Belagavi

ಕೋವಿಶೀಲ್ಡ ರೋಗನಿರೋಧಕ ಚುಚ್ಚುಮದ್ದು ನೀಡುವ ಕಾರ್ಯಕ್ರಮ

ಬೆಳಗಾವಿ:- ಮಾರಕ ಕೊರೊನಾ ರೋಗಕ್ಕೆ ಕೋವಿಶೀಲ್ಡ ರೋಗ ನಿರೋಧಕ ಚುಚ್ಚುಮದ್ದು ಸಂಜೀವಿಣಿಯಾಗಿದೆ ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಮಾರನಾಡುತಿತದ್ದರು. ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆದ ಕೋವಿಶೀಲ್ಡ ರೋಗನೀರೋಧಕ ಚುಚ್ಚುಮದ್ದು ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸುತ್ತ ಮಾತನಾಡುತ್ತಿದ್ದರು. ಕೊರೊನಾ ಎಂಬ ಮಾgಣಾಂತಿಕ ಇಡೀ ವಿಶ್ವವನ್ನೆ ನಡಿಗಿಸಿದ ಜನರಜೀವನವನ್ನು ಅಸ್ಥವ್ಯಸ್ಥವಾಗಿಸಿÀ ಹಲವಾರು ಜನರ ಜೀವನವನ್ನು ಬಲಿ ತೆಗೆದುಕೊಂಡ ಹೆಮ್ಮಾರಿ ಕಾಯಿಲೆಯಾಗಿದೆ. ಇಂತಹ ರೋಗಕ್ಕೆ ಸಂಜೀವಿನಿ ಎಂಬAತೆ ಕೋವಿಶೀಲ್ಡ ಚುಚ್ಚುಮದ್ದು ಬಂದಿದೆ. ನಮ್ಮ ಮಾನ್ಯ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಸತತ ಪ್ರಯತ್ನದಿಂದ ಇಂದು ನಮ್ಮ ನಿಮ್ಮೆಲ್ಲರನ್ನು ತಲುಪುವ ಹಂತಕ್ಕೆ ಬಂದಿದೆ. ಪ್ರಸಿದ್ದ ವೈದ್ಯರುಗಳ ನಿರಂತರ ಪರಿಶ್ರಮ ಹಾಗೂ ಸಂಶೋಧನೆಗಳ ಫಲಶ್ರುತಿಯಾಗಿ ನಮ್ಮೆಲ್ಲರಿಗೆ ತಲುಪಿದೆ ಇದನ್ನು ಅವರಿವರೆನ್ನದೇ ಎಲ್ಲ ಜಾತಿ ಧರ್ಮದವರೂ ಸ್ವೀಕರಿಸುವ ಮೂಲಕ ಸಮಾಜವು ಆರೋಗ್ಯದಿಂದಿರಲು ನಮ್ಮ ಪಾಲಿನ ಕರ್ತವ್ಯ ಮಾಡೋಣ ಎಂದು ಕರೆ ನೀಡಿದರು.
ಇದೇ ಸಂಧರ್ಭದಲ್ಲಿ ಕೆ ಎಲ್ ಇ ಶತಮಾನೋತಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಎಸ್ ಸಿ ಧಾರವಾಡ ಮಾತನಾಡುತ್ತ ಸತತ ಒಂದು ವರ್ಷಗಳ ಕಾಲ ನಮ್ಮ ಜೀವನದಲ್ಲಿ ಎಂದೂ ನೋಡಿರದ ಕೆಟ್ಟ ದಿನಗಳನ್ನು ತೋರಿಸಿದ ಕೋರೊನಾ ರೋಗವು ಎಲ್ಲರಲ್ಲಿಯೂ ಭೀತಿಯನ್ನು ಮನೆಮಾಡಿಸಿದೆ. ಆದರೆ ಇವತ್ತಿನದಿನ ಕೋರಾನಾ ಪ್ರಾರಂಭಿಕ ಹಂತದಿAದ ಇಂದಿನವರೆಗೆ ತಮ್ಮ ಜೀವದ ಹಂಗುತೊರೆದು ರೋಗಿಗಳಿಗೆ ಸೇವೆಸಲ್ಲಿಸಿದ ಆರೋಗ್ಯ ಕಾರ್ಯಕರ್ತರಿಗೆ ಇಂದು ಕೋವಿಶೀಲ್ಡ ವ್ಯಾಕ್ಸಿನ ನಮ್ಮೆಲ್ಲರಿಗೆ ಸಿಗುವಂತೆ ಮಾಡಿದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅನಂತ ಧನ್ಯವಾದಗಳನ್ನು ಎಂದು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೋಗನಿರೋಧಕ ಚುಚ್ಚುಮದ್ದು ಸ್ವೀಕರಿಸಿದ ಹಿರಿಯ ವೈದ್ಯಾಧಿಕಾರಿ ಡಾ. ಅಬುಬಾಕರ ಅಬ್ದುಲಕರೀಮ ಸೌದಾಗರ ಮಾತನಾಡುತ್ತ ೭೯ ವರ್ಷzವನಾದ ಇಂದು ಇಲ್ಲಿ ಕೋವಿಶೀಲ್ಡ ರೋಗನಿರೋಧಕ ಚುಚ್ಚುಮದ್ದನ್ನು ಸ್ವೀಕರಿಸಿದ್ದೇನೆ. ವೈಜ್ಞಾನಿಕವಾಗಿ ಪ್ರಮಾಣೀಕೃತವಾದ ಈ ಚುಚ್ಚುಮದ್ದು ಸುರಕ್ಷಿತವಾಗಿದೆ. ಇದರಿಂದ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮಗಳು ನನಗೆನಾಗಿಲ್ಲ ಆದ್ದರಿಂದ ಎಲ್ಲ ವರ್ಗ ಜಾತಿ ಧರ್ಮದವರು ಯಾವುದೇ ಭಯವಿಲ್ಲದೇ ಇದನ್ನು ಹಾಕಿಸಿಕೊಳ್ಳಬಹುದು ಎಂದು ತಿಳುವಳಿಕೆ ನೀಡಿದರು.
ಈ ಸಂಧರ್ಬದಲ್ಲಿ ಜಿಲ್ಲಾ ಆರೋಗ್ಯ ವiತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಮುನ್ಯಾಳ ಮಾತನಾಡುತ್ತ ಕಾಣದ ±ತ್ರು ಕೊರೊನಾವನ್ನು ತಡೆಗಟ್ಟಲು ಸರ್ಕಾರ ಜನರ ಹಿತಕ್ಕಾಗಿ ಸಾಕಷ್ಟು ಶ್ರಮವಹಿಸಿ, ಸಂಶೋಧನೆ ಕೈಗೊಂಡು, ಕೋಟ್ಯಾಂತರ ಹಣ ಖರ್ಚುಮಾಡಿ ವ್ಯಾಕ್ಸಿನ ತಂದಿದೆ ಭಯಬೀತರಾಗದೆ ಚುಚ್ಚುಮದ್ದನ್ನು ತೆಗೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಡಾ.ಗಡಾದ ಬೆಳಗಾವಿ ಜಿಲ್ಲೆಯ ಆರ್.ಸಿ.ಎಚ್ ಅಧಿಕಾರಿಗಳು ಒಟ್ಟಾರೆ ಉಸ್ತುವಾರಿ ವಹಿಸಿ ಯಶಸ್ವಿಯಾಗಿ ಲಸಿಕಾ ಕಾರ್ಯಕ್ರಮ ನಡೆಸಿದರು. ಕೋವಿಶೀಲ್ಡ ರೋಗನಿರೋಧಕ ಚುಚ್ಚುಮದ್ದು ನೀಡುವ ಕಾರ್ಯಕ್ರಮಈ ಸಂದರ್ಬದಲ್ಲಿ ಆಸ್ಪತ್ರೆಯ ೫೦ ಕ್ಕೂ ಅಧಿಕ ಸಿಬ್ಬಂದಿಗಳಿಗೆ ಉಚಿತವಾಗಿ ರೋಗನಿರೋಧಕ ಚುಚ್ಚುಮದ್ದನ್ನು ನೀqಲಾಯಿತು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker