BallaryBelagavibidarGadaggulburgakarwar uttar kannadaKoppalStatevijayapur

ಬನಶಂಕರಿ ಪೌಂಡೇಶನ್ ಉದ್ಘಾಟನೆ 


ಹುಕ್ಕೇರಿ ; ಪ್ರಮೋದ ಮುತಾಲಿಕ್ ಅವರ ತಂದೆ ತಾಯಿಯವರ ಸ್ಮರಣಾರ್ಥ . ಬನಶಂಕರಿ ಪೌಂಡೇಶನ ಸಂಸ್ಥೆಯನ್ನು ನಾವೆಲ್ಲರು ಉದ್ಘಾಟನೆ ಮಾಡಿದೆವು ಮನುಷ್ಯ ಅಂದ ಮೇಲೆ ಸಮಾಜ ಸೇವೆ ಏನಾದರು ಒಂದು ಕೆಲಸ‌ಮಾಡಬೇಕು ಆದರೆ ಬದುಕಿನಲ್ಲಿ ತಂದೆ ತಾಯಿ ಋಣ ತಿರಿಸಲಿಕ್ಕೆ ಆಗುವುದಿಲ್ಲ ಬದುಕಿನಲ್ಲಿ ಏನಾದರು ಋಣ ತಿರಿಸಬೇಕೆಂದರೆ ಸಮಾಜ ಸೇವೆ ಮಾಡುವ ಮೂಲಕ ತಂದೆ ತಾಯಿ ಋಣ ತಿರಿಸಬಹುದು‌ಎಂದು ಹುಕ್ಕೇರಿ ವಿರಕ್ತಮಠದ ಶಿವ ಬಸವ ಮಾಹಾ ಸ್ವಾಮಿಜಿಗಳು ತಮ್ಮ ನುಡಿಗಳಲ್ಲಿ ಹೇಳಿದರು.

ಶ್ರೀ ಅಭಿನವ ಮಂಜುನಾಥ ಮಹಾರಾಜ ಕ್ಯಾರಗುಡ್ಡ ಇವರು ಮಾತನಾಡುತ್ತಾ ತನ್ನ ಇಡಿ ಕುಟುಂಬವನ್ನೆ ಸಮಾಜಕ್ಕೆ ಅರ್ಪಿತ ಮಾಡತಕ್ಕಂತ ಒಂದು ಪೌಂಡೇಶನ್ ಅಂದರೆ ಬನಶಂಕರಿ ಪೌಂಡೇಶನ್. ಯಾರು ತಮ್ಮ ಕುಂದು ಕೊರತೆಗಳ ಬಗ್ಗೆ ನರಳಿ ಈ ಜೀವನ ತ್ಯಾಗ ಮಾಡಲು ನಿರ್ಧರಿಸುವರಿಗೆ ಅಂತವರಿಗೆ ಕಷ್ಟ ಕಾಲಕ್ಕೆ ನೆರವಾಗುವ ಪೌಂಡೇಶನ್ ಅಂದರೆ ಬನಶಂಕರಿ ಪೌಂಡೇಶನ್.
ಪ್ರಮೋದ ಮುತಾಲಿಕ್ ಬನಶಂಕರಿ ಪೌಂಡೇಶನ್ ಅಧ್ಯಕ್ಷರು ಮಾತನಾಡುತ್ತಾ ಸರ್ಕಾರಿ ನೌಕರರು ಮಾತ್ರ ಎಲ್ಲಾ ಕೆಲಸಗಳನ್ನೂ ಮಾಡಬೇಕೆಂದರೆ ಅದು ಆಗದು ಎಲ್ಲರೂ ಕೂಡಿಕೊಂಡು ನಾವು ಈ ಒಂದು ಸಂಘಟನೆ ಸ್ಥಾಪಿಸಿ ಇದರ ಮುಖೇನ ಸಮಾಜ ಸೇವೆ ಮಾಡೊನಾ ಇದಕ್ಕೆ ಬನಶಂಕರಿ ಪೌಂಡೇಶನ್ ಸಂಸ್ಥೆಗೆ ತಮ್ಮ ಎಲ್ಲರ ಸಹಕಾರ ಮಾರ್ಗದರ್ಶನ ನೀಡಬೇಕು ಎಂದರು.
ಈ ಸಂಸ್ಥೆ ಉದ್ಘಾಟನೆ ಯನ್ನು ಸ್ಥಳೀಯ ಅಡವಿಸಿದ್ದೇಶ್ವರ ಮಠದಲ್ಲಿ ನಡೆಯಿತು ಈ ಸಮಾರಂಭದಲ್ಲಿ . ಪುರಸಭೆ ಅಧ್ಯಕ್ಷ ಎ ಕೆ ಪಾಟೀಲ್ ಮಹಾವೀರ ನಿಲಜಗಿ ಪಿ ಜಿ ಕೊಣ್ಣೂರ , ವಿಜಯ ರವದಿ, ಹಾಗೂ ಸ್ವಾಮಿಜಿಗಳು ಉಪಸ್ಥಿತರಿದ್ದರು.ಸ್ವಾಗತ ಸಂಜು ಮುತಾಲಿಕ್ ಮಾಡಿದರು .ವಿನೋದ್ ಮುತಾಲಿಕ್ ವಂದನಾರ್ಪಣೆ ಮಾಡಿದರು.


Leave a Reply