Uncategorized

ವಿಕಲಚೇತನರಿಗೆ ಅನುಕಂಪ ತೋರುವ ಬದಲು ಅವಕಾಶ ನೀಡೋಣ : ಬಿ. ಕಲ್ಲೇಶ


ಗದಗ  ಜ.19 : ಸಾಧನೆಗೆ ಅಂಗವೈಕಲ್ಯತೆ ಅಡ್ಡಿಯಾಗಲಾರದು ಎಂಬುದು ಅನೇಕ ನಿದರ್ಶನಗಳ ಮೂಲಕ ಕಂಡಿದ್ದೇವೆ. ವಿಕಲಚೇತನರಿಗೆ ಅನುಕಂಪ ತೋರುವ ಬದಲು ಅವಕಾಶ ನೀಡಬೇಕು ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ. ಕಲ್ಲೇಶ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ  ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ, ಅನುಷ್ಠಾನ ಮಾಡುತ್ತಿದೆ. ಅವುಗಳನ್ನು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಹೊಣೆಗಾರಿಕೆ ಅಧಿಕಾರಿಗಳು ಮಾಡಬೇಕು. ಆಗ ಮಾತ್ರ ವಿಕಲಚೇತನರ ಆರ್ಥಿಕ ಪ್ರಗತಿ ಸದ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿ.ಪಂ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಳ್ಳಲು ಇರುವ ಸರ್ಕಾರದ ಸೌಲಭ್ಯವನ್ನು ತಲುಪಿಸಲು ಕ್ರಮ ವಹಿಸಲಾಗುತ್ತಿದೆ. ಸೌಲಭ್ಯಗಳನ್ನು ಪದೇ ಪದೇ ಒಬ್ಬರೇ ಫಲಾನುಭವಿಗಳಿಗೆ ನೀಡುವುದನ್ನು ಬಿಟ್ಟು ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದರು.
ಸಾರ್ವಜನಿಕ ಸೇವೆ ಮಾಡಲು ಸರ್ಕಾರ ಅವಕಾಶ ನಮ್ಮೆಲ್ಲರಿಗೂ ಒದಗಿಸಿದೆ. ಅದನ್ನು ಅತ್ಯಂತ ಸಹಾನುಭೂತಿಯಿಂದ ನಿರ್ವಹಿಸೋಣ. ಮಾಡುವ ಕೆಲಸದಲ್ಲಿಯೇ ಸಾಧನೆ ಗುರಿಯನ್ನು ತಲುಪೆÇಣ. ಸಮಾಜದಲ್ಲಿ ಯಾರೊಬ್ಬರು ಹಸುವಿನಿಂದ ಬಳಲಬಾರದು ಈ ದಿಸೆಯಲ್ಲಿ ನಮ್ಮ ಕರ್ತವ್ಯ ನಿರ್ವಹಿಸೋಣ. ಸತತ ಪ್ರಯತ್ನಂ ಜಯದ ರಹಸ್ಯಂ ಎಂಬುದನ್ನು ಅರಿತು ಎಲ್ಲರು ಸತತ ಪ್ರಯತ್ನ ಪಡುವುದರಿಂದ ಜಯವನ್ನು ನಮ್ಮದಾಗಿಸಿಕೊಳ್ಳೋಣ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ. ಕಲ್ಲೇಶ ತಿಳಿಸಿದರು.
ನ್ಯಾಯವಾದಿ ಎಸ್ ಆರ್ ಘೋರ್ಪಡೆ ಅವರು ಅತಿಥಿ ಉಪನ್ಯಾಸ ನೀಡುತ್ತಾ, ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಕುರಿತು ಹಾಗೂ ಅವುಗಳ ಸದ್ಬಳಕೆ ಬಗ್ಗೆ ಮಾಹಿತಿ ನೀಡಿದರು. ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬಂತೆ ದಿವ್ಯಾಂಗ ಚೇತನರು ಕಾನೂನಿನ ಸಮಸ್ತ ಅರಿವನ್ನು ಹೊಂದಿರುವುದು ಅನಿವಾರ್ಯವಾಗಿದೆ. ಕಾನೂನನ್ನು ನಾವು ರಕ್ಷಿಸಿದರೆ ಕಾನೂನು ನಮ್ಮನ್ನು ರಕ್ಷಿಸುತ್ತದೆ.  ವಿಕಲ ಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಅಡಿಯಲ್ಲಿ 21 ವಿಭಾಗಗಳನ್ನು ಮಾಡಲಾಗಿದೆ ಆಸಿಡ್ ಎರಚುವಿಕೆಗೆ ಒಳಪಟ್ಟವರನ್ನು ವಿಶೇಷ ಸೌಲಭ್ಯ ನೀಡುವ ಪಟ್ಟಿಯಲ್ಲಿ ಸೇರಿಸಲಾಗಿದೆ. ಸಮಾನತೆಯ ಹಕ್ಕಿನ ಅಡಿಯಲ್ಲಿ  ವಿಕಲಚೇತನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹುದ್ದೆಗಳಲ್ಲಿ ತಾರತಮ್ಯ ಮಾಡದೆ ಅವಕಾಶವನ್ನು ಒದಗಿಸಿಕೊಡುವುದು ಅಗತ್ಯ ಎಂದು ನ್ಯಾಯವಾದಿ ಎಸ್ ಆರ್ ಘೋರ್ಪಡೆ ಸಹಲೆ ನೀಡಿದರು.
ಉಪವಿಭಾಗಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ಸರಿಯಾರಿ ತಲುಪುವಲ್ಲಿ ಎಂ.ಆರ್.ಡಬ್ಲೂ ಕಾರ್ಯಕರ್ತರು ಗ್ರಾಮೀಣ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಬೇಕು. ಸರ್ಕಾರದ ಯೋಜನೆಗಳನ್ನು ಹೆಚ್ಚು ಪ್ರಚಾರಗೊಳಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯಾದರ್ಶಿ ಎಸ್ ಜಿ ಸಲಗೆರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಕೆ. ಮಹಾಂತೇಶ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರತ್ನವ್ವ ಮುರಾರಿ ಪ್ರಾರ್ಥಿಸಿದರು, ಮಲ್ಲಪ್ಪ ಹೊಸಳ್ಳಿ ನಿರ್ವಹಿಸಿದರು, ಮಂಜುನಾಥ ಜೆ ವಂದಿಸಿದರು.
ಇದೇ ಸಂದರ್ಭದಲ್ಲಿ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ ಯು.ಡಿ.ಐ.ಡಿ ಕಾರ್ಡುಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಹಾಗೂ ಪ್ರಚಾರದ ಬ್ಯಾನರ, ಪೆÇೀಸ್ಟರ್ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.


Leave a Reply