Uncategorized

ನದಾಫ /ಪಿಂಜಾರ್ ಸಂಘದಿAದ ಸಾಂಕೇತಿಕ ಧರಣಿ : ಬೇಡಿಕೆಗಳ ಈಡೇರಿಕೆಗೆ ಆಗ್ರಹ


ಕೊಪ್ಪಳ : ನಿಗಮ ಮಂಡಳಿ ರಚನೆ ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ನದಾಫ್ / ಪಿಂಜಾರ ಸಂಘದವರು ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕರ್ನಾಟಕ ರಾಜ್ಯ ನದಾಫ್ / ಪಿಂಜಾರ ಜನಾಂಗವು ಶೈಕ್ಷಣಿಕವಾಗಿ , ಆರ್ಥಿಕವಾಗಿ , ಔದ್ಯೋಗಿಕವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದ್ದು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಸರಕಾರವು ಪ್ರತ್ಯೇಕ ನಿಗಮ ಮಂಡಳಿ ರಚಿಸಬೇಕು. ಹಲವಾರು ವರ್ಷಗಳಿಂದ ನಿರಂತರವಾಗಿ ಬೇಡಿಕೆಗಳನ್ನು ಪೂರೈಸಲು ವಿನಂತಿಸುತ್ತಾ ಬಂದರೂ ಸಹ ಯಾವುದೇ ಮನವಿಗಳನ್ನು ಪುರಸ್ಕರಿಸಿಲ್ಲ.ಸರಕಾರ ನಮ್ಮ ಬೇಡಿಕೆಗಳ ಬಗ್ಗೆ ಸ್ಪಂದಿಸುತ್ತಿಲ್ಲ. ನ್ಯಾಯಯುತ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಕೂಡಲೇ ಗಮನ ಹರಿಸಬೇಕು ಮತ್ತು ಈಡೇರಿಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಎಂ. ಮಾರುತಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಬೇಡಿಕೆಗಳಿಗೆ ಸ್ಪಂಧಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸರಕಾರಕ್ಕೆ ಒತ್ತಾಯಿಸಲು ಉಪವಾಸ ಸತ್ಯಾಗ್ರಹ , ಬೃಹತ್ ಪ್ರಮಾಣದ ಧರಣಿಗಳನ್ನು ಈಡೇರುವವರೆಗೂ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರಾಜ್ಯ ಸಮಿತಿಯ ಸಹ ಕರ‍್ಯದರ್ಶಿ ಶಹಾಬುದ್ದೀನಸಾಬ, ಜಿಲ್ಲಾಧ್ಯಕ್ಷ ಕೆ.ಎಫ್.ಮುದ್ದಾಬಳ್ಳಿ, ಪ್ರದಾನ ಕರ‍್ಯದರ್ಶಿ ಯಾಸೀನಸಾಬ, ಉಪಾಧ್ಯಕ್ಷ ಪಟ್ಟಣ ಪಂಚಾಯತ್ ಸದಸ್ಯ ಹೊನ್ನೂರಸಾಬ ಬೈರಾಪೂರ, ಟಿಪ್ಪು ಸುಲ್ತಾನ್ ಮಂಗಳೂರು, ಪೀರು ಎಚ್‌ರ‍್ಜಿ, ಅಲಿಸಾಬ ಗಬ್ಬೂರ, ಮುರ್ತುಜಾಸಾಬ ನದಾಪ ಯಲಬರ‍್ಗಾ, ಅಲ್ಲಾಸಾಬ ಗೊಂದಿಹೊಸಳ್ಳಿ , ಶ್ರೀಮತಿ ರೇಷ್ಮಾ , ಶ್ರೀಮತಿ ಶಂಷಾದ್ ಕುಕನೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.


Leave a Reply