vijayapur

ಸಾರ್ವಜನಿಕರ ತಿಳುವಳಿಕೆಗಾಗಿ ಅಂತಿಮ ಮತದಾರರ ಪಟ್ಟಿ-೨೦೨೧ ಪ್ರಕಟ


ವಿಜಯಪುರ : ಜ.೨೦ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ – ೨೦೨೧ ರ ವೇಳಾಪಟ್ಟಿಯಂತೆ ದಿನಾಂಕ : ೧೮-೦೧-೨೦೨೧ ರಂದು ಜಿಲ್ಲೆಯಾದ್ಯಂತ ಎಲ್ಲ ಮತಕ್ಷೇತ್ರ, ತಾಲೂಕು, ಹೋಬಳಿ ಮತಗಟ್ಟೆ ಮಟ್ಟದಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ ಅಂತಿಮ ಮತದಾರರ ಪಟ್ಟಿ ೨೦೨೧ ನ್ನು ಪ್ರಚುರಪಡಿಸಲಾಗಿದ್ದು, ಅದರಂತೆ ಅಂತಿಮ ಮತದಾರರ ಪಟ್ಟಿ-೨೦೨೧ ರಂತೆ ಮತದಾರರ ವಿವರ ಈ ಕೆಳಗಿನಂತಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ಹೇಳಿದ್ದಾರೆ.
ಜಿಲ್ಲೆಯ ಮುದ್ದೇಬಿಹಾಳದಲ್ಲಿ ಪುರುಷ ಮತದಾರರು – ೧೦೮೬೬೩, ಮಹಿಳಾ ಮತದಾರರು-೧೦೫೦೬೨, ಇತರೆ-೩೧ ಹೀಗೆ ಒಟ್ಟು ೨೧೩೭೫೬ ಮತದಾರಿದ್ದಾರೆ. ಅದರಂತೆ ದೇ.ಹಿಪ್ಪರಗಿಯಲ್ಲಿ ಪುರುಷ ಮತದಾರರು – ೧೦೯೭೦೯, ಮಹಿಳಾ ಮತದಾರರು-೧೦೩೫೪೫, ಇತರೆ-೩೧ ಹೀಗೆ ಒಟ್ಟು ೨೧೩೨೮೫ ಮತದಾರಿದ್ದಾರೆ.
ಬ.ಬಾಗೇವಾಡಿಯಲ್ಲಿ ಪುರುಷ ಮತದಾರರು – ೧೦೫೭೫೧, ಮಹಿಳಾ ಮತದಾರರು-೧೦೧೧೧೬, ಇತರೆ-೧೦ ಹೀಗೆ ಒಟ್ಟು ೨೦೬೮೭೭ ಮತದಾರಿದ್ದಾರೆ. ಬಬಲೇಶ್ವರದಲ್ಲಿ ಪುರುಷ ಮತದಾರರು – ೧೦೬೬೫೨, ಮಹಿಳಾ ಮತದಾರರು-೧೦೨೩೯೩, ಇತರೆ-೯ ಹೀಗೆ ಒಟ್ಟು ೨೦೯೦೫೪ ಮತದಾರಿದ್ದಾರೆ. ವಿಜಯಪುರ ನಗರದಲ್ಲಿ ಪುರುಷ ಮತದಾರರು – ೧೨೮೫೭೧, ಮಹಿಳಾ ಮತದಾರರು-೧೨೮೯೯೦, ಇತರೆ-೧೦೪ ಹೀಗೆ ಒಟ್ಟು ೨೫೭೬೬೫ ಮತದಾರಿದ್ದಾರೆ.
ನಾಗಠಾಣದಲ್ಲಿ ಪುರುಷ ಮತದಾರರು – ೧೩೪೯೮೬, ಮಹಿಳಾ ಮತದಾರರು-೧೨೭೧೪೭, ಇತರೆ-೨೪ ಹೀಗೆ ಒಟ್ಟು ೨೬೨೧೭೫ ಮತದಾರಿದ್ದಾರೆ. ಇಂಡಿಯಲ್ಲಿ ಪುರುಷ ಮತದಾರರು – ೧೨೪೪೭೬, ಮಹಿಳಾ ಮತದಾರರು-೧೧೬೨೭೮, ಇತರೆ-೨೪ ಹೀಗೆ ಒಟ್ಟು ೨೩೩೫೮೧ ಮತದಾರಿದ್ದಾರೆ. ಸಿಂದಗಿಯಲ್ಲಿ ಪುರುಷ ಮತದಾರರು – ೧೨೦೪೯೪, ಮಹಿಳಾ ಮತದಾರರು-೧೧೩೦೫೪, ಇತರೆ-೩೩ ಹೀಗೆ ಒಟ್ಟು ೨೩೩೫೮೧ ಮತದಾರಿದ್ದಾರೆ.
ಹೀಗೆ ಒಟ್ಟು ಜಿಲ್ಲೆಯಲ್ಲಿ ಪುರುಷ ಮತದಾರರು – ೯೩೯೩೦೨, ಮಹಿಳಾ ಮತದಾರರು-೮೯೭೫೮೫, ಇತರೆ-೨೬೬ ಹೀಗೆ ಒಟ್ಟು ೧೮೩೭೧೫೩ ಮತದಾರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply