Belagavi

ಡಾ:ಡಿ.ಎಸ್.ಕರ್ಕಿ ಕನ್ನಡ ಸಾಹಿತ್ಯ/ಸಾಂಸ್ಕೃತಿಕ ಭವನ ಕಟ್ಟಡಕ್ಕೆ ಜಿಲ್ಲಾ ಕ.ಸಾ.ಪ.ವತಿಯಿಂದ ಮತ್ತೆ ಐದು ಲಕ್ಷ ರೂಪಾಯಿಗಳ ಬಿಡುಗಡೆ


ಬೆಳಗಾವಿ: ಡಾ.ಡಿ.ಎಸ್.ಕರ್ಕಿ ಕನ್ನಡ ಸಾಹಿತ್ಯ/ಸಾಂಸ್ಕೃತಿಕ ಭವನ ಸಾ:ಹಿರೇಕೊಪ್ಪ ಕೆ.ಎಸ್. ತಾ:ರಾಮದುರ್ಗ, ಜಿ:ಬೆಳಗಾವಿ. ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಭವನದ ಕಟ್ಟಡ ನಿರ್ಮಾಣಕ್ಕೆ, ಮತ್ತೆ ೫,೦೦,೦೦೦=೦೦ (ಐದು ಲಕ್ಷ) ರೂಪಾಯಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿಡುಗಡೆ ಮಾಡಲಾಯಿತು. ಈ ಮೊದಲು ಕೂಡಾ (ಐದು ಲಕ್ಷ) ರೂಪಾಯಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಘಟಕ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆ ವತಿಯಿಂದ  ಬಿಡುಗಡೆ ಮಾಡಲಾಗಿದೆ. ಶ್ರೀ ಸಂಜೀವ ಕುಮಾರ ಕಾರ್ಯನಿರ್ವಾಹಕ ಇಂಜನೀಯರರು, ಲೋಕೋಪಯೋಗಿ ಇಲಾಖೆ ಬೆಳಗಾವಿ ವಿಭಾಗ. ಇವರ ವತಿಯಿಂದ ಲೋಕೋಪಯೋಗಿ ಇಲಾಖೆಯ ಅಧೀಕ್ಷಕರಾದ ಶ್ರೀ.ಸಿ.ಟಿ.ಅಂಟರದಾನಿ ಅವರಿಗೆ, ಸೋಮವಾರ ದಿ:೧೮/೦೧/೨೦೨೧ ರಂದು ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು (ಐದು ಲಕ್ಷ) ರೂಪಾಯಿಗಳ ಚೆಕನ್ನು ಸಲ್ಲಿಸಿದರು. ಜೊತೆಗೆ ಯ.ರು.ಪಾಟೀಲ, ಪ್ರಕಾಶ ದೇಶಪಾಂಡೆ, ಬಾಬು ನಾಯಕ ಮುಂತಾದವರು ಇದ್ದರು.


Leave a Reply