BallaryState

ಅನುಮಾನಾಸ್ಪದ ರಸ್ತೆ ಅಪಘಾತ,ವರದಿಗಾರ ಮತ್ತು ತಮ್ಮನಿಗೆ ಗಂಭೀರ ಗಾಯ


 ಬಳ್ಳಾರಿ ; ತಾಲೂಕಿನ ಕೆ.ವೀರಪುರ ಗ್ರಾಮದ ನಿವಾಸಿ ಅಗಿರುವ ವಾರ್ತಾ ಪತ್ರಿಕೆಯ ವರದಿಗಾರರು.5/1/2021ರಂದ ರಾತ್ರಿ 11.30,ಸಮಯದಲ್ಲಿ ಬಳ್ಳಾರಿ ನಗರದಿಂದ ಗ್ರಾಮಕ್ಕೆ ತೆರಳುವಾಗ ಜೋಳದ ರಾಶಿ ಕುಂಟಮಾರೆಮ್ಮ ದೇವಸ್ಥಾನದ ಹತ್ತಿರ,ಕಾರು ಅಪಘಾತ ಸಂಭವಿಸಿದ್ದು, ರವಿಕುಮಾರ್, (ವರದಿಗಾರರು)ಅವರ ತಮ್ಮ ಚಿರಂಜೀವಿ ಗೆ ಗಂಭೀರ ಗಾಯಗಳಾಗಿದ್ದು,ಅವರನ್ನು ವಿಮ್ಸ್ ಆಸ್ಪತ್ರೆ ಗೆ ಚಿಕಿತ್ಸೆ ಗೆ ಹಗಿರಿ ಪೋಲಿಸರು, ಸಾರ್ವಜನಿಕರು ದಾಖಲಿಸಿದ್ದಾರೆ.

ಅನುಮಾನ ಆಸ್ಪದ ಅಪಘಾತವೆ!!??ಇತ್ತೀಚಿಗೆ  ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರವಿಕುಮಾರ್ ಪತ್ನಿ ಗೆ ಸೋಲು ಆಗಿತ್ತು. ಅವರು ಸೊಲಿಗೆ ಗ್ರಾಮದ ಕೆಲ,ಉನ್ನತಮಟ್ಟದ ಸಮುದಾಯಗಳು, ರವಿ ಅವರನ್ನು ನಮ್ಮ ಪ್ರಭಾವದಿಂದ ಸೋಲಿಸಿದ್ದಿವಿ

ಏಂದು,ಪ್ರಚಾರ ಮಾಡಿಕೊಂಡಿದ್ದಾರೆ
ಮಂಗಳವಾರ ರಾತ್ರಿ
ವೀರಪುರದಲ್ಲಿ ಇರುವ ಅವರ ತಾಯಿ ಮನೆ ಹತ್ತಿರ ಹೋಗಿ ಕೆಲ ದುಸ್ಕರ್ಮಿಗಳು , ಬಾಗಿಲು ಹಾಕಿ ಮಲಗಿದ್ದ ಮನಗೆ ಕಲ್ಲು ಗಳನ್ನು ಎಸೆದು ಅವರ ತಾಯಿಗೆ ಆವಾಚ್ಚ ಶಬ್ದಗಳಿಂದ ನಿಂದನೆ ಮಾಡಿ ನಿನ್ನ ಮಗ ನಮ್ಮನ್ನು ನೋಡಿಕೊಳ್ಳತ್ತಿನಿ ಅಂತಾರೆ ಅವನನ್ನ ಮುಗಿಸುತ್ತೀವಿ ಹುಷಾರ್ ಅಗಿ ಇರಬೇಕು, ನಾಲ್ಕು ಎಕರೆ ಭೂಮಿ ಹೋಗಲಿ ನೋಡಿಕೊಳ್ಳುತ್ತಿವಿ,ಎಂದು ಗಲಾಟೆ ಮಾಡಿದ್ದಾರೆ. ಅವಿಷಯವನ್ನು ತಾಯಿ ರಾತ್ರಿ ಮಕ್ಕಳಿಗೆ ತಿಳಿಸಿದ್ದಾರೆ. ತಕ್ಷಣವೇ ಇಬ್ಬರು ಅಣ್ಣಾ ತಮ್ಮಿ ಕಾರು ತೆಗೆದುಕೊಂಡು,ಸ್ವ ಗ್ರಾಮ ವೀರಾಪುರ ಕಡೆ ಪ್ರಯಾಣ ಮಾಡಿದ್ದಾರೆ. ಹಗಿರಿಬ್ರಿಡ್ಜ್ ಮೇಲೆ ಹೊಗುವ ಸಮಯದಲ್ಲಿ ಇನ್ನೂವಾ ಕಾರಿನಲ್ಲಿ ಬಂದ ನಾಲ್ಕು ಜನರು ಪುಂಡು ರೌಡಿಗಳು ವಾಹನವನ್ನು ಫಾಲೋ ಮಾಡಿಕೊಂಡು ಬಂದು ಕಾರಿಗೆ ಅಡ್ಡಲಾಗಿ ನಿಲ್ಲಿಸಿ ಹಲ್ಲೆ ಮಾಡಿದ್ದಾರೆ ರವಿ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಕಾಲ್ ಮಾಡಿದ್ದಾರೆ. ಎಸ್ಪಿ ಸಾಹೇಬರು. ಕಾರು ಸೈಡ್ ಹಾಕಿ ನಿಂತುಕೊಳ್ಳಿ, ಸ್ಟೇಷನ್ ಗೆ ಮಾಹಿತಿ ಕೊಡುತ್ತಿನಿ ಏಂದು ತಿಳಿಸಿದ್ದಾರೆ,ಏಂದು ರವಿಕುಮಾರ್ ತಿಳಿಸಿದ್ದಾರೆ.


Leave a Reply