Gadag

23 , 24 ರಂದು ಸ್ಪರ್ಧಾತ್ಮಕ ಪರೀಕ್ಷೆ :ವೀಕ್ಷಕ, ಸ್ಥಳೀಯ ನಿರೀಕ್ಷಣಾಧಿಕಾರಿ ಮತ್ತು ಮಾರ್ಗಾಧಿಕಾರಿಗಳ ನೇಮಕ


ಗದಗ   19 :  : ಕರ್ನಾಟಕ ಲೋಕಸೇವಾ ಆಯೋಗವು ನಡೆಸುತ್ತಿರುವ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಮತ್ತು ಕರ್ನಾಟಕ ಭವನ, ದೆಹಲಿಯ ಉಳಿಕೆ ಮೂಲ ವೃಂದದ ಮತ್ತು ಹೈದ್ರಾಬಾದ್ ಕರ್ನಾಟಕ ವೃಂದದ ಸಹಾಯಕರು/ ಪ್ರಥಮ ದರ್ಜೇ ಸಹಾಯಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜನೆವರಿ 23 ಮತ್ತು ಜನೆವರಿ 24 ರಂದು ನಡೆಸಲಿದೆ.  ಜನೆವರಿ 23 ರಂದು ನಡೆಸುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಒಂದು ಪತ್ರಿಕೆಯನ್ನು ಒಳಗೊಂಡಿದ್ದು, ಪೂರ್ವಾಹ್ನ  10-00 ಗಂಟೆಯಿಂದ 11.30 ಗಂಟೆಯವರೆಗೆ ಒಂದು ಅಧಿವೇಶನದಲ್ಲಿ ಮತ್ತು  ಜನೆವರಿ 24 ರಂದು  ನಡಸುವ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಒಂದು  ಪತ್ರಿಕೆಯು ಪೂರ್ವಾಹ್ನ  ಬೆ. 10 ಗಂಟೆಯಿಂದ ಬೆ.11.30 ಗಂಟೆಯವರೆಗೆ ಹಾಗೂ ಮತ್ತೊಂದು ಪತ್ರಿಕೆಯು ಅಪರಾಹ್ನ 2 ಗಂಟೆಯಿಂದ ಮ.3.30 ಗಂಟೆಯವರೆಗೆ ಎರಡು ಅಧಿವೇಶನದಲ್ಲಿ ನಡೆಸಲಾಗುತ್ತಿದೆ.
ಪರೀಕ್ಷೆಗಳು ಸುಗಮವಾಗಿ ಮತ್ತು ವ್ಯವಸ್ಥಿತವಾಗಿ ನಡೆಯಲು ದಿ.23  ರಂದು ಜರುಗುವ 2 ಪರೀಕ್ಷಾ ಕೇಂದ್ರಗಳಿಗೆ  ಮತ್ತು 24 ರಂದು ಜರುಗುವ 26  ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರು, ಸ್ಥಳೀಯ ನಿರೀಕ್ಷಣಾಧಿಕಾರಿ ಮತ್ತು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಸದರಿ ಅಧಿಕಾರಿಗಳು ತಮಗೆ ನಿಗದಿಪಡಿಸಿದ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಬಂಧಕಾಜ್ಞೆ ಜಾರಿ :-
ಕರ್ನಾಟಕ ಲೋಕಸೇವಾ ಆಯೋಗವು ನಡೆಸುತ್ತಿರುವ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಮತ್ತು ಕರ್ನಾಟಕ ಭವನ, ದೆಹಲಿಯ ಉಳಿಕೆ ಮೂಲ ವೃಂದದ ಮತ್ತು ಹೈದ್ರಾಬಾದ್ ಕರ್ನಾಟಕ ವೃಂದದ ಸಹಾಯಕರು/ ಪ್ರಥಮ ದರ್ಜೇ ಸಹಾಯಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜನೆವರಿ 23 ಮತ್ತು ಜನೆವರಿ 24 ರಂದು ನಡೆಸಲಿದೆ.  ಜನೆವರಿ 23 ರಂದು ನಡೆಸುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಒಂದು ಪತ್ರಿಕೆಯನ್ನು ಒಳಗೊಂಡಿದ್ದು, ಪೂರ್ವಾಹ್ನ 10 ಗಂಟೆಯಿಂದ 11.30 ಗಂಟೆಯವರೆಗೆ ಒಂದು ಅಧಿವೇಶನದಲ್ಲಿ ಮತ್ತು  ಜನೆವರಿ 24 ರಂದು  ನಡಸುವ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಒಂದು  ಪತ್ರಿಕೆಯು ಪೂರ್ವಾಹ್ನ  ಬೆ. 10 ಗಂಟೆಯಿಂದ ಬೆ.11.30 ಗಂಟೆಯವರೆಗೆ ಹಾಗೂ ಮತ್ತೊಂದು ಪತ್ರಿಕೆಯು ಅಪರಾಹ್ನ 2 ಗಂಟೆಯಿಂದ ಮ.3.30 ಗಂಟೆಯವರೆಗೆ ಎರಡು ಅಧಿವೇಶನದಲ್ಲಿ ನಡೆಸಲಾಗುತ್ತಿದೆ.

       ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು  ಮತ್ತು  ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ  ಜಿಲ್ಲೆಯಲ್ಲಿ  ದಿ.23 ರಂದು  ಜರುಗುವ  2 ಪರೀಕ್ಷಾ ಕೇಂದ್ರಗಳಲ್ಲಿ  ಹಾಗೂ ದಿ.24 ರಂದು ಜರುಗುವ 26 ಪರೀಕ್ಷಾ ಕೇಂದ್ರಗಳಲ್ಲಿ ಬೆ. 9.30 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ ಅಥವಾ ಐದು ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು ಅಥವಾ ವ್ಯಕ್ತಿಗಳ ಗುಂಪುಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಿರುವ ಗದಗ-ಬೆಟಗೇರಿ ನಗರದ ವ್ಯಾಪ್ತಿಯಲ್ಲಿ ಬರುವ ಝರಾಕ್ಸ ಅಂಗಡಿ, ಬುಕ್ ಸ್ಟಾಲ್ , ಫೋಟೋ ಕಾಪಿಯರ್  ಬಂದ್ ಮಾಡಲು ಆದೇಶಿಸಿದೆ.  ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ , ಸ್ಮಾರ್ಟ ಫೋನ್ , ಸ್ಮಾರ್ಟ ವಾರ್ಚ , ಬ್ಲೂ ಟೂಥ್ ಡಿವೈಸ್,  ಪೇಜರ್, ವೈರ್ ಲೆಸ್, ಕ್ಯಾಲ್ಕುಲೇಟರ, ಇತರೆ ಮೊದಲಾದ ಎಲೆಕ್ಟ್ರಾನಿಕ್ಸ ಉಪಕರಣಗಳು, ಸ್ಲೈಡ್ ರೂಲ್ ಮಾರ್ಕರ್, ಲಾಗ್ ಟೇಬಲ್, ವೈಟ್ ಫ್ಲೂಯಿಡ್, ಬ್ಲೇಡು, ಎರೇಸರ್  ಇತ್ಯಾದಿ ತರುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Leave a Reply