Gadag

ಜನಪರ ಉತ್ಸವ 2021 ಸಾಂಸ್ಕøತಿಕ ಕಾರ್ಯಕ್ರಮಗಳು

ಗದಗ   19 :  ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಜನಪರ ಉತ್ಸವ  2021 ವನ್ನು  ಜನೆವರಿ 21  ಸಂಜೆ 5 ಗಂಟೆಗೆ ರೋಣ ತಾಲೂಕಿನ ಕೊತಬಾಳದ ಅಂಕಲಗಿ ಅಡವಿಸಿದ್ದೇಶ್ವರ ಸಂಸ್ಥಾನಮಠದಲ್ಲಿ ಏರ್ಪಡಿಸಲಾಗಿದೆ. ಅಂಕಲಗಿ ಅಡವಿಸಿದ್ಧೇಶ್ವರ ಸಂಸ್ಥಾನಮಠದ  ಗಂಗಾಧರೇಶ್ವರ ಮಹಾಸ್ವಾಮಿಗಳು  ಮತ್ತು  ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ  ಅಧ್ಯಕ್ಷರು ಹಾಗೂ ರೋಣ ಶಾಸಕ ಕಳಕಪ್ಪ ಬಂಡಿ ಅಧ್ಯಕ್ಷತೆ ವಹಿಸುವರು.
ಗದಗ ಜಿ.ಪಂ. ಅಧ್ಯಕ್ಷ ಈರಪ್ಪ ನಾಡಗೌಡ್ರ, ಸಂಸದರುಗಳಾದ ಶಿವಕುಮಾರ ಉದಾಸಿ, ಪಿಸಿ. ಗದ್ದಿಗೌಡರ, ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ,  ಎಸ್.ವಿ. ಸಂಕನೂರ , ಪ್ರದೀಪ ಶೆಟ್ಟರ್ , ಜಿ.ಪಂ. ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ ಹುಲ್ಲಣ್ಣವರ , ಜಿ.ಪಂ. ಸದಸ್ಯ ಪಡಿಯಪ್ಪ ಪೂಜಾರ ,  ತಾ.ಪಂ. ಅಧ್ಯಕ್ಷೆ ಶ್ರೀಮತಿ ಪ್ರೇಮವ್ವ ನಾಯಕ,  ಉಪಾಧ್ಯಕ್ಷೆ  ಶ್ರೀಮತಿ ಇಂದಿರಾ ತೇಲಿ, ರೋಣ ಎ.ಪಿ.ಎಂ.ಸಿ.ಅಧ್ಯಕ್ಷ ರಾಜಣ್ಣ ಹೂಲಿ, ರೋಣ ತಾ.ಪಂ. ಸದಸ್ಯ ಸಿದ್ಧಲಿಂಗಪ್ಪ ಯಾಳಿ,  ಎ.ಪಿ.ಎಂ.ಸಿ. ಸದಸ್ಯರಾದ ಹನುಮಂತಪ್ಪ ನಾಗರಾಜ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ :  ಶಹನಾಯಿ ವಾದನ, ಪಾರಿಜಾತ ಭಜನೆ, ಜಗ್ಗಲಿಗೆ ಮೇಳ, ಗೀಗೀ ಪದ, ಶಾಸ್ತ್ರೀಯ ಸಂಗೀತ, ಜಾಗೃತಿ ಗೀತೆಗಳು , ಸುಡುಗಾಡ ಸಿದ್ಧರಾಟ, ಜನಪದ ಪದಗಳು, ದೀಪ ನೃತ್ಯ , ಸಂಪ್ರದಾನಿ ವಾದನ, ಜನಪದ ನೃತ್ಯ, ಮಹಿಳಾ ವೀರಗಾಸೆ, ಕೋಲಾಟ, ಲಾವಣಿ ಪದ, ಹಗಲು ವೇಷ , ಜೋಗತಿ ನೃತ್ಯ , ಹೋರಾಟದ ಹಾಡುಗಳು , ಸಂಪ್ರದಾಯ ಪದಗಳು , ಗೀಗೀ ಪದ , ತತ್ವ ಪದ ಕಾರ್ಯಕ್ರಮಗಳು  ಜರುಗಲಿವೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ  ಸರ್ವರಿಗೂ ಸ್ವಾಗತ ಕೋರಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker