State

ಜನವರಿ 21 ರಂದು ದಾಸೋಹದಿನ


#ದಾಸೋಹದಿನ, ಜನವರಿ 21 ರಂದು
ತ್ರಿವಿಧ ದಾಸೋಹಿ ಮಾನವೀಯತೆ ನೈಜ ಪರಿಪಾಲಕ ಸರ್ವರ ಆರಾಧ್ಯ ದೈವ ಪರಮಪೂಜ್ಯಡಾ.ಶಿವಕುಮಾರ ಮಹಾಸ್ವಾಮಿಗಳ ಎರಡನೇ ಪುಣ್ಯ ಸ್ಮರಣೆಯನ್ನು ದಾಸೋಹ ದಿನವನ್ನಾಗಿ ಆಚರಿಸುವ ಕುರಿತು .
ತ್ರಿವಿಧ ದಾಸೋಹ ಮೂರ್ತಿ ಗಳು ಈ ಶತಮಾನದ ಯುಗಪುರುಷರಾದ ಬಸವಾದಿ ಪ್ರಮತರ ಕಾಯಕ ದಾಸೋಹ ಸಿದ್ಧಾಂತವನ್ನು ಜೀವಂತಗೊಳಿಸಿ ಎಲ್ಲರ ಮನೆ ಮನಸ್ಸಿನಲ್ಲಿ ನೆಲೆ ನಿಲ್ಲುವಂತೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳು ಆಶ್ರಯ ಶಿಕ್ಷಣ ದಾಸೋಹ ಕಲ್ಪಿಸಿ ಪ್ರತಿದಿನ ಹತ್ತು ಸಾವಿರ ಮಕ್ಕಳಿಗೆ ಪ್ರಸಾದವನ್ನು ಬಡಿಸಿದ ಭಾರತದ ಏಕೈಕ ಪವಿತ್ರ ಸ್ಥಳ ಸಿದ್ಧಗಂಗಾ ಮಠ.
ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಲಿಂಗೈಕ್ಯ ದಿನವನ್ನು ಪುಣ್ಯ ಸ್ಮರಣೆ ಮಾಡುತ್ತಾ ಪೂಜ್ಯ ಶ್ರೀಗಳವರ ಭಕ್ತವೃಂದ ಅಭಿಮಾನಿಗಳು ಮನೆಗಳಲ್ಲಿ ಆಚರಿಸಬೇಕು ಮನೆಗಳಲ್ಲಿ ಶ್ರೀಗಳ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಪೂಜಿಸಿ ಪೂಜ್ಯರ ಹೆಸರಿನಲ್ಲಿ ಕೈಲಾದಷ್ಟು ದಾಸೋಹವನ್ನು ಮಾಡುವದರ ಮೂಲಕ ದಾಸೋಹ ದಿನವನ್ನು ಆಚರಿಸಬೇಕೆಂದು ಬಯಸುತ್ತೇವೆ
ಸರ್ಕಾರವೂ ಕೂಡ ಅಧಿಕೃತವಾಗಿ ಎಲ್ಲಾ ಶಾಲಾ ಕಾಲೇಜುಗಳ ಮಕ್ಕಳಿಗೆ ಪೂಜ್ಯರ ಸಾಧನೆ ಸೇವೆಯನ್ನು ತಿಳಿಸಿ ದಾಸೋಹ ದಿನವನ್ನಾಗಿ ಘೋಷಿಸಬೇಕೆಂದು ವೀರಶೈವ ಲಿಂಗಾಯತ ಯುವ ವೇದಿಕೆ ಮುಖ್ಯಮಂತ್ರಿ ಯಡಿಯೂರಪ್ಪನವರ ರಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಎಂದು ಪ್ರಶಾಂತ ಕಲ್ಲೂರ್
ರಾಜ್ಯ ಅಧ್ಯಕ್ಷರು ವೀರಶೈವ ಲಿಂಗಾಯತ ಯುವ ವೇದಿಕೆ ಮತ್ತು ವೀರಶೈವ ಲಿಂಗಾಯತ ಯುವ ವೇದಿಕೆ ಪದಾಧಿಕಾರಿಗಳು ಕರ್ನಾಟಕ. ಹೇಳಿದರು.

(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply