Belagavi

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿಯಿಂದ ಜ.೨೬ರಂದು ರಾಯಣ್ಣನ ೨೨ನೇ ವರ್ಷದ ಆತ್ಮಜ್ಯೋತಿ ಯಾತ್ರೆ


ಬೈಲಹೊಂಗಲ ೨೦: ವರ್ಷ ಪದ್ಧತಿಯಂತೆ ಈ ವರ್ಷವು ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ನಂದಗಡದಿAದ ರಾಯಣ್ಣನ ಆತ್ಮಜ್ಯೋತಿ ತಂದು ಚನ್ನಮ್ಮನ ಸಮಾಧಿ ಸ್ಥಳಕ್ಕೆ ಅರ್ಪಿಸುವ ದೇಶಭಕ್ತಿ ಕಾರ್ಯಕ್ರಮವನ್ನು ಜ.೨೬ರಂದು ಶ್ರದ್ಧೆ, ಭಕ್ತಿಯಿಂದ ನಡೆಸಲಾಗುವದು. ಈ ರಾಷ್ಟಾçಭಿಮಾನದ ಕಾರ್ಯಕ್ರಮಕ್ಕೆ ನಾಡಿನ ಸಮಸ್ತ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ರಾಯಣ್ಣ ಸಮಿತಿ ಸಂಸ್ಥಾಪಕ ಸಿ.ಕೆ.ಮೆಕ್ಕೇದ ಹೇಳಿದರು.
ಪಟ್ಟಣದ ಸಂಗಮ ಚಿತ್ರ ಮಂದಿರದಲ್ಲಿ ಅಖಿಲ ಕರ್ನಾಟಕ ಕ್ರಾಂತಿವೀರ ಶೂರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿಯಿಂದ ರಾಯಣ್ಣನ ೧೯೦ನೇ ಪುಣ್ಯಸ್ಮರಣೆ ಅಂಗವಾಗಿ ನಡೆಯಲಿರುವ ರಾಯಣ್ಣನ ೨೨ನೇ ವರ್ಷದ ಜ್ಯೋತಿ ಯಾತ್ರೆ ಕುರಿತು ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಯುವಕರಲ್ಲಿ ದೇಶಭಕ್ತಿ, ಸ್ವಾತಂತ್ರö್ಯ ಹೋರಾಟಗಾರರ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಕಳೆದ ೨೧ ವರ್ಷಗಳಿಂದ ಸರ್ಕಾರದ ನೆರವಿಲ್ಲದೆ ಜಾತ್ಯಾತೀತ, ರಾಜಕೀಯ ರಹಿತವಾಗಿ ರಾಯಣ್ಣನ ಜ್ಯೋತಿ ಯಾತ್ರೆ ನಡೆಸಲಾಗುತ್ತಿದೆ. ಈ ಕಾರ್ಯದಲ್ಲಿ ಎಲ್ಲರು ತೊಡಗಿಸಿಕೊಳ್ಳಬೇಕು. ಕನ್ನಡಿಗರ ಸ್ವಾಭಿಮಾನಕ್ಕೆ ಪದೇಪದೇ ಧಕ್ಕೆ ಉಂಟು ಮಾಡುತ್ತಿರುವ ಮರಾಠಿಗರ ನಡೆ, ಮಹಾರಾಷ್ಟç ಸಿಎಂ ಉದ್ಭವ ಠಾಕ್ರೆ ಹೇಳಿಕೆಯನ್ನು ಸಮಿತಿಯಿಂದ ತೀವ್ರವಾಗಿ ಖಂಡಿಸಲಾಗುವುದು’ ಎಂದರು.
ಸAಸ್ಥಾಪಕರಾದ ಈಶ್ವರ ಹೋಟಿ, ಮಹಾಂತೇಶ ತುರಮರಿ, ಗೌರವ ಅಧ್ಯಕ್ಷ ಕುಮಾರ ದೇಶನೂರ, ಅಧ್ಯಕ್ಷ ರಾಜು ಸೊಗಲ, ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಪ್ರಮೋದಕುಮಾರ ವಕ್ಕುಂದಮಠ, ಮಡಿವಾಳಪ್ಪ ಹೋಟಿ, ಡಾ.ಚಿದಂಬರ ಕುಲಕರ್ಣಿ, ರಾಜು ಕುಡಸೋಮಣ್ಣವರ, ಶ್ರೀಶೈಲ ಯಡಳ್ಳಿ, ನಿಂಗನಗೌಡ ದೊಡಗೌಡರ, ಡಾ.ಅಶೋಕ ದೊಡವಾಡ, ಸಿ.ಕೆ. ಯರಗಟ್ಟಿಮಠ, ಡಾ.ಎಸ್.ಎಸ್. ದೇವಲಾಪೂರ, ನಿವೃತ್ತ ಯೋಧ ವೀರೂ ದೊಡ್ಡವೀರಪ್ಪನವರ, ಶಿವು ಕೋಲಕಾರ ಮಾತನಾಡಿದರು. ವಿ.ಎಸ್.ಕೋರಿಮಠ ಸಾನ್ನಿಧ್ಯವಹಿಸಿದ್ದರು.
ಕುರುಬ ಸಮಾಜ ಮುಖಂಡ ಮಾರುತಿ ಶರೆಗಾರ, ಲಕ್ಷö್ಮಣ ಸೋಮನಟ್ಟಿ, ಶಂಕರ ಪಟಾತ, ನಿಂಗಪ್ಪ ಕುರಿ, ಮಹಾಂತೇಶ ಹೊಸಮನಿ, ನಾಗರಾಜ ಮರಕುಂಬಿ, ಮಹಾಂತೇಶ ಅಕ್ಕಿ, ಉಳವಪ್ಪ ಶಿಂತ್ರಿ, ಶಿವಾನಂದ ಬಡ್ಡಿಮನಿ, ನಾಗೇಶ ಯಕ್ಕುಂಡಿ, ಮಹಾಂತೇಶ ಜಿಗಜಿನ್ನಿ, ಮಲ್ಲಿಕಾರ್ಜುನ ಉಳ್ಳೇಗಡ್ಡಿ, ಸಂತೋಷ ಕೊಳವಿ, ಈರಪ್ಪ ಕಾಡೇಶನವರ, ಬಸವರಾಜ ದೊಡಮನಿ, ವಿಠ್ಠಲ ಅಜ್ಜನಕಟ್ಟಿ, ಕುಮಾರ ದಳವಾಯಿ, ಮಲ್ಲಿಕಾರ್ಜುನ ಸೊಗಲ, ವಿಠ್ಠಲ ಹಂಪಿಹೊಳಿ, ಶ್ರೀಶೈಲ ಹಂಪಿಹೊಳಿ, ಸಣ್ಣಮಡಿವಾಳಪ್ಪ ಹೋಟಿ, ಕಾಶೀಮ ಜಮಾದಾರ, ಹಾಗೂ ಅನೇಕರು ಇದ್ದರು. ರಾಜು ಸೊಗಲ ಸ್ವಾಗತಿಸಿದರು. ರವಿ ಹುಲಕುಂದ ನಿರೂಪಿಸಿದರು. ರಾಜು ಬಡಿಗೇರ ವಂದಿಸಿದರು.


Leave a Reply