Koppal

ಅಪರಾಧ ತಡೆಗಟ್ಟುವ ಕುರಿತು ಸಾರ್ವಜನಿಕರಿಗೆ ಜಾಗೃತಿ


ಕುಷ್ಠಗಿ ; ಕುಷ್ಟಗಿ ಪಟ್ಟಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಅಪರಾಧ ತಡೆಗಟ್ಟುವ ಕಾರ್ಯಕ್ರಮದ ಕುರಿತು ಜನಸಾಮಾನ್ಯರಿಗೆ ಮುಂಜಾಗೃತ ಕ್ರಮವಾಗಿ ಅನುಸರಿಸಬೇಕಾದ ನಿಯಮಗಳನ್ನು ಸಾರ್ವಜನಿಕರಿಗೆ ಗಂಗಾವತಿ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ ರವರ ನೇತೃತ್ವದಲ್ಲಿ ಜಾಗ್ರತಿ ಮೂಡಿಸಿದರು. ಕುಷ್ಟಗಿ ಪಟ್ಟಣದ ಬಸವೇಶ್ವರ ಸರ್ಕಲ್ ಮಾರುತಿ ಸರ್ಕಲ್, ಸೇರಿದಂತೆ ಬೈಕ್ ರ್ಯಾಲಿ ಮುಖಾಂತರ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಲ್ಲಾ ವಾಹನದ ಕಾಗದಪತ್ರಗಳು ಸರಿಯಾಗಿರಬೇಕು ಒಂದು ವೇಳೆ ಇಲ್ಲದಿದ್ದರೆ ₹500 ರಿಂದ 1000 ರೂಪಾಯಿವರೆಗೂ ದಂಡ ಭರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಗಂಗಾವತಿ ಡಿ ವೈ ಎಸ್ಪಿ ರುದ್ರೇಶ ಉಜ್ಜನಕೊಪ್ಪ ಪೊಲೀಸ್ ಇಲಾಖೆ ಆಯೋಜಿಸಿದ್ದ ಹೆಲ್ಮೆಟ್ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಲ್ಮೆಟ್ ರಹಿತ ಬೈಕ್ ಸವಾರಿಯಿಂದಾಗುವ ಮರಣಗಳನ್ನು ತಪ್ಪಿಸಲು ಹೆಲ್ಮೆಟ್ ಜಾಗೃತಿ ಮೂಡಿಸಲಾಗುತ್ತಿದೆ. ಬೈಕ್ ಸವಾರರು ಪೊಲೀಸರ ದಂಡದ ಭಯದಿಂದ ಕಾಟಾಚಾರಕ್ಕೆ ಹೆಲ್ಮೆಟ್ ಧರಿಸುತ್ತಿದ್ದಾರೆ. ಸವಾರರು ಕಾಟಾಚಾರಕ್ಕೆ ಹೆಲ್ಮೆಟ್ ಧರಿಸದೇ, ನಿಮ್ಮ ಕುಟುಂಬಗಳ ಮೇಲಿನ ಕಾಳಜಿಯಿಂದ ಧರಿಸಿರಿ ಎಂದು ಕಿವಿಮಾತು ಹೇಳಿದರು.ಇನ್ಮುಂದೆ, ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಇದ್ದರೆ 500 ರೂ. ದಂಡ ಹಾಕಲಾಗುವುದು. ಹಿಂಬದಿ ಸವಾರರಿಗೂ ಇದೇ ನಿಯಮ ಅನ್ವಯವಾಗಲಿದೆ. ಯಾವುದೇ ಕಾರಣಕ್ಕೂ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸಬೇಡಿ. ಎಂದರು.ಇತ್ತೀಚಿಗೆ ಸಿಐಟಿಯು ಪ್ರತಿಭಟನೆ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿದ್ದರು. ಲೈಸೆನ್ಸ್ ಇಲ್ಲದ ಕಾರಣ ಟ್ರ್ಯಾಕ್ಟರ್ ಮಾಲೀಕ 8 ಎಕರೆ ಜಮೀನು ಮಾರಬೇಕಾಯಿತು ಎಂದರು.ಇದಕ್ಕೂ ಮುನ್ನ ಪೊಲೀಸರು ಹೆಲ್ಮೆಟ್ ಧರಿಸಿ ಕುಷ್ಟಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ಕುಷ್ಟಗಿ ಪಟ್ಟಣದ ಪಿ ಎಸ್ಐ ತಿಮ್ಮಣ್ಣ ,ಮಾನಪ್ಪ ನಾಯಕ,ಹಾಗೂ ಪೋಲಿಸ್ ಸಿಬ್ಬಂದಿ, ಆಟೋ ಚಾಲಕರು ಖಾಸಗಿ ವಾಹನ ಚಾಲಕರು,ತಾವರಗೇರಿಯ ಕಲಾ ತಂಡದವರು ಹಾಗೂ ದ್ವಿಚಕ್ರ ವಾಹನ ಚಾಲಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Leave a Reply