Belagavi

ಕೇಂದ್ರ ಸರಕಾರದ ಉದಾಸೀನ : 26 ರಂದು ರೈತ ಹೋರಾಟಗಾರ ಪ್ರತಿಭಟನೆ


ಗೋಕಾಕ 20 : ರೈತ ವಿರೋಧಿ ಕಾನೂನುಗಳನ್ನು ಜಾರಿ ಮಾಡಲು ಮುಂದಾದ ಕೇಂದ್ರ ಸರಕಾರಕ್ಕೆ ದೇಶದ ಸವೋ೯ಚ್ಛ ನ್ಯಾಯಾಲಯ ಈ ಕಾನೂನುಗಳನ್ನು ತಡೆ ಹಿಡಿಯುವ ಮೂಲಕ ಐತಿಹಾಸಿಕ ತೀಪ೯ನ್ನು ನೀಡಿತ್ತು.ಹಾಗಿದ್ದರೂ ಸಹ ರೈತರ ಹೋರಾಟವನ್ನು ಉದಾಸೀನ ಮನೋಭಾವನೆಯಿಂದ ನೋಡುತ್ತಿರುವ ಕೇಂದ್ರ ಸರಕಾರವನ್ನು ಎಚ್ಚರಿಸಲು ಇದೇ ಜನೇವರಿ 26 ರಂದು ರೈತ ಹೋರಾಟಗಾರರು ದೊಡ್ಡ ಪ್ರಮಾಣದ ಪ್ರತಿಭಟನೆಗೆ ನಿಧ೯ರಿಸಿದ್ದಾರೆ. ಸಂಸತ್ತಿನ ಮುಂದೆ ನಡೆಯಲಿರುವ ರೈತರ ಹೋರಾಟವನ್ನು ಸವೋ೯ಚ್ಛ ನ್ಯಾಯಾಲಯದ ಮುಖಾಂತರ ತಡೆ ಹಿಡಿಯುವ ಸನ್ನಾಹ ಕೇಂದ್ರ ಸರಕಾರ ಮಾಡಿತ್ತು. ಆದರೆ ಇಂದು ಸವೋ೯ಚ್ಛ ನ್ಯಾಯಾಲಯವು ಜನೇವರಿ 26 ರ ರೈತ ಪ್ರತಿಭಟನಾ ಹೋರಾಟಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸುವ ಮೂಲಕ ರೈತರ ಮತ್ತು ಜನಸಾಮಾನ್ಯರ ಮೂಲಭೂತ ಹಕ್ಕನ್ನು ಎತ್ತಿ ಹಿಡಿದಿದೆ. ರೈತ ಪರ ನಿಲುವು ಮತ್ತು ಹೋರಾಟವನ್ನು ಸಹಾನುಭೂತಿಯಿಂದ ಪರಿಗಣಿಸಿ ನೂತನವಾಗಿ ಜಾರಿಗೆ ತರುತ್ತಿರುವ ರೈತ ವಿರೋಧಿ ಮಸೂದೆಗಳನ್ನು ಕೂಡಲೇ ಹಿಂಪಡೆಯಬೇಕೆಂದು ಸರಕಾರವನ್ನು ಜೆ.ಡಿ.ಎಸ್ ಮುಖಂಡರಾದ ಅಶೋಕ ಪೂಜಾರಿ ಅವರು ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.


Leave a Reply