Belagavi

ಯರಗಟ್ಟಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಉಪಸಭಾಪತಿ ಆನಂದ ಮಾಮನಿ ಆಯ್ಕೆ


ಯರಗಟ್ಟಿ : ಯರಗಟ್ಟಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ವಿಧಾನ ಸಭಾ ಉಪಸಭಾಪತಿಗಳಾದ ಆನಂದ ಚಂ. ಮಾಮನಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಅಧ್ಯಕ್ಷರಾದ ರಾಜೇಂದ್ರ ವಾಲಿ ತಿಳಿಸಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಳ್ಳುವಂತೆ ಶಾಸಕರಲ್ಲಿ ಮನವಿ ಮಾಡಿದಾಗ ಅವರು ಒಪ್ಪಿಗೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ ಎಸ್ ಕುರುಬಗಟ್ಟಿಮಠ, ಬಿ ಆಯ್ ಚಿನಗುಡಿ, ತಮ್ಮಣ್ಣಾ ಕಾಮನ್ನವರ, ವಿ ಬಿ ಗೌಡರ, ರಾಜಶೇಖರ ಬಿರಾದಾರ, ಭಾಸ್ಕರ ಹಿರೇಮೇತ್ರಿ, ಶಿವಾನಂದ ಪಟ್ಟಣಶೆಟ್ಟಿ, ಎಸ್ ಬಿ ಬೆಟ್ಟದಗೌಡರ, ಡಾ ವಿ ಎಮ್ ಪಟ್ಟಣ ಇನ್ನುಳಿದ ಸದಸ್ಯರು ಉಪಸ್ಥಿತರಿದ್ದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply