Koppal

ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಅವಶ್ಯಕತೆಗಳನ್ನು ಒದಗಿಸಿ: ಕೆ.ಎಂ.ಮಲ್ಲಿಕಾರ್ಜುನ


ಕೊಪ್ಪಳ, ಜ.೨೦ : ಪ್ರತಿಯೊಬ್ಬ ಮಹಿಳೆಯರಿಗೆ ಎಲ್ಲಾ ರಂಗದಲ್ಲಿ ಭಾಗವಹಿಸಲು ಅವಕಾಶ ಇರುವುದರಿಂದ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರ ಜೊತೆಗೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾಗಿ ಅವಶ್ಯಕತೆಗಳನ್ನು ಒದಗಿಸಬೇಕು ಎಂದು ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ.ಮಲ್ಲಿಕಾರ್ಜುನ ಹೇಳಿದರು.
ಬಹದ್ದೂರಬಂಡಿ, ಹುಲಿಗಿ ಮತ್ತು ಕೋಳೂರು ಗ್ರಾ.ಪಂ. ವತಿಯಿಂದ ಮಂಗಳವಾರ (ಜ. ೧೯) ದಂದು ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಹದ್ದೂರಬಂಡಿ ಗ್ರಾ.ಪಂ. ವ್ಯಾಪ್ತಿಯ ಬಿ.ಹೊಸಳ್ಳಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನಡೆದ ರಾಷ್ಟಿçÃಯ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ವೈಯಕ್ತಿಕ ಶುಚಿತ್ವ ಹಾಗು ಋತುಚಕ್ರ ನಿರ್ವಹಣೆ ಕುರಿತು ಜಾಗೃತಿ ಕಾಯಕ್ರಮದಲ್ಲಿ ಕೂಲಿಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತ ಇಡೀ ವಿಶ್ವದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಸ್ಥಾನ ನೀಡಿದ ಪ್ರಜಾಪ್ರಭುತ್ವ ದೇಶವಾಗಿದೆ. ಜನವರಿ-೨೪ ರಂದು ರಾಷ್ಟಿçÃಯ ಹೆಣ್ಣು ಮಕ್ಕಳ ದಿನಾಚರಣೆ ಕುರಿತು ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.
ಜಿಲ್ಲಾ ಎಸ್‌ಬಿಎಂ ಸಮಾಲೋಚಕರಾದ ಬಸಮ್ಮ ಹುಡೇದ ಮಾತನಾಡಿ, ಮಹಿಳೆಯರು ಋತುಚಕ್ರ ಸಂದರ್ಭದಲ್ಲಿ ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶೌಚಕ್ಕೆ ಹೊರಗಡೆ ಹೋಗುವುದರಿಂದ ಅನೇಕ ರೋಗಗಳು ಹರಡುವ ಸಾಧ್ಯತೆ ಶೇ.೮೦ ರಷ್ಟು ಇರುತ್ತದೆ. ಹೊರಗಡೆ ಹೋಗಿ ಬಂದ ನಂತರ ನಾವುಗಳು ಕೈ-ಕಾಲು ಸರಿಯಾಗಿ ತೊಳೆದುಕೊಳ್ಳದೇ ಇರುವುದರಿಂದ ಅನೇಕ ಕಿಟಾಣುಗಳು ನಮ್ಮ ದೇಹದ ಒಳಕ್ಕೆ ಹೋಗಿ ಅಲ್ಲಿ ಅನೇಕ ರೋಗಗಳ ಹುಟ್ಟಿಗೆ ಕಾರಣವಾಗುತ್ತದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪ್ರತಿಯೊಂದು ಕುಟುಂಬ ವೈಯಕ್ತಿಕ ಶೌಚಾಲಯ ಹೊಂದಿದ್ದು, ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡುವುದರಿಂದ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ. ಅಲ್ಲದೇ ಗ್ರಾಮದ ಅನೈರ್ಮಲ್ಯವನ್ನು ತಡೆಗಟ್ಟಬಹುದು ಎಂದರು.
ಬಹದ್ದೂರಬಂಡಿ ಪಿಡಿಒ ಜ್ಯೋತಿ ರಡ್ಡೇರ ಮಾತನಾಡಿ, ಪ್ರತಿಯೊಬ್ಬ ಮಹಿಳಾ ಕೂಲಿಕಾರರು ತಮ್ಮ ಮನೆಯಲ್ಲಿ ಪ್ರತಿ ಹೆಣ್ಣು ಮಗುವಿಗೆ ಗೌರವದಿಂದ ಕಾಣಬೇಕು ಮತ್ತು ಉನ್ನತ ಶಿಕ್ಷಣ ಒದಗಿಸಲು ಹಿಂಜರಿಯಬಾರದು ಎಂದು ಹೇಳಿದರು.
ಹುಲಿಗಿ ಗ್ರಾ.ಪಂ. ಪಿಡಿಒ ಸಜ್ಜನರ ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕಿ(ಗ್ರಾ.ಉ) ಸೌಮ್ಯ ಕೆ., ತಾ.ಪಂ., ಜಿಲ್ಲಾ ಎಸ್‌ಬಿಎಂ, ಐಇಸಿ ಸಮಾಲೋಚಕ ಮಾರುತಿ ನಾಯಕರ್, ನರೇಗಾ ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಬಸವರಾಜ, ತಾಂತ್ರಿಕ ಸಹಾಯಕರಾದ ಮಹಾಂತೇಶ ನರೇಗಲ್, ರಮೇಶಕುಮಾರ, ಪ್ರವೀಣ ಗದಗ ಮತ್ತು ಬೇರ್‌ಫೂಟ್ ಟೆಕ್ನಿಷಿಯನ್‌ಗಳು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ, ಕೂಲಿಕಾರರು ಹಾಜರಿದ್ದರು.


Leave a Reply