Belagavi

ಫೆ.೧೮ ರವರೆಗೆ ರಸ್ತೆ ಸುರಕ್ಷತಾ ಮಾಸಿಕ -೨೦೨೧ ಆಚರಣೆ


ಬೆಳಗಾವಿ, ಜ. ೨೦ : ರಾಷ್ಟಿçÃಯ ಸುರಕ್ಷತಾ ಮಾಸಿಕವನ್ನು ಆಚರಿಸುತ್ತಿರುವ ಅವಧಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದ ಎಲ್ಲ ಘಟಕಗಳಲ್ಲಿ ಜ.೧೮ ರಿಂದ ಫೆ.೧೭ ರವರೆಗೆ ರಸ್ತೆ ಸುರಕ್ಷತಾ ಮಾಸಿಕದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯವು ತಿಳಿಸಿದ್ದಾರೆ.
ಪ್ರತಿ ವರ್ಷ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವವರ ಹಾಗೂ ಅಂಗವಿಕಲರಾಗುತ್ತಿರುವವರ ಸಂಖ್ಯೆ ಅಧಿಕಗೊಳ್ಳುತ್ತಿದ್ದು, ೨೦೧೬ ರಿಂದ ೨೦೨೧ ರವರೆಗಿನ ಅವಧಿಯಲ್ಲಿ ವಿಭಾಗದಲ್ಲಿ ೨೫೧ ಅಪಘಾತಗಳು ಉಂಟಾಗಿದ್ದು ಈ ಅಪಘಾತದಲ್ಲಿ ೭೫ ಜನರು ಮೃತಪಟ್ಟಿರುತ್ತಾರೆ. ಸಂಸ್ಥೆಯ ವಾಹನ, ಬೈಕ ಸವಾರ, ಅನ್ಯ ವಾಹನ ಸೇರಿ ಒಟ್ಟು ೪೪೩ ಜನ ಗಾಯಗೊಂಡಿರುತ್ತಾರೆ. ಅಪಘಾತಗಳಲ್ಲಿ ಮೃತಪಟ್ಟ ವಾರಸುದಾರರಿಗೆ ಮತ್ತು ಗಾಯಾಳುಗಳಿಗೆ ಒಟ್ಟು ೮೧.೪೩ ಕೋಟಿ ಅಪಘಾತ ಪರಿಹಾರ ಧನ ನೀಡಲಾಗುವುದು.
ಈ ಹಿನ್ನಲೆಯಲ್ಲಿ ಸಾರಿಗೆ ಸಂಸ್ಥೆಯ ಚಾಲಕ/ಚಾಲಕ-ಕಂ-ನಿರ್ವಾಹಕ/ನಿರ್ವಾಹಕ ಸಿಬ್ಬಂದಿಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ಮಹತ್ವವನ್ನು ಬಿಂಬಿಸಲು ಹಾಗೂ ರಸ್ತೆ ಅಪಘಾತಗಳನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತೆ ಕ್ರಮಗಳ
ಬಗ್ಗೆ ಮನವರಿಕೆ ಮಾಡಿಕೊಡುವ ಮುಖಾಂತರ ರಸ್ತೆ ಸುರಕ್ಷತೆ-ಜೀವನ ರಕ್ಷೆ ಎಂಬ ಧ್ಯೇಯದೊಂದಿಗೆ ರಸ್ತೆ ಸುರಕ್ಷತಾ ಮಾಸಿಕ -೨೦೨೧ ನ್ನು ಆಚರಿಸಲಾಗುತ್ತಿದೆ ಎಂದು ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply