Belagavi

ತಂಬಾಕು ಉತ್ಪನ್ನ ಮಾರಾಟ: ೩೩ ಪ್ರಕರಣ ದಾಖಲು


ಬೆಳಗಾವಿ, ಜ.೧೯: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆಯ ಸಹಯೋಗದೊಂದಿಗೆ ಜ.೧೮ ಸೋಮವಾರದಂದು ಬೆಳಗಾವಿ ನಗರದ ಸಾಂಬ್ರಾ ಗ್ರಾಮದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿಯಲ್ಲಿ ದಾಳಿಯನ್ನು ನಡೆಸಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳ ಮಾರ್ಗದರ್ಶನದಡಿಯಲ್ಲಿ ಸಾರ್ವಜನಿಕರಿಗೆ ಕೋಟ್ಪಾ-೨೦೦೩ ಕಾಯ್ದೆ ವಿರುದ್ದವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮತ್ತು ನೇರ ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶನ, ಶೈಕ್ಷಣಿಕ ಆವರಣದ ೧೦೦ ಮೀಟರ ಅಂತರದೋಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ ಮಾಲಿಕರಿಗೆ ಜಾಗೃತಿ ಮೂಡಿಸಿ ಹಾಗು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಲಾಯಿತು.
ಕೋಟ್ಪಾ-೨೦೦೩ ಕಾಯ್ದೆ ಅಡಿಯಲ್ಲಿ ಒಟ್ಟು ೩೩ ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲಾಯಿತು ಹಾಗೂ ಸೆಕ್ಷನ್-೪ ನಾಮಫಲಕವನ್ನು ವಿತರಿಸಲಾಯಿತು. ಹಾಗೂ ಸಾರ್ವಜನಿಕರಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಅರಿವು ಮೂಡಿಸಲಾಯಿತು.
ಸದರಿ ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಡಾ.ಶ್ವೇತಾ ಪಾಟೀಲ ಜಿಲ್ಲಾ ಸಲಹೆಗಾರರು, ಕವಿತಾ ರಾಜನ್ನವರ ಜಿಲ್ಲಾ ಸಮಾಜ ಕಾರ್ಯಕತೆ, ಮಲ್ಲಿಕಾರ್ಜುನ ಸುಲದಾಳ ಹಾಗೂ ಹನುಮಂತ ಜರಕುದ್ರಿ ಪೊಲೀಸ ಸಿಬಂದ್ದಿಗಳು ಸದರಿ ದಾಳಿಯಲ್ಲಿ ಉಪಸ್ಥಿತರಿದ್ದರು ಎಂದು ಜಿಲ್ಲಾ ಸಮೀಕ್ಷಾ/ ತಂಬಾಕು ನಿಯಂತ್ರಣಧಿಕಾರಿಗಳು ಅವರು ಪ್ರಕಟಣೆಯಲ್ಲಿ ತಿಳಿದ್ದಾರೆ.


Leave a Reply