BallaryBelagavibidarGadaggulburgaKarnatakakarwar uttar kannadaKoppalvijayapur

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರಭಾಕರ್ ಕೋರೆ ಅವರಿಗೆ ಆಹ್ವಾನ

ಬೆಳಗಾವಿ ; ಕಾಗವಾಡದಲ್ಲಿ ನಡೆಯುತ್ತಿರುವ 14 ನೇ ಹದಿನಾಲ್ಕನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಕೇಲಿ ಸಂಸ್ಥೆಯ ಚೇರ್ಮನ್ ಪ್ರಭಾಕರ್ ಕೋರೆ ಅವರಿಗೆ ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಆಹ್ವಾನವನ್ನು ನೀಡಲಾಯಿತು .

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಅವರ ನೇತೃತ್ವದಲಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಪ್ರಭಾಕರ್ ಕೋರೆ ಅವರ ನಿವಾಸಕ್ಕೆ ತೆರಳಿ ಅವರಿಗೆ ಆಹ್ವಾನವನ್ನೂ ನೀಡಿದರು .ಇದೇ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಪರವಾಗಿ ಪ್ರಭಾಕರ ಕೋರೆ ಹಾಗೂ ಶ್ರೀಮತಿ ಆಶಾ ಪ್ರಭಾಕರ ಕೋರೆ ದಂಪತಿಗಳನ್ನು ಸತ್ಕರಿಸಲಾಯಿತು .

ಡಾ.ಬಸವರಾಜ ಜಗಜ೦ಪಿ ,ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ಬದಾಮಿ, ಎಂ ವೈ ಮೆಣಸಿನಕಾಯಿ, ಇತರ ಪದಾಧಿಕಾರಿಗಳಾದ ಡಾ ಹೇಮಾವತಿ ಸೊನೊಳ್ಳಿ ,ಪ್ರಕಾಶ ದೇಶಪಾಂಡೆ ,ಡಾ ಸಿದ್ಧನಗೌಡ ಕಾಗೆ ,ಯ ರು ಪಾಟೀಲ, ಶ್ರೀಪಾದ ಕುಂಬಾರ ,ಡಾ ಸೋಮಶೇಖರ ಹಲಸಗಿ ,ಬಾಬು ನಾಯ್ಕ್ , ಗೌರಾದೇವಿ ತಾಳಿಕೋಟಿಮಠ , ಪ್ರೇಮಾ ಅಂಗಡಿ, ಅನ್ನಪೂರ್ಣಾ ಕನೋಜ , ಪಾರ್ವತಿ ಪಾಟೀಲ ,ನೀಲಗಂಗಾ ಚರಂತಿಮಠ , ಶಶಿಕಲಾ ಯಲಿಗಾರ , ಭುವನೇಶ್ವರಿ ಪೂಜಾರಿ , ಅಕ್ಕಮಹಾದೇವಿ ತೆಗ್ಗಿ , ಇಂದಿರಾ ಮೂಟೆಬೆನ್ನೂರು ,ಸುನಂದಾ ಎಮ್ಮಿ ,ಶಾಂತಾ ಮಸೂತಿ, ರಂಜನಾ ಪಾಟೀಲ, ನಿರ್ಮಲಾ ಬಟ್ಟಲ ,ಅನಿತಾ ಮೂಗತಿ, ಜಯಶ್ರೀ ನಿರಾಕಾರಿ    ಹಾಗೂ ಅಥಣಿ ಕಾಗವಾಡ ಹುಕ್ಕೇರಿ ಚಿಕ್ಕೋಡಿ ರಾಯಬಾಗ ಬೆಳಗಾವಿ ಬೈಲಹೊಂಗಲ ಕಿತ್ತೂರು ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ತಾಲ್ಲೂಕುಗಳು ಕಸಾಪ ತಾಲೂಕಾ ಅಧ್ಯಕ್ಷರುಗಳು ,ಜಿಲ್ಲಾ ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker