Belagavi

ಕೋವಿಡ್ 19 ಲಸಿಕೆಗೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ ಸದಸ್ಯ


ಯರಗಟ್ಟಿ: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಯರಗಟ್ಟಿಯಲ್ಲಿರಂದು ಕೋವಿಡ್ 19 ಲಸಿಕಾಕರಣದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸದರಿ ಉದ್ಘಾಟನೆಯನ್ನು ಯರಗಟ್ಟಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಅಜೀತಕುಮಾರ ದೇಸಾಯಿ ಇವರು ನೇರವೆರಿಸಿ ಕೊಟ್ಟರು.
ಸದರಿ ಸಮಾರಂಭದಲ್ಲಿ ಶಿವಾನಂದ ಕರಿಗೊನ್ನವರ, ಮುಖ್ಯ ವೈದ್ಯಾಅಧಿಕಾರಿಗಳಾದ ಡಾ.ಬಿ.ಎಸ್.ಬಳ್ಳೂರ, ಡಾ. ಸ್ವರೂಪಾ ಬಿರಾದಾರ, ಡಾ.ರಮಾಶ್ರೀ ಕಣಗಲಿ, ಮಾಂತೇಶ. ಕತ್ತಿ, ಮಂಜುನಾಥ ಸಿಂಗನ್ನವರ, ಮೋಯಿನುದ್ದಿನ,
ಪ್ರಕಾಶ ಮಾಂಗ, ರಜನಿಕಾಂತ್, ವಾಯ್.ಎಸ್.ಜಾಂಬೋಟಿ,
ಸಮೀರ್ ಗೋರೆಕಾನ,
ಸುನೀಲ.ಕಾಶನ್ನವರ,
ಶ್ರೀದೇವಿ ಹಾವನ್ನವರ, ಎನ್.ಎಂ.ಹಾರೂಗೊಪ್ಪ.ಆಶಾಕಾರ್ಯಕರ್ತೆಯರು.ಇತರರು ಹಾಜರಿದ್ದರು.

ಕೋವಿಡ್ 19 ನಿಯಂತ್ರಣ ದ ಪ್ರಯುಕ್ತ ಸರ್ಕಾರದ ಆದೇಶದ ಪ್ರಕಾರ ಸಮುದಾಯದ ಆರೋಗ್ಯ ಕೇಂದ್ರ ದ ಸಿಬ್ಬಂದಿಯ ವರಿಗೆ ಆಶಾಕಾರ್ಯಕರ್ತೆಯರಿಗೆ.ಅಂಗನವಾಡಿ ಸಿಬ್ಬಂದಿಯ ವರಿಗೆ ಲಸಿಕೆ ನೀಡಲಾಗುವದು.

ಮುಂದಿನ ದಿನಗಳಲ್ಲಿ ಇತರೇ ಇಲಾಖೆ ಗಳ ಸಿಬ್ಬಂದಿಯ ವರಿಗೆ ಸಾರ್ವಜನಿಕ ರಿಗೆ ಕೋವಿಸಿಲ್ಡ ಲಸಿಕೆ ನೀಡಲಾಗುವದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಐ. ಆರ್. ಗಂಜಿ ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಮೊದಲು ಫಲಾನುಭವಿಗಳ
ನೊಂದಣಿ ಮಾಡಲಾಗುವದು. ಪರಿಶೀಲನೆ ಮಾಡಲಾಗುವದು. ಲಸಿಕೆ ಹಾಕುವದು. 30 ನಿಮಿಶ ನಿರಿಕ್ಷಣೆ ಮಾಡುವದು.ಮತ್ತು ನಂತರ ಹಂತಹಂತವಾಗಿ ಅನುಸರಣೆ ಮಾಡಲಾಗುವದು ಎಂದು ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಬಿ. ಎಸ್. ಬಳ್ಳೂರ ಹೇಳಿದರು.
ಮಾಂತೇಶ ಹಿರೇಮಠ ನಿರೂಪಣೆ ಮಾಡಿ. ಎಂ. ಟಿ. ಕುಂಬಾರ ಸ್ವಾಗತಿಸಿ.ಅಶೋಕ ನಿಲನ್ನವರ ವಂದಿಸಿದರು.
(ವರದಿ ಈರಣ್ಣಾ ಹುಲ್ಲೂರ ಯರಗಟ್ಟಿ)


Leave a Reply