ ಜೀ ಟಿವಿ ಕನ್ನಡ ಸರಿಗಮಪಾ ಖ್ಯಾತಿಯ ಕಂಬದ ರಂಗಯ್ಯ ,ಮಂಜಮ್ಮ ರತ್ನಮ್ಮ,ಕಾರ್ಯಕ್ರಮ ಆಯೋಜಕರಾದ ವಜೀರ್ ಬಿ ಗೋನಾಳ ,ಸೇರಿದಂತೆ ಇತರರು ಉಪಸ್ಥಿತರಿದ್ದರು.


Leave a Reply