Belagavi

ಜಿಲ್ಲಾ ಪಂಚಾಯತ, ಬೆಳಗಾವಿ ಯೋಜನಾ ಹಣಕಾಸು ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಸಭೆ


ಬೆಳಗಾವಿ:- ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ದಿನಾಂಕ:೨೦-೦೧-೨೦೨೧ ರಂದು ಜಿಲ್ಲಾ ಪಂಚಾಯತ ಯೋಜನಾ, ಹಣಕಾಸು ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿಯ ಅಧ್ಯಕ್ಷರಿಗೆ ಹಾಗೂ ಎಲ್ಲ ಸದಸ್ಯರಿಗೆ ಸ್ವಾಗತ ಕೋರಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ.ಆಶಾ.ಪ್ರ.ಐಹೊಳೆ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ ಯೋಜನಾ, ಹಣಕಾಸು ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಸಭೆ ಪ್ರಾರಂಭಿಸಲಾಯಿತು. ಈ ಸಭೆಯಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗಿರುವ ಬಗ್ಗೆ ವಿಚಾರಿಸಿ ಅನುಮತಿ ಇಲ್ಲದೇ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಅಧ್ಯಕ್ಷರು ಹಾಗೂ ಸಮಿತಿಯ ಸದಸ್ಯರು ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಹಾಗೂ ಮುಖ್ಯ ಲೆಕ್ಕಾಧಿಕಾರಿಗಳು ಪರುಶುರಾಮ ದುಡಗುಂಟಿ ಇವರಿಗೆ ಸೂಚಿಸಿದರು ಹಾಗೂ ಎಲ್ಲ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ವರದಿ ಪುಸ್ತಕವನ್ನು ಸಭೆಯ ನೋಟಿಸ್‌ನಲ್ಲಿ ತಿಳಿಸಿರುವ ದಿನಾಂಕದೊಳಗಡೆ ನೇರವಾಗಿ ಸದಸ್ಯರಿಗೂ ೧ (ಒಂದು) ಪ್ರತಿ ತಲುಪಿಸುವ ವ್ಯವಸ್ಥೆ ಕಟ್ಟು ನಿಟ್ಟಾಗಿ ನಡೆಯಬೇಕೆಂದು ಶ್ರೀ.ಗುರಪ್ಪ ಶಿವನಿಂಗ ದಾಶ್ಯಾಳ, ಜಿ.ಪಂ ಸದಸ್ಯರು, ಇವರು ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಮುಂದುವರೆದು ಮುಖ್ಯ ಲೆಕ್ಕಾಧಿಕಾರಿಗಳಾದ ಪರುಶುರಾಮ ದುಡಗುಂಟಿ ಮಾತನಾಡಿ ಎಲ್ಲ ಇಲಾಖೆಯ ಪ್ರಗತಿ ಪರಿಶೀಲಿಸಲಾಯಿತು ಮತ್ತು ಪ್ರಗತಿ ಕುಂಠಿತ ಇಲಾಖೆಯವರಿಗೆ ಕಟ್ಟುನಿಟ್ಟಾಗಿ ಪ್ರಗತಿ ಸಾಧಿಸಲು ಸೂಚನೆ ನೀಡಲಾಯಿತು ಮುಖ್ಯವಾಗಿ ಶ್ರೀ.ಗುರಪ್ಪ ಶಿವನಿಂಗ ದಾಶ್ಯಾಳ ಜಿ.ಪಂ ಸದಸ್ಯರು ಇವರು ಮೀನುಗಾರಿಕಾ ಇಲಾಖೆಯ ಕೆರೆಯ ಟೆಂಡರ್ ಕುರಿತು ವಿವರ ಮಾಹಿತಿ ನೀಡಲು ಸೂಚಿಸಿದರು ಹಾಗೂ ತೋಟಗಾರಿಕೆ ರೈತ ಉತ್ಪಾದಕರ ಸಂಘಗಳ(ಈಖಿಔ) ಕುರಿತು ತೆಲಸಂಗ ಗ್ರಾಮದ ತೋಟಗಾರಿಕೆ ರೈತ ಉತ್ಪಾದಕರ ಸಂಘ (ಈಖಿಔ) ಮುಚ್ಚಿಹೊಗಿದ್ದು ಅದನ್ನು ಪುನಃ ಪ್ರಾರಂಭ ಕುರಿತು ಕ್ರಮ ವಹಿಸಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ತದನಂತರ ಶ್ರೀ.ಜೀತೇಂದ್ರ ಟೋಪಣ್ಣಾ ಮಾದಾರ ಜಿ.ಪಂ ಸದಸ್ಯರು ಇವರು ತೋಟಗಾರಿಕಾ ಇಲಾಖೆಯಲ್ಲಿ Sಅ/Sಖಿ ಮಿಸಲಿರಿಸಿರುವ ಅನುದಾನದ ಮಾಹಿತಿ ಮತ್ತು ಫಲಾನುಭವಿಗಳ ಮಾಹಿತಿ ನೀಡಲು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು
ಅಧ್ಯಕ್ಷರು ಶ್ರೀಮತಿ.ಆಶಾ.ಪ್ರ.ಐಹೊಳೆ ಇವರು ಗ್ರಾ.ಕು.ನೀ ಮತ್ತು ನೈ ಇಲಾಖೆಯ ಚಿಕ್ಕೋಡಿ ವಿಭಾಗದ ಅಧಿಕಾರಿಗಳು ಸಭೆಗೆ ಹಾಜರಾಗದೆ ಮಾಹಿತಿಯನ್ನು ನೀಡದೆ ಅಲ್ಲದೆ ಜಿಲ್ಲೆಯ ಪ್ರಗತಿ ಬಗ್ಗೆ ಮತ್ತು ಖರ್ಚಿನ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲವಾದರಿಂದ ಅವರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದರು. ತದನಂತರ ಶ್ರೀ.ದೇಶಪಾಂಡೆ ರಮೇಶ ಭೀಮಾಜಿ, ಜಿ.ಪಂ ಸದಸ್ಯರು, ಇವರು ಹಿಂದಿನ ಸಾಲಿನಂತೆ ಪ್ರಸ್ತುತ ಸಾಲಿನ ಅನುದಾನ ವ್ಯಪಗತಗೊಳಿಸದೆ ಸರಿಯಾದ ಸಮಯಕ್ಕೆ ಬಿಲ್ಲುಗಳನ್ನು ತಯಾರಿಸಿ ಖರ್ಚು ಭರಿಸಿ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸದುಪಯೋಗ ಮಾಡಲು ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಯೋಜನಾ ಹಣಕಾಸು ಹಾಗೂ ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ.ಆಶಾ.ಪ್ರ.ಐಹೊಳೆ, ಇವರು ಎಲ್ಲ ಸದಸ್ಯರುಗಳಾದ ಶ್ರೀ.ಜೀತೇಂದ್ರ ಟೋಪಣ್ಣಾ ಮಾದಾರ, ಶ್ರೀ.ಗುರಪ್ಪ ಶಿವಲಿಂಗ ದಾಶ್ಯಾಳ, ಶ್ರೀ.ಕೃಷ್ಣಪ್ಪ ಬಾಲಪ್ಪ ಲಮಾಣಿ, ಶ್ರೀ.ದೇಶಪಾಂಡೆ ರಮೇಶ ಭೀಮಾಜಿ, ಶ್ರೀ.ಅನೀಲ ಪಾರೀಸಪ್ಪ ಮ್ಯಾಕಲಮರ್ಡಿ, ಶ್ರೀಮತಿ. ಶಿವಗಂಗಾ ಕೋಂ. ಉಮೇಶ ಸಭೆಯ ಕಾರ್ಯದರ್ಶಿಗಳಾದ ಶ್ರೀ.ಪರುಶುರಾಮ ದುಡಗುಂಟಿ ಹಾಗೂ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Leave a Reply