karwar uttar kannada

“ಇ-ಜನ್ಮ” ತಂತ್ರಾಂಶ ನಿರ್ವಹಣೆ ತರಬೇತಿಗೆ ಹಾಜರಾತಿ ಕಡ್ಡಾಯ: ಡಿಸಿ


ಕಾರವಾರ :ಜನನ-ಮರಣ ನೋಂದಣಿ ಹಾಗೂ “ಇ-ಜನ್ಮ” ತಂತ್ರಾಂಶ ನಿರ್ವಹಣೆ ಕುರಿತು ಜನೆವರಿ ೧೫ ರಿಂದ ತರಬೇತಿ ಆಯೋಜಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕಾರಣ ನೀಡದೆ ಕಡ್ಡಾಯವಾಗಿ ತರಬೇತಿಗೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶ್‌ಕುಮಾರ ಕೆ. ಅವರು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜನನ, ಮರಣ ನೋಂದಣಿ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ್ಯಂತ ಜನನ, ಮರಣ ನೋಂದಣಿ ಕಾರ್ಯವು ಈಗಾಗಲೇ “ಇ-ಜನ್ಮ” ತಂತ್ರಾಂಶದಲ್ಲಿ ನಡೆಯುತ್ತಿದೆ. ಹೀಗಾಗಿ ಈ ತಂತ್ರಾಂಶದ ನಿರ್ವಹಣೆ ಕುರಿತು ಜ. ೧೫ ರಿಂದ ಜಿಲ್ಲೆಯಾದ್ಯಂತ
ತರಬೇತಿಯನ್ನು ಆಯೋಜಿಸಲಾಗಿರುವದರಿಂದ ಜನನ-ಮರಣ ನೋಂದಣಿ ಹಾಗೂ “ಇ-ಜನ್ಮ” ತಂತ್ರಾಂಶ ನಿರ್ವಹಣೆಗೆ ಒಳಪಡುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಇಓ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳು ಕಡ್ಡಾಯವಾಗಿ ತರಬೇತಿಗೆ ಹಾಜರಾಗಬೇಕು. ಜೊತೆಗೆ ಪ್ರತಿಯೊಬ್ಬರೂ ಕೊವಿಡ್-೧೯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದರು
ಡಾಟಾ ಎಂಟ್ರಿ ಆಪರೇಟರ್‌ಗಳು “ಇ-ಜನ್ಮ” ತಂತ್ರಾಂಶದಲ್ಲಿ ಜನನ-ಮರಣ ನೋಂದಣಿ ಸಮಯದಲ್ಲಿ ಎಂಟ್ರಿ ಮಾಡಿದ ಡಾಟಾವನ್ನು ನೋಂದಣಾಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸಿದ ನಂತರವೇ ಅನುಮತಿ ನಿಡಬೇಕು. ಸರಕಾರಿ, ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಬೆಂಗಳೂರಿನಲ್ಲಿರುವ ಜನನ-ಮರಣಗಳ ಮುಖ್ಯ ನೋಂದಣಾಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಜನನ-ಮರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಡಿಜಿಟಲ್ ಸಹಿಯೊಂದಿಗೆ ಸಾರ್ವಜನಿಕರಿಗೆ ವಿತರಿಸಬೇಕು. ಡಿಎಸ್‌ಸಿ ಎಕ್ಸ್ಪೈರ್ ಆಗುವ ಪೂರ್ವದಲ್ಲಿಯೇ ನವಿಕರಣ ಮಾಡಿಕೊಳ್ಳಲು ಕ್ರಮವಹಿಸಬೇಕು. ಜನನ-ಮರಣ ನೋಂದಣಿ ವ್ಯವಸ್ಥೆ ಸುವ್ಯವಸ್ಥಿತವಗಿ ನಡೆಯಲು ಹಾಗೂ ವಿವಿಧ ಇಲಾಖೆಗಳ ಸಮನ್ವಯತೆಯಿಂದ ನೊಂದಣಿ ಕಾರ್ಯ ಶೇ. ೧೦೦ರಷ್ಟು ಉತ್ತಮಪಡಿಸುವ ಉದ್ದೇಶದಿಂದ ಸರಕಾರ ತಾಲೂಕ ಮಟ್ಟದ ಸಮನ್ವಯ ಸಮೀತಿ ತಚಿಸಿದೆ. ಈ ಸಮಿತಿ ಪ್ರತಿ ತಿಂಗಳು ಸಭೆ ನಡೆಸುವ ಮೂಲಕ ಜನನ-ಮರಣ ಘಟನೆಗಳು ಬಿಟ್ಟು ಹೊಗದಂತೆ ಹಾಗೂ ಶೇ. ೧೦೦ರಷ್ಟು ನೊಂದಣಿಯಾಗುವಂತೆ ಕ್ರಮ ವಹಿಸಬೇಕು. ಜನನ-ಮರಣ ನೋಂದಣಿ ಮತ್ತು ಪ್ರಮಾನ ಪತ್ರ ನೀಡಿಕೆಗಳಲ್ಲಿ ಸಂಗ್ರಹಿಸಲಾಗುವ ಶುಲ್ಕವನ್ನು ರಾಜಸ್ವ ಲೆಕ್ಕಶೀರ್ಷಿಕೆ “೧೪೭೫”ಕ್ಕೆ ಜಮಾ ಮಾಡಬೇಕು. ೨೦೨೧ನೇ ಸಲಿಗೆ ಜನನ-ಮರಣ ಖಾಲಿ ನಮೂನೆಗಳನ್ನು ಈಗಾಗಲೇ ಪೂರೈಸಲಾಗಿದ್ದು ಮತ್ತು ಅವಶ್ಯಕತೆಯಿದ್ದಲ್ಲಿ ಸಂಬಂಧಪಟ್ಟ ಕಚೇರಿಗೆ ಬೇಡಿಕೆ ಸಲ್ಲಿಸಿ ಪಡೆದುಕೊಳ್ಳಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ., ಜಿಲ್ಲಾ ಪಂಚಾಯತಿ ಸಿಇಓ ಪ್ರಿಯಾಂಗಾ ಎಂ., ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.


Leave a Reply