Belagavi

೧೪ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಆಹ್ವಾನ


ಬೆಳಗಾವಿ:೧೯- ಗಡಿಭಾಗವಾದ ಕಾಗವಾಡದಲ್ಲಿ ಇದೇ ತಿಂಗಳು ಬರುವ ೩೦ ಹಾಗೂ ೩೧ ರಂದು ಎರಡು ದಿನಗಳವರೆಗೆ ನಡೆಯುವ, ೧೪ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ, ಕೆ.ಎಲ್.ಇ.ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ಜಿಲ್ಲಾ ಕ.ಸಾ.ಪ.ದಿಂದ ಆಹ್ವಾನ ನೀಡಲಾಯಿತು.
ಬೆಳಗಾವಿ ನಗರದಲ್ಲಿರುವ ಅವರ ನಿವಾಸದಲ್ಲಿ ಸೋಮವಾರ ಜಿಲ್ಲಾ ಕ.ಸಾ.ಪ.ಅಧ್ಯಕ್ಷೆ ಮಂಗಲಾ ಶ್ರೀ ಮೆಟಗುಡ್ಡ ಕಾಗವಾಡ ತಾಲೂಕಾ ಅಧ್ಯಕ್ಷ ಡಾ.ಸಿದ್ಧನಗೌಡ ಕಾಗೆ ಹಾಗೂ ಕ.ಸಾ.ಪ. ಸದಸ್ಯರು ಡಾ.ಪ್ರಭಾಕರ ಕೋರೆ ಅವರಿಗೆ ಕನ್ನಡ ರುಮಾಲದೊಂದಿಗೆ ಸನ್ಮಾನಿಸಿ, ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ನೀಡಿದರು. ಹಾಗೂ ಶ್ರೀಮತಿ ಆಶಾದೇವಿ ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಿಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಪ್ರಭಾಕರ ಕೋರೆ ಅವರು ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತಿಗಳಿಗೆ, ಕವಿಗಳಿಗೆ ಮೀಸಲಾಗಿದ್ದು, ನಾನು ಸಾಹಿತಿ ಅಲ್ಲದಿದ್ದರೂ, ನನಗೆ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ನೀಡಿದ್ದು ಸಂತಸವಾಗಿದೆ. ಗಡಿಭಾಗದ ಕಾಗವಾಡದಲ್ಲಿ ಜರುಗುವ ಈ ಸಮ್ಮೇಳನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಿ, ನಾಡಿನ ಇತಿಹಾಸದಲ್ಲಿ ದಾಖಲೆ ನಿರ್ಮಾಣ ಮಾಡಿ, ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ಮೆರಗು ತರೋಣವೆಂದು ನುಡಿದರು.
ಜಿಲ್ಲಾ ಕ.ಸಾ.ಪ.ಅಧ್ಯಕ್ಷೆ ಮಂಗಲಾ ಶ್ರೀ ಮೆಟಗುಡ್ಡ ಅವರು ಮಾತನಾಡಿ ಕನ್ನಡ ಪ್ರೇಮಿಯಾಗಿರುವ ಡಾ.ಪ್ರಭಾಕರ ಕೋರೆ ಅಣ್ಣಾ ಅವರು ೧೪ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ಹೆಮ್ಮೆಯಾಗಿದೆ. ಅವರ ಅಧ್ಯಕ್ಷತೆಯಲ್ಲಿ ಕಾಗವಾಡದಲ್ಲಿ ನಡೆಯುವ ಸಮ್ಮೇಳನ ಯಶಸ್ವಿಯಾಗಲಿದೆ ಎಂದರು.
ಡಾ.ಬಸವರಾಜ ಜಗಜಂಪಿ ಮಾತನಾಡಿ ಕಾಗವಾಡದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯಬೇಕು. ಸಮಯಕ್ಕೆ ಸರಿಯಾಗಿ ಗೋಷ್ಠಿಗಳನ್ನು ನಡೆಸಬೇಕು. ಡಾ.ಪ್ರಭಾಕರ ಕೋರೆಯವರು ಸರ್ವಾಧ್ಯಕ್ಷರಾಗಿದ್ದು ನಮಗೆಲ್ಲ ಹೆಮ್ಮೆಯಾಗಿದೆ ಎಂದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಅಥಣಿ, ಚಿಕ್ಕೋಡಿ, ಹುಕ್ಕೇರಿ, ಕಿತ್ತೂರ, ನಿಪ್ಪಾಣಿ, ರಾಯಬಾಗ, ಕಾಗವಾಡ ಹಾಗೂ ಇನ್ನಿತರ ತಾಲೂಕಿನ ಕ.ಸಾ.ಪ. ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು. ಜ್ಯೋತಿ ಬದಾಮಿ, ಎಮ್.ವಾಯ್.ಮೆಣಸಿನಕಾಯಿ, ಡಾ.ಹೇಮಾವತಿ ಸೊನೊಳ್ಳಿ, ಪ್ರಕಾಶÀ ದೇಶಪಾಂಡೆ, ಡಾ.ಸಿದ್ಧನಗೌಡ ಕಾಗೆ, ಯ.ರು.ಪಾಟೀಲ, ಶ್ರೀಪಾದ ಕುಂಬಾರ, ಡಾ.ಸೋಮಶೇಖರ ಹಲಸಗಿ, ಬಾಬು ನಾಯಕ, ಗೌರಾದೇವಿ ತಾಳಿಕೋಟಿಮಠ, ಪ್ರೇಮಾ ಅಂಗಡಿ, ಅನ್ನಪೂರ್ಣಾ ಕನೋಜ, ಪಾರ್ವತಿ ಪಾಟೀಲ, ನೀಲಗಂಗಾ ಚರಂತಿಮಠ, ಶಶಿಕಲಾ ಯಲಿಗಾರ, ಭುವನೇಶ್ವರಿ ಪೂಜೇರಿ, ಅಕ್ಕಮಹಾದೇವಿ ತೆಗ್ಗಿ, ಇಂದಿರಾ ಮೊಟೆಬೆನ್ನೂರ, ಸುನಂದಾ ಎಮ್ಮಿ, ಶಾಂತಾ ಮಸೂತಿ, ರಂಜನಾ ಪಾಟೀಲ, ನಿರ್ಮಲಾ ಬಟ್ಟಲ, ಅನಿತಾ ಮೂಗತ್ತಿ, ಜಯಶ್ರೀ ನಿರಾಕಾರಿ ಹಾಗೂ ೧೫೦ರಷ್ಟು ಪ್ರಸಿದ್ಧ ಹಿರಿಯ, ಕಿರಿಯ ಸಾಹಿತಿಗಳು ಸೇರಿದಂತೆ, ಕ.ಸಾ.ಪ.ಪದಾಧಿಕಾರಿಗಳು ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.


Leave a Reply