Uncategorized

ಸಂಚಾರ ನಿಯಮಗಳ ಪಾಲನೆ ಅತೀ ಅವಶ್ಯಕ : ಹೇಮಾವತಿ


ಗೋಕಾಕ: ಅಪಘಾತಗಳ ಸಂಖ್ಯೆ ಕಡಿಮೆ ಮಾಡಬೇಕಾದರೆ ಸಂಚಾರ ನಿಯಮಗಳ ಪಾಲನೆ ಅತೀ ಅವಶ್ಯಕವಾಗಿದೆ ಎಂದು ಗೋಕಾಕ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಟಿ.ಜಿ.ಹೇಮಾವತಿ ಹೇಳಿದರು.
ಬುಧವಾರದಂದು ಸಹಾಯಕ ಪ್ರಾದೇಶಿಕ ಸಾರಿಗೆ ಕಾರ್ಯಾಲಯದಲ್ಲಿ ತಾಲೂಕಾಡಳಿತ,ಪೊಲೀಸ ಇಲಾಖೆ, ಸಾರಿಗೆ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ೩೨ನೇ ರಾಷ್ಟಿçÃಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲಿ ಸಂಚಾರ ನಿಯಮಗಳ ಬಗ್ಗೆ ಮತ್ತು ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದು ತಿಂಗಳ ಪರ್ಯಂತ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅವಸರವೇ ಅಪಘಾತಕ್ಕೆ ಕಾರಣವಾಗುತ್ತದೆ. ಅತೀಯಾದ ವೇಗ ಸಂಚಾರ ಜೀವಕ್ಕೆ ಕುತ್ತು ತರುತ್ತದೆ. ರಸ್ತೆ ಸುರಕ್ಷತೆಯ ಜೊತೆಗೆ ಸಂಚಾರ ನಿಯಮ ಪಾಲಿಸುವುದು ಅವಶ್ಯವಾಗಿದೆ ಎಂದರು.
ಹಿರಿಯ ಮೋಟಾರು ವಾಹನಗಳ ನಿರೀಕ್ಷಕ ಎಸ್.ಆರ್.ಮರಲಿಂಗಣ್ಣವರ ಮಾತನಾಡಿ ಸಂಚಾರ ನಿಯಮಗಳ ಪಾಲನೆಯೊಂದಿಗೆ ವಾಹನಗಳ ವಿಮೆ ಮತ್ತು ಚಾಲನಾ ಪರವಾನಿಗೆ ಪಡೆದುಕೊಳ್ಳಬೇಕು. ಚಾಲಕರು ಸಮವಸ್ತç ಧರಿಸಬೇಕು. ವಾಹನ ಚಾಲನೆ ಮಾಡುವಾಗ ಮೊಬೈಲ ಬಳಸಬೇಡಿ ಮತ್ತು ಸೀಟ್ ಬೆಲ್ಟ್ ಧರಿಸಬೇಕು. ಅಪಘಾತವಾಗುವುದನ್ನು ತಡೆ ಹಿಡಿಯಬೇಕು. ನಿಧಾನವೇ ಪ್ರಧಾನ ಎಂಬAತೆ ಎಲ್ಲರಲ್ಲಿಯೂ ಸಂಚಾರ ನಿಯಮದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾರಿಗೆ ಕಚೇರಿ ಅಧೀಕ್ಷಕ ಎಸ್.ಎಚ್.ಕರಿಗಾರ, ಪ್ರಥಮ ದರ್ಜೆ ಸಹಾಯಕ ಮಂಜುನಾಥ ಉಪ್ಪಾರ ಸೇರಿದಂತೆ ಸಹಾಯಕ ಪ್ರಾದೇಶಿಕ ಸಾರಿಗೆ ಕಾರ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.


Leave a Reply